ಅಲ್ಪಸಂಖ್ಯಾತ ಹಿಂದುಗಳ ಮೇಲಿನ ದೌರ್ಜನ್ಯದ ವಿಚಾರಣೆಗಾಗಿ ನ್ಯಾಯಾಂಗ ಆಯೋಗದ ಸ್ಥಾಪನೆ ಮಾಡಿ ಬಾಂಗ್ಲಾದೇಶ: ಅಲ್ಪಸಂಖ್ಯಾತರ ಹಿತಕ್ಕಾಗಿ ಕಾರ್ಯ ನಿರ್ವಹಿಸುವ ಸಂಘಟನೆಯಿಂದ ಒಮ್ಮತದ ಬೇಡಿಕೆ !
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ವಿಚಾರಣೆಗಾಗಿ ನ್ಯಾಯಾಂಗ ಆಯೋಗದ ಸ್ಥಾಪನೆ ಮಾಡಲು ಅಲ್ಲಿನ ವಿವಿಧ ಮಾನವಾಧಿಕಾರ ಸಂಘಟನೆಗಳಿಂದ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಇತ್ತೀಚಿಗೆ ಒಂದು ಸಭೆ ಕರೆಯಲಾಯಿತು, ಅದರ ಕುರಿತು ‘ ಬಾಂಗ್ಲಾದೇಶ್ ಮೈನಾರಿಟಿ ವಾಚ್ ‘ ನ ಸಂಸ್ಥಾಪಕ – ಅಧ್ಯಕ್ಷ ಪೂ. ರವೀಂದ್ರ ಘೋಷ್ ಅವರು ‘ ಸನಾತನ ಪ್ರಭಾತ’ಕ್ಕೆ ಮಾಹಿತಿ ನೀಡಿದರು. ಈ ಸಭೆಯಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯದ ಎಲ್ಲಾ ಪ್ರಕರಣಗಳಲ್ಲಿ ಅವರಿಗೆ ನ್ಯಾಯ ದೊರಕಿಸಿ ಕೊಡುವುದು ಮತ್ತು ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಲು ಮಧ್ಯಂತರ ಸರಕಾರಕ್ಕೆ ವಿನಂತಿಸಲಾಗಿದೆ. ‘ಢಾಕಾ ರಿಪೋರ್ಟರ್ಸ್ ಯೂನಿಟೀ ಆಡಿಟೋರಿಯಂ’ ನಲ್ಲಿ ಅಲ್ಪಸಂಖ್ಯಾತ ಮಾನವಾಧಿಕಾರದ ರಕ್ಷಣೆಗಾಗಿ ರಾಜಕೀಯ ಐಕ್ಯತೆಯ ಅಗತ್ಯವಿದ್ದು ಈ ವಿಷಯದ ಕುರಿತು ಸಭೆಯ ಆಯೋಜನೆ ಮಾಡಲಾಗಿತ್ತು. ಬಾಂಗ್ಲಾದೇಶದ ಮೈನಾರಿಟಿ ವಾಚ್ ಮತ್ತು ಹ್ಯೂಮನ್ ರೈಟ್ಸ್ ಅಲಯನ್ಸ್ ನ ಅಧ್ಯಕ್ಷರಾದ ಪೂ. ರವೀಂದ್ರ ಘೋಷ್ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು. ಆ ಬಳಿಕ ಪತ್ರಕರ್ತರ ಸಭೆ ನಡೆಸಲಾಯಿತು.
೧. ಈ ಸಭೆಯಲ್ಲಿ ‘ಮಾನವಾಧಿಕಾರ ಮೋರ್ಚ, ಬಾಂಗ್ಲಾದೇಶ್’ ದ ಆಹ್ವಾನಿತರಾದ ಮಹಬೂಬ್ ಹಕ್, ‘ನಾಗರಿಕ ಒಕಿಯಾ’ ದ ಅಧ್ಯಕ್ಷ ಮಹಮುದೂರ್ ರಹಮಾನ್ ಮನ್ನಾ, ‘ಕ್ರಾಂತಿಕಾರಿ ವರ್ಕರ್ಸ್’ ಪಕ್ಷದ ಕಾರ್ಯದರ್ಶಿ ಸೈಫುಲ್ ಹಕ್ , ‘ಗಣೋ ಫೋರಂ’, ಅಧ್ಯಕ್ಷ ನ್ಯಾಯವಾದಿ ಸುಪ್ರದ್ ಚೌದರಿ, ಜನ ಏಕತಾ ಆಂದೋಲನದ ಮುಖ್ಯ ಸಮನ್ವಯಕ ಜೋನೈದ ಸಾಕಿ ಇವರ ಭಾಷಣಗಳು ನಡೆದವು.
೨. ಢಾಕಾ ವಿಶ್ವವಿದ್ಯಾಲಯದ ಪ್ರಾ. ರೋಬಾಯಿತ್ ಬಿರಾದೌಸ್, ನ್ಯಾಷನಲ್ ಸಿಟಿಜನ್ ಕಮಿಟಿಯ ಕೇಂದ್ರ ಸದಸ್ಯ ಆರಿಫುಲ್ ಇಸ್ಲಾಂ ಆದೀಬ್, ‘ರಿವರ್ ಅಂಡ್ ಡೆಲ್ಟ ರಿಸರ್ಚ್ ಸೆಂಟರ್’ ನ ಅಧ್ಯಕ್ಷ ಮಹಮ್ಮದ್ ಏಜಾಜ್, ಮತ್ತು ಇತರರು ಕೂಡ ಮಾರ್ಗದರ್ಶನ ಮಾಡಿದರು.
೩. ‘ ನಾಗೋರಿಕ ಏಕತೆ’ ಯ ಅಧ್ಯಕ್ಷ ಮಹಮುದೂರ್ ರಹಮಾನ್ ಮನ್ನಾ ಅವರು, ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಯ ಲಾಭ ಯಾರಿಗೆ ಆಗುತ್ತಿದೆ ? ಮತ್ತು ಅದನ್ನು ಹೇಗೆ ತಡೆಯಬೇಕು ? ಇದನ್ನು ತಿಳಿದುಕೊಳ್ಳುವುದಕ್ಕಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಸತ್ಯ ಮತ್ತು ಸಂದರ್ಭಗಳ ವಿಶ್ಲೇಷಣೆ ಮಾಡಿದಾಗ, ಕಳೆದ ಮೂರು ತಿಂಗಳಲ್ಲಿ ಕೇವಲ ಧರ್ಮದ ಆಧಾರದ ಮೇಲೆ ದಾಳಿಗಳು ನಡೆದಿಲ್ಲ, ರಾಜಕೀಯ ಉದ್ದೇಶದಿಂದಲೂ ಕೂಡ ದಾಳಿಗಳು ನಡೆದಿವೆ ಎಂಬುದು ಕಂಡು ಬರುವುದು ಎಂದು ಹೇಳಿದರು.
೪. ಸೈಫುಲ್ ಹಕ್ ಅವರು ಮಾತನಾಡಿ, ಬಾಂಗ್ಲಾದೇಶವು ಸಮಾಜದಲ್ಲಿನ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ವಿಷಮತೆ ದೂರಗೊಳಿಸಲು ಸಮಾನತಾವಾದಿ ಪ್ರಜಾಪ್ರಭುತ್ವದ ರಾಜ್ಯಸ್ಥಾಪನೆ ಮಾಡಬೇಕು ಎಂದು ಹೇಳಿದರು.
೫. ಜೋನಾಯದ ಸಾಕೀ ಅವರು, ಹಿಂದೂ ಜನಾಂಗದ ಮೇಲಿನ ನಡೆದ ದಾಳಿಗಳು ಒಂದು ರಾಜಕೀಯ ಪ್ರಚಾರವಾಗಿದೆ. ಅವಾಮಿ ಲೀಗ್ ನವರು ಇದನ್ನು ಮಾಡುತ್ತಿದ್ದಾರೆ. ಭಾರತೀಯ ಸಮಾಚಾರ ಪತ್ರಿಕೆಯ ಒಂದು ವಿಭಾಗವು, ‘ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಲಾಗುತ್ತಿದೆ’ ಎಂಬುದನ್ನು ಅಮೆರಿಕಾಗೆ ತಿಳಿಸಿ ಹೇಳುವ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.
ಸಂಪಾದಕೀಯ ನಿಲುವು
|