ತುರ್ತುಪರಿಸ್ಥಿತಿಯ ಆ ಕರಾಳ ದಿನಗಳನ್ನು ಎಂದಿಗೂ ಮರೆಯಲಾಗದು.!

ತುರ್ತುಪರಿಸ್ಥಿತಿಗೆ ೪೬ ವರ್ಷಗಳು ಪೂರ್ಣಗೊಂಡ ನಿಮಿತ್ತ ಪ್ರಧಾನಮಂತ್ರಿಗಳಿಂದ ಕಾಂಗ್ರೆಸ್‍ನ ಮೇಲೆ ಟೀಕೆ !

(ಎಡದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ತುರ್ತು ಪರಿಸ್ಥಿತಿ ಘೋಷಿಸಿದ ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ)

ನವದೆಹಲಿ – ತುರ್ತುಪರಿಸ್ಥಿತಿಯ ಆ ಕರಾಳ ದಿನಗಳನ್ನು ಎಂದಿಗೂ ಮರೆಯಲಾಗದು. ವರ್ಷ ೧೯೭೫ ರಿಂದ ೧೯೭೭ ರ ಕಾಲಾವಧಿಯು ಅನೇಕ ಸಂಸ್ಥೆಗಳು ವ್ಯವಸ್ಥಿತ ಪದ್ದತಿಯಿಂದ ನಾಶ ಹೊಂದಿದವು. ನಾವು ಭಾರತೀಯ ಪ್ರಜಾಪ್ರಭುತ್ವದ ಉದ್ದೇಶವನ್ನು ಯಶಸ್ವಿಗೊಳಿಸಲು ಸರ್ವತೋಮುಖವಾಗಿ ಪ್ರಯತ್ನಿಸುವ ಸಂಕಲ್ಪವನ್ನು ಮಾಡೋಣ ಮತ್ತು ಸಂವಿಧಾನದಲ್ಲಿ ನಮೂದಿಸಿರುವ ಮೌಲ್ಯಗಳನ್ನು ಪಾಲಿಸೋಣ ಎಂದು ಟ್ವೀಟ್ ಮಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ.
೨೫ ಜೂನ ೧೯೭೫ ರಂದು ಆಗಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ಇಂದಿಗೆ ೪೬ ವರ್ಷಗಳಾಗಿರುವ ನಿಮಿತ್ತದಿಂದ ಪ್ರಧಾನಮಂತ್ರಿ ಮೋದಿಯವರು ಈ ಟ್ವೀಟ್ ಮಾಡಿದ್ದಾರೆ. ೨೫ ಜೂನ ೧೯೭೫ ರಿಂದ ೨೧ ಮಾರ್ಚ ೧೯೭೭ ಈ ಕಾಲಾವಧಿಯಲ್ಲಿ ದೇಶದಲ್ಲಿ ೨೧ ತಿಂಗಳುಗಳ ಕಾಲ ತುರ್ತುಪರಿಸ್ಥಿತಿಯು ಜಾರಿಯಲ್ಲಿತ್ತು.

ಇನ್‍ಸ್ಟಾಗ್ರಾಂ ಮೇಲಿನ ಒಂದು ಲಿಂಕ್ ಶೇರ್ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅದರಲ್ಲಿ, ‘ಕಾಂಗ್ರೆಸ್ ಪಕ್ಷವು ದೇಶದ ಪ್ರಜಾಪ್ರಭುತ್ವದ ನಿಯಮಗಳನ್ನು ಹೊಸಕಿ ಹಾಕಿತು. ತುರ್ತುಪರಿಸ್ಥಿತಿಯನ್ನು ವಿರೋಧಿಸಿದ ಮತ್ತು ಭಾರತೀಯ ಪ್ರಜಾಪ್ರಭುತ್ವವನ್ನು ರಕ್ಷಿಸುವ ಎಲ್ಲ ಮಹಾನ್ ಶ್ರೇಷ್ಠ ನಾಯಕರನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳುತ್ತೇವೆ’, ಎಂದು ಸಹ ಹೇಳಿದ್ದಾರೆ.