|
ಮುಂಬಯಿ – ಬಾಂಗ್ಲಾದೇಶ ಮತ್ತು ಮ್ಯಾನಮಾರ್ ನಿಂದ ರೋಹಿಂಗ್ಯಾ ಮುಸ್ಲಿಮರ ಅಕ್ರಮ ನುಸುಳುವಿಕೆ ನಡೆಯುತ್ತಿದೆ. ಇದರಿಂದ 2051ರ ವೇಳೆಗೆ ನಗರದ ಹಿಂದೂ ಜನಸಂಖ್ಯೆಯು ಶೇ.54 ಕ್ಕಿಂತ ಕೆಳಗೆ ಇಳಿಯಲಿದ್ದು, ಮುಸ್ಲಿಂ ಜನಸಂಖ್ಯೆಯು ಶೇ.30ಕ್ಕಿಂತ ಹೆಚ್ಚಾಗಲಿದೆ ಎಂದು ‘ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್’ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ. ಸಂಸ್ಥೆಯ 118 ಪುಟಗಳ ಮಧ್ಯಂತರ ವರದಿಯು ‘ಮುಂಬಯಿಯಲ್ಲಿನ ಕಾನೂನುಬಾಹಿರ ವಲಸಿಗರು; ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಪರಿಣಾಮಗಳ ವಿಶ್ಲೇಷಣೆ’ ಈ ಶೀರ್ಷಿಕೆಯ 118 ಪುಟಗಳ ಅಂತಿಮ ವರದಿಯನ್ನು ಸಂಸ್ಥೆಯು ಪ್ರಕಟಿಸಿದೆ.
Mumbai’s Hindu population to drop below 54% by 2051! 🚨
Report by Tata Institute of Social Sciences (TISS), the city’s demographic landscape is shifting dramatically.
Report highlights concerns about uncontrolled infiltration & demographic shift
Key Statistics:
– 1961: Hindus… pic.twitter.com/gdXa9d5Nit
— Sanatan Prabhat (@SanatanPrabhat) November 13, 2024
ಈ ವರದಿಯ ಪ್ರಕಾರ :
1. ಕೆಲವು ರಾಜಕೀಯ ಸಂಘಟನೆಗಳು ಅಕ್ರಮ ವಲಸಿಗರನ್ನು ತಮ್ಮ ಮತಪೆಟ್ಟಿಗೆ ರಾಜಕಾರಣಕ್ಕಾಗಿ ಬಳಸುತ್ತಿದ್ದಾರೆ. ಅಕ್ರಮ ವಲಸಿಗರಿಗೆ ಮುಂಬಯಿಯಲ್ಲಿ ಸುಲಭವಾಗಿ ಮತದಾರರ ಗುರುತಿನ ಚೀಟಿ ಸಿಗುತ್ತಿರುವುದರಿಂದ ಅವರಿಗೆ ಮತದಾನ ಮಾಡಲು ಸಾಧ್ಯವಾಗುತ್ತದೆ.
2. ಮುಂಬಯಿಯಲ್ಲಿ ಹಿಂದೂ ಜನಸಂಖ್ಯೆಯು 1961 ರಲ್ಲಿ ಶೇ. 88 ರಷ್ಟಿತ್ತು ಆದರೆ 2011 ರಲ್ಲಿ ಶೇ.66 ರಷ್ಟಕ್ಕೆ ಇಳಿದಿದೆ; ಆದರೆ ಮುಸ್ಲಿಮರ ಜನಸಂಖ್ಯೆಯು ಮಾತ್ರ ಶೇ.8ರಿಂದ ಶೇ.21ಕ್ಕೆ ಏರಿಕೆಯಾಗಿದೆ.
ಅಕ್ರಮ ವಲಸಿಗರಿಂದ ಸೃಷ್ಟಿಯಾದ ಅಪಾಯಗಳು :
1. ಮುಂಬಯಿಯ 12 ವಿಧಾನಸಭಾ ಮತದಾರ ಕ್ಷೇತ್ರಗಳಲ್ಲಿ ಹೆಚ್ಚಿನವರು ವಲಸಿಗರಿದ್ದಾರೆ. ಇದು ಮತದಾನ ವಿಧಾನಗಳ ಮೇಲೆ ಪರಿಣಾಮ ಬೀರುತ್ತದೆ.
2. ಈ ವರದಿಯ ಅಭ್ಯಾಸಕ್ಕಾಗಿ ಪಡೆದ ಮಾದರಿಯಲ್ಲಿ ಶೇ. 50 ಕ್ಕಿಂತ ಹೆಚ್ಚು ಮಹಿಳೆಯರನ್ನು ಕಳ್ಳಸಾಗಣೆ ಮಾಡಿ ಭಾರತಕ್ಕೆ ತರಲಾಗಿದೆ. ಸದ್ಯ ಈ ಮಹಿಳೆಯರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದು, ಇವರಲ್ಲಿ ಶೇ.40 ರಷ್ಟು ಮಹಿಳೆಯರು ಪ್ರತಿ ತಿಂಗಳು ಬಾಂಗ್ಲಾದೇಶದ ತಮ್ಮ ಮನೆಗಳಿಗೆ ಸುಮಾರು ರೂ. 10,000 ರಿಂದ 1 ಲಕ್ಷ ರೂಪಾಯಿಗಳಷ್ಟು ಹಣವನ್ನು ಕಳುಹಿಸುತ್ತಾರೆ.
3. ಅಕ್ರಮ ವಲಸಿಗರಿಂದ ಕೊಳೆಗೇರಿಗಳಲ್ಲಿ ಜನಸಂದಣಿಯಾಗುತ್ತಿದೆ.
4. ಅತಿಕ್ರಮಣಕಾರರಿಂದಾಗಿ ಗೋವಂಡಿ, ಕುರ್ಲಾ, ಮಾನಖುರ್ದ್ನ ಇಂತಹ ಕೊಳೆಗೇರಿ ಪ್ರದೇಶಗಳಲ್ಲಿ ವಿದ್ಯುತ್ ಮತ್ತು ನೀರು ಪೂರೈಕೆಯಲ್ಲಿ ಸಮಸ್ಯೆ ಎದುರಾಗಿದೆ. ಆರೋಗ್ಯ, ಶಿಕ್ಷಣ ಮತ್ತು ನೈರ್ಮಲ್ಯದಂತಹ ಸಾರ್ವಜನಿಕ ಸೇವೆಗಳ ಮೇಲೆಯೂ ಪರಿಣಾಮ ಬೀರುತ್ತಿದೆ.
5. ಸ್ಥಳೀಯರಲ್ಲಿ ಉದ್ಯೋಗಕ್ಕಾಗಿ ಪೈಪೋಟಿ ಇನ್ನಷ್ಟು ಹೆಚ್ಚಿದೆ.
6. ‘ಸಾರಾಂಶ, ಫಲಿತಾಂಶ ಮತ್ತು ಪರಿಣಾಮಗಳು’ ಎಂಬ ಶೀರ್ಷಿಕೆಯ ಈ ವರದಿಯ ಒಂದು ಭಾಗದಲ್ಲಿ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳ ನುಸುಳುವಿಕೆಯನ್ನು ಕಡಿಮೆ ಮಾಡಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆಯೆಂದು ಹೇಳಲಾಗಿದೆ.
ಸಂಪಾದಕೀಯ ನಿಲುವು
|