VHP Warning: ಆಡಳಿತವು ಮಸೀದಿಯನ್ನು ಕೆಡವಬೇಕು, ಇಲ್ಲದಿದ್ದರೆ ನಾವು ಕೆಡವುತ್ತೇವೆ ! – ವಿಶ್ವ ಹಿಂದೂ ಪರಿಷತ್ತಿನ ಎಚ್ಚರಿಕೆ

ಬಾಂದಾ (ಉತ್ತರ ಪ್ರದೇಶ)ದಲ್ಲಿ ಪುರಾತನ ಶಿವ ದೇವಸ್ಥಾನವಿರುವ ಬೆಟ್ಟದ ಮೇಲೆ ಮುಸ್ಲಿಮರಿಂದ ಅಕ್ರಮ ಮಸೀದಿ ನಿರ್ಮಾಣ

ಬಾಂದಾ (ಉತ್ತರ ಪ್ರದೇಶ) – ಇಲ್ಲಿನ ಬಾಂಬೇಶ್ವರ ಬೆಟ್ಟದ ಮೇಲೆ ಪುರಾತನ ಶಿವ ದೇವಸ್ಥಾನವಿದ್ದು, ಕರೋನಾ ಸಮಯದಲ್ಲಿ ಮುಸ್ಲಿಮರು ಅಲ್ಲಿ ಅಕ್ರಮ ಮಸೀದಿಯನ್ನು ನಿರ್ಮಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷ ಚಂದ್ರಮೋಹನ್ ಬೇಡಿಯವರು ಈ ಮಸೀದಿಯನ್ನು ಕೆಡವುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕರು ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ. ಶ್ರೀರಾಮನು ತನ್ನ ವನವಾಸದ ಸಮಯದಲ್ಲಿ ಈ ದೇವಸ್ಥಾನದಲ್ಲಿನ ಶಿವಲಿಂಗಕ್ಕೆ ಜಲಾಭಿಷೇಕವನ್ನು ಮಾಡಿದ್ದನು ಎಂಬ ಶ್ರದ್ಧೆ ಇದೆ.‌

1. ವಿಶ್ವ ಹಿಂದೂ ಪರಿಷತ್ತಿನ ಹೇಳಿಕೆಯಂತೆ ಜಿಹಾದಿಗಳು ಭಾರತದಲ್ಲಿ ಇಸ್ಲಾಮೀಕರಣವನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅಂತಹ ಚಟುವಟಿಕೆಗಳನ್ನು ವಿಶ್ವ ಹಿಂದೂ ಪರಿಷತ್ತು ಮತ್ತು ಬಜರಂಗದಳ ಸಹಿಸುವುದಿಲ್ಲ ಎಂದು ಹೇಳಿದೆ. ಮಸೀದಿಯನ್ನು ಕೂಡಲೇ ತೆಗೆಯದಿದ್ದರೆ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಅದನ್ನು ಕೆಡವುತ್ತದೆ. ಈ ಪುರಾತನ ದೇವಾಲಯದ ಅರ್ಚಕರು ಹಾಗೂ ದೇವಸ್ಥಾನದ ಸಮಿತಿಯ ಅಧ್ಯಕ್ಷ ಪುತ್ತನ್ ಮಹಾರಾಜರು ಕೂಡ ಈ ಮಸೀದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

2. ವಿಶ್ವ ಹಿಂದೂ ಪರಿಷತ್ ನ ಪದಾಧಿಕಾರಿ ಅಶೋಕ್ ಉಮರ್ ಮಾತನಾಡಿ, ಇಲ್ಲಿ 6ಕ್ಕೂ ಹೆಚ್ಚು ಗೋರಿಗಳನ್ನು ನಿರ್ಮಿಸಲಾಗಿದ್ದು ಶುಕ್ರವಾರ ಅಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಸುಮಾರು 6 ಗೋರಿಗಳನ್ನು ಸಹ ನಿರ್ಮಿಸಲಾಗಿದೆ ಮತ್ತು ಅಲ್ಲಿ ಶುಕ್ರವಾರದ ಪ್ರಾರ್ಥನೆಗಳನ್ನು ಮಾಡಲಾಗುತ್ತಿದೆ. ಮೊದಲು ಈ ಸ್ಥಳದಲ್ಲಿ ಮುಸ್ಲಿಮರು ವಾಸಿಸುತ್ತಿರಲಿಲ್ಲ; ಆದರೆ ಈಗ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ನೆಲೆಸಿದ್ದಾರೆ. ಮಸೀದಿ ಮತ್ತು ಗೋರಿಯನ್ನು ವಿಶ್ವ ಹಿಂದೂ ಪರಿಷತ್ ಕೆಡವಿದರೆ ಅದಕ್ಕೆ ಆಡಳಿತವೇ ಹೊಣೆ. ಅಕ್ರಮ ಮಸೀದಿ, ಗೋರಿ ನಿರ್ಮಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಕೂಡಲೇ ಜೈಲಿಗೆ ಹಾಕಬೇಕು.

3. ಇದನ್ನು ಸಕಾಲದಲ್ಲಿ ನಿಲ್ಲಿಸದಿದ್ದಲ್ಲಿ ಮಥುರಾ, ಕಾಶಿಯಂತಹ ಪರಿಸ್ಥಿತಿ ತಲೆದೋರಬಹುದು ಮತ್ತು ಗಂಭೀರ ಸಮಸ್ಯೆಯಾಗಬಹುದು ಎಂದು ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ದೀಪು ದೀಕ್ಷಿತ್ ಹೇಳಿದ್ದಾರೆ.

ಸಂಪಾದಕೀಯ ನಿಲುವು

ಪುರಾತನ ಮಂದಿರದ ಪಕ್ಕದಲ್ಲಿ ಮಸೀದಿ ಕಟ್ಟುವವರೆಗೂ ಹಿಂದೂಗಳು ಮತ್ತು ಆಡಳಿತದವರು ಮಲಗಿದ್ದರೇ ? ತಮ್ಮ ಪುರಾತನ ದೇವಸ್ಥಾನವನ್ನು ಸಂರಕ್ಷಿಸುವಲ್ಲಿ ನಿರ್ಲಕ್ಷ ತೋರುವ ಹಿಂದೂಗಳಿಗೆ ಇದು ನಾಚಿಕೆಗೇಡು !