|
ಭೋಪಾಲ್ ( ಮಧ್ಯಪ್ರದೇಶ) – ಬರಕತ್ತುಲ್ಲ ವಿದ್ಯಾಪೀಠದಲ್ಲಿ ರಾಮಾಯಣದಲ್ಲಿನ ಸುಂದರ ಕಾಂಡದ ಪಠಣೆ ಮಾಡಲು ಮತ್ತು ದೇವಸ್ಥಾನಕ್ಕೆ ಹೋಗುವುದರ ಕುರಿತು ವಿವಾದ ಉಂಟಾಗಿದೆ. ವಿದ್ಯಾಪೀಠದ ಮುಖ್ಯ ಅಧಿಕಾರಿ (ವಾರ್ಡನ್) ಆಯೀಶಾ ರೈಸ್ ಅವರ ಆದೇಶದ ಪ್ರಕಾರ ಹಿಂದೂ ವಿದ್ಯಾರ್ಥಿಗಳು ಸುಂದರ ಕಾಂಡದ ಪಠಣೆ ಮಾಡುವುದು ಮತ್ತು ದೇವಸ್ಥಾನಕ್ಕೆ ಹೋಗುವ ಕುರಿತು ನಿಷೇಧ ಹೇರಲಾಗಿದೆ. ವಿದ್ಯಾರ್ಥಿಗಳ ಹೇಳಿಕೆಯ ಪ್ರಕಾರ, ಯಾರಾದರೂ ದೇವಸ್ಥಾನಕ್ಕೆ ಹೋಗಬೇಕಿದ್ದರೆ, ಅವರು ಮೊದಲು ವಿದ್ಯಾಪೀಠ ಆಡಳಿತದ ಅನುಮತಿ ಪಡೆಯಬೇಕು, ಹಾಗೂ ಆದೇಶದ ಉಲ್ಲಂಘನೆ ಮಾಡಿದರೆ ಕ್ಷಮೆ ಯಾಚಿಸಬೇಕು. ಈ ಪ್ರಕರಣದಿಂದ ವಿದ್ಯಾಪೀಠದಲ್ಲಿ ರಾಧಾಂತ ನಡೆಯಿತು. ಈ ನಿರ್ಣಯಕ್ಕೆ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಈ ನಿರ್ಣಯವನ್ನು ವಿರೋಧಿಸಿ ವಿದ್ಯಾರ್ಥಿಗಳು ಮುಖ್ಯ ಪ್ರವೇಶದ್ವಾರದಲ್ಲಿ ಒಗ್ಗೂಡಿ ಶ್ರೀರಾಮ ನಾಮಜಪ ಮಾಡಿದರು ಮತ್ತು ವಿದ್ಯಾಪೀಠ ಆಡಳಿತಕ್ಕೆ ಈ ಅಂಶದ ಕುರಿತು ಗಮನ ಹರಿಸುವಂತೆ ಕರೆ ನೀಡಿದರು. ಈ ಪ್ರಕರಣದಲ್ಲಿ ಯೋಗ್ಯವಾದ ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಬಿವಿಪಿ ಎಚ್ಚರಿಕೆ ನೀಡಿದೆ.
ಆಯೀಶಾ ರೈಸ್ ಅವರ ಸ್ಪಷ್ಟೀಕರಣ !
ಆಯೀಶಾ ಅವರು ಈ ಬಗ್ಗೆ ಸುತ್ತೋಲೆ ಪ್ರಸಾರ ಮಾಡಿದ್ದಾರೆ. ಅದರಲ್ಲಿ ಅವರು, ಇದು ಧಾರ್ಮಿಕ ಅಂಶವಲ್ಲ. ಈ ಅಂಶ ಎಲ್ಲಿ ಹೋಗುವುದರ ಬಗ್ಗೆ ಅಲ್ಲ, ಇದು ಶಿಸ್ತಿನ ವಿಷಯವಾಗಿದೆ. ಉಪಕುಲಪತಿಗಳು ಒಂದು ಸಮಿತಿ ಸ್ಥಾಪನೆ ಮಾಡಿದ್ದಾರೆ. ಅದು ವಿಚಾರಣೆ ನಡೆಸುವುದು. ವಿದ್ಯಾರ್ಥಿಗಳು ನಮ್ಮ ಮಕ್ಕಳ ಹಾಗೆ. ಅವರಿಗೆ ಏನು ಆಗಬಾರದು. ಅವರು ತಮ್ಮ ಪೋಷಕರಿಂದ ದೂರವಿರುತ್ತಾರೆ. ನಾವು ಅವರನ್ನು ಪ್ರೀತಿಸುತ್ತೇವೆ. ನಾವು ಅವರಿಗೆ ರಕ್ಷಣೆ ನೀಡುತ್ತೇವೆ, ಅವರು ಆನಂದದಿಂದ ತಮ್ಮ ಅಧ್ಯಯನ ಮಾಡಲು ಸಾಧ್ಯವಾಗಬೇಕು ಎಂಬುದೇ ನಮ್ಮ ಉದ್ದೇಶ ಎಂದು ಸ್ಪಷ್ಟನೆ ನೀಡಿದ್ದಾರೆ.
🚨Hindu students made to apologize for visiting temple, and reciting Sundarkand from Ramayan, by Hostel warden Ayesha Rais of Barkatullah University, Bhopal, Madhya Pradesh
👉 This makes one wonder if Bhopal is in #India or #Pakistan? When it’s a #BJP ruled State, the #Hindus… pic.twitter.com/a0RnIVTJTM
— Sanatan Prabhat (@SanatanPrabhat) November 11, 2024
ಸಂಪಾದಕೀಯ ನಿಲುವು
|