ಪಶ್ಚಿಮ ಬಂಗಾಳ ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ಶಾಸಕ ಸುವೇಂದು ಅಧಿಕಾರಿ ಅವರ ಎಚ್ಚರಿಕೆ !
ಕೋಲ್ಕಾತಾ (ಬಂಗಾಳ) – ಹಿಂದೂಗಳ ಮೇಲಿನ ದಾಳಿ ನಿಲ್ಲದಿದ್ದರೆ, ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಪೆಟ್ರೋಪೋಲ್‌ನಲ್ಲಿ ಪ್ರತಿಭಟನೆ ನಡೆಸಲಾಗುವುದು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯ ಪ್ರತಿಕ್ರಿಯೆಯು ನ್ಯೂಟನ್‌ನ ಚಲನೆಯ ಮೂರನೇ ನಿಯಮಾನುಸಾರ ಇರುವುದು, ಅವರ ಪ್ರತಿಯೊಂದು ಕ್ರಿಯೆಗೆ ಸಮಾನ ಮತ್ತು ವಿರುದ್ಧವಾದ ಪ್ರತಿಕ್ರಿಯೆ ನೀಡಲಾಗುವುದು ಎಂದು ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ಶಾಸಕ ಸುವೆಂದು ಅಧಿಕಾರಿ ಅವರು ಎಚ್ಚರಿಕೆ ಕೊಟ್ಟಿದ್ದಾರೆ. (ಸುವೇಂದು ಅವರ ಈ ಪ್ರತಿಕ್ರಿಯೆಯಲ್ಲಿ, ‘ಬಾಂಗ್ಲಾದೇಶದಲ್ಲಿ ಒಬ್ಬ ಹಿಂದೂ ಮೇಲೆ ದಾಳಿ ನಡೆದರೆ, ಭಾರತದಲ್ಲಿರುವ 10 ಬಾಂಗ್ಲಾದೇಶಿ ನುಸುಳುಕೋರರ ಮೇಲೆ ದಾಳಿ ಮಾಡಲಾಗುವುದು,’ ಎಂದು ಭಾರತೀಯ ಹಿಂದೂಗಳು ತೊಡೆ ತಟ್ಟಿ ಸವಾಲು ಹಾಕಿದರೆ, ಅವರನ್ನು ಅಯೋಗ್ಯರೆಂದು ಹೇಳಬಹುದೇ? – ಸಂಪಾದಕ)
ಬಾಂಗ್ಲಾದೇಶದ ಚಿತಗಾವ್ ನ ‘ಹಿಫಾಜತ್-ಎ-ಇಸ್ಲಾಂ’ ಎಂಬ ಇಸ್ಲಾಮಿ ಸಂಘಟನೆಯು ಇತ್ತೀಚೆಗೆ ‘ಇಸ್ಕಾನ್’ ಅನ್ನು ನಿಷೇಧಿಸುವಂತೆ ಮನವಿ ಮಾಡಿತ್ತು. ಆ ಘಟನೆಯ ಬಳಿಕ ಸುವೇಂದು ಅವರು ಈ ಮೇಲಿನ ಎಚ್ಚರಿಕೆ ನೀಡಿದ್ದಾರೆ.
ಅಲ್ಪಸಂಖ್ಯಾತರನ್ನು ರಕ್ಷಿಸುವುದು ಮತ್ತು ಅವರ ಹಕ್ಕುಗಳನ್ನು ಗೌರವಿಸುವುದು, ತನ್ನ ಕರ್ತವ್ಯ ಎಂಬುದನ್ನು ಬಾಂಗ್ಲಾದೇಶವು ಅರ್ಥಮಾಡಿಕೊಳ್ಳಬೇಕು ಎಂದು ಸುವೇಂದು ಅಧಿಕಾರಿ ಹೇಳಿದರು. ನಾವು ಬಾಂಗ್ಲಾದೇಶದ ಮಹಮ್ಮದ್ ಯೂನಸ್ ಸರಕಾರಕ್ಕೆ ಎಚ್ಚರಿಕೆ ನೀಡಲು ಬಯಸುತ್ತೇವೆ, ಹಿಂದೂಗಳ ಮೇಲಿನ ದಾಳಿಗಳು ನಿಲ್ಲದಿದ್ದರೆ, ನಾವು ಪೆಟ್ರೋಪೋಲ್ ಗಡಿಯಲ್ಲಿ ಪ್ರತಿಭಟನೆ ಮಾಡುವೆವು. ಉಭಯ ದೇಶಗಳ ನಡುವಿನ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಬಂಧಗಳನ್ನು ಗಮನಿಸಿದರೆ, ಭಾರತವು ಬಾಂಗ್ಲಾದೇಶಿ ಹಿಂದೂಗಳ ದುಃಸ್ಥಿತಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದವರು ಹೇಳಿದರು.
ಸಂಪಾದಕೀಯ ನಿಲುವುಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವಾಗಲೂ ಇಂತಹ ಎಚ್ಚರಿಕೆಯನ್ನು ಏಕೆ ನೀಡಬೇಕಾಗುತ್ತದೆ ? ಸರಕಾರವು ಬಾಂಗ್ಲಾದೇಶದ ಮೇಲೆ ಒತ್ತಡ ಹೇರಿ ಈ ದಾಳಿಗಳನ್ನು ನಿಲ್ಲಿಸಿ ಹಿಂದೂಗಳ ರಕ್ಷಣೆ ಮಾಡಬೇಕೆಂದು ಹಿಂದೂಗಳಿಗೆ ಅನ್ನಿಸುತ್ತದೆ ! |