Waqf Board: ಕೇರಳ: ವಕ್ಫ್ ಬೋರ್ಡ್ ವಿರೋಧಿಸಿ ‘ಸಿರೋ ಮಲಬಾರ್ ಚರ್ಚ್’ನಿಂದ ಆಂದೋಲನ!

  • ‘ಸಿರೋ ಮಲಬಾರ್ ಚರ್ಚ್’ 1 ಸಾವಿರ ಚರ್ಚಗಳ ಸಂಘಟನೆಯಾಗಿದೆ !

  • ಕ್ರೈಸ್ತ ಬಾಹುಳ್ಯವಿರುವ ಎರಡು ಗ್ರಾಮಗಳ ಮೇಲೆ ವಕ್ಫ್ ಮಂಡಳಿಯ ಹಕ್ಕುಸ್ಥಾಪನೆ: ಚರ್ಚ್ ನಿಂದ ವಿರೋಧ!

ಸಿರೋ ಮಲಬಾರ್ ಚರ್ಚ್

ಕೊಚ್ಚಿ (ಕೇರಳ) – ವಕ್ಫ್ ಮಂಡಳಿಯ ನಿರಂಕುಶ ಆಡಳಿತದ ವಿರುದ್ಧ 1 ಸಾವಿರ ಚರ್ಚ್‌ಗಳ ಸಂಘಟನೆಯಾದ ‘ಸಿರೋ ಮಲಬಾರ್ ಚರ್ಚ್’ ವತಿಯಿಂದ ಆಂದೋಲನ ನಡೆಸಲಾಗುತ್ತಿದೆ. ಕೊಚ್ಚಿಯ ಮುನಂಬಮ್ ಮತ್ತು ಚೆರಾಯಿ ಗ್ರಾಮಗಳಲ್ಲಿ ಭೂ ವಿವಾದಕ್ಕೆ ಸಂಬಂಧಿಸಿ ಚರ್ಚ್‌ ಈ ಆಂದೋಲನ ನಡೆಸುತ್ತಿದೆ. ವಕ್ಫ್ ಮಂಡಳಿಯು ದೊಡ್ಡ ಪ್ರಮಾಣದಲ್ಲಿ ಗ್ರಾಮಸ್ಥರ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದೆ ಎಂದು ಚರ್ಚ್ ಸದಸ್ಯರು ಆರೋಪಿಸಿದ್ದಾರೆ. ಸಿರೋ ಮಲಬಾರ್ ಚರ್ಚ್‌ನ ಮುಖ್ಯಸ್ಥ ಮೇಜರ್ ಆರ್ಚ್‌ಬಿಷಪ್ (ಹಿರಿಯ ಪಾದ್ರಿ) ರಾಫೆಲ್ ಥಾಟಿಲ್ ಅವರು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಧ್ಯಪ್ರವೇಶಿಸಿ ಪರಿಹಾರ ಕಂಡು ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.

ವಕ್ಫ್ ಮಂಡಳಿಯು ಮುನಂಬಮ್ ಮತ್ತು ಚೆರಾಯಿ ಗ್ರಾಮಸ್ಥರ ಭೂಮಿ ಮತ್ತು ಆಸ್ತಿಯನ್ನು ಅಕ್ರಮವಾಗಿ ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಕಳೆದ ಹಲವು ವರ್ಷಗಳಿಂದ ಈ ಗ್ರಾಮದಲ್ಲಿ ಕ್ರೈಸ್ತ ಕುಟುಂಬಗಳು ವಾಸಿಸುತ್ತಿವೆ. ಅವರು ತಮ್ಮ ಆಸ್ತಿಗಳಿಗೆ ಸರಕಾರಕ್ಕೆ ತೆರಿಗೆಯನ್ನು ಸಹ ಪಾವತಿಸುತ್ತಿದ್ದಾರೆ. ಅವರ ಬಳಿ ಈ ಬಗ್ಗೆ ಎಲ್ಲಾ ದಾಖಲೆಗಳಿವೆ. ಹೀಗಿರುವಾಗಲೂ ವಕ್ಫ್ ಮಂಡಳಿಯು ಈ ಪ್ರದೇಶವು ತನ್ನದೆಂದು ಹೇಳುತ್ತಿದೆ. ‘ಜಮೀನು ಸ್ಥಳೀಯ ಗ್ರಾಮಸ್ಥರ ಹೆಸರಿನಲ್ಲಿ ನೋಂದಣಿಯಾಗಿದೆ; ಹೀಗಿರುವಾಗ ವಕ್ಫ್ ಬೋರ್ಡ್ ಹೇಗೆ ತನ್ನ ಹಕ್ಕು ಹೇಗೆ ಸ್ಥಾಪಿಸಬಹುದು?, ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.

ಈ ಘಟನೆಯಿಂದ ಈಗ ಹಲವು ಸ್ಥಳಗಳಲ್ಲಿ ಜನರ ವಿರೋಧ ಹೆಚ್ಚುತ್ತಿದೆ. ಒಂದು ವೇಳೆ ಈ ವಿಷಯ ಇತ್ಯರ್ಥವಾಗದಿದ್ದರೆ ಆಂದೋಲನ ಮತ್ತಷ್ಟು ಬಿಗಿಗೊಳ್ಳುವ ಸಾಧ್ಯತೆಯಿದೆಯೆಂದು ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

ಕ್ರೈಸ್ತರು ಮತ್ತು ಅವರ ಚರ್ಚ್‌ಗಳು ‘ವಕ್ಫ್ ಕಾಯಿದೆ’ಯನ್ನು ರದ್ದುಗೊಳಿಸಲು ಕೇಂದ್ರ ಸರಕಾರವನ್ನು ಏಕೆ ಒತ್ತಾಯಿಸುತ್ತಿಲ್ಲ?

ಕೇರಳದ ಚರ್ಚ್‌ಗಳಂತೆ ಹಿಂದೂ ಸಂಸ್ಥೆಗಳು ಕೂಡ ಒಗ್ಗೂಡಿ ವಕ್ಫ್ ಕಾಯ್ದೆಯನ್ನು ರದ್ದುಗೊಳಿಸಲು ಸಂಘಟಿತರಾಗುವುದು ಆವಶ್ಯಕವಾಗಿದೆ !