ದೇವಾಲಯ ಸಲಹಾಸಮಿತಿಯ ನಾಸ್ತಿಕತೆಯ ಮೇಲೆ ಛೀಮಾರಿ ಹಾಕಿದ ಕೇರಳ ಉಚ್ಚ ನ್ಯಾಯಾಲಯ !

ಕೊಟ್ಟಯಮ್ ಜಿಲ್ಲೆಯಲ್ಲಿ ವಾಯಿಕೋಮ ಮಹಾದೇವ ದೇವಾಲಯದಲ್ಲಿ ಕಳಪೆ ದರ್ಜೆಯ ಪೂಜಾಸಾಮಗ್ರಿಗಳ ಮಾರಾಟ ನಡೆಯುತ್ತಿರುವುದಾಗಿ ಒಂದು ವಾರ್ತೆಯಿಂದ ಗಮನಕ್ಕೆ ಬಂದ ಮೇಲೆ ಕೇರಳ ಉಚ್ಚ ನ್ಯಾಯಾಲಯವು ಅದನ್ನು ಸ್ವತಃ ನೋಂದಿಸಿಕೊಂಡಿತು.

ಅಲವರ (ರಾಜಸ್ಥಾನ) ಇಲ್ಲಿಯ ೩೦೦ ವರ್ಷ ಹಳೆಯದಾದ ಶಿವಮಂದಿರ ಸೇರಿ ೩ ದೇವಸ್ಥಾನಗಳನ್ನು ಮತ್ತೆ ಕಟ್ಟಿಕೊಡಲಿದೆ ಸರಕಾರ !

ಅಲವರ ಜಿಲ್ಲೆಯ ರಾಯಗಡ ಇಲ್ಲಿ ರಸ್ತೆ ಅಗಲೀಕರಣದ ನೆಪದಲ್ಲಿ ಕೆಡವಲಾದ ೩೦೦ ವರ್ಷ ಹಳೆಯ ಶಿವ ಮಂದಿರ ಸೇರಿ ೩ ದೇವಸ್ಥಾನಗಳನ್ನು ಪುನರ್ ನಿರ್ಮಿಸಲಾಗುವುದು, ಎಂಬ ಮಾಹಿತಿ ರಾಯಗಡ ಹೆಚ್ಚುವರಿ ಜಿಲ್ಲಾಧಿಕಾರಿ ಸುನೀತ ಪಂಕಜ್ ಇವರು ನೀಡಿದರು.

‘ನ್ಯಾಯಾಲಯ ಆಯುಕ್ತ’ರ ನೇಮಕಾತಿಯ ವಿರುದ್ಧ ಅಂಜುಮನ್ ಇಂತಜಾಮಿಯಾ ಕಮಿಟಿಯ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ

ಉತ್ತರ ಪ್ರದೇಶದ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಅಂಜುಮನ್ ಇಂತಜಾಮಿಯಾ ಕಮಿಟಿಯು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಈ ಅರ್ಜಿಯಲ್ಲಿ ನ್ಯಾಯಾಲಯದ ಆಯುಕ್ತರ ನೇಮಕಾತಿಯನ್ನು ವಿರೋಧಿಸಲಾಗಿತ್ತು.

ಮಂಗಳೂರಿನಲ್ಲಿ ಮಸೀದಿಯ ದುರಸ್ತಿಯ ಸಮಯದಲ್ಲಿ ದೇವಾಲಯದ ಅವಶೇಷಗಳು ಪತ್ತೆ !

ಇಲ್ಲಿನ ಒಂದು ಮಸೀದಿಯ ದುರಸ್ತಿಯ ಸಮಯದಲ್ಲಿ ಮಸೀದಿಯ ಕೆಳಗೆ ಹಿಂದೂ ದೇವಾಲಯದ ಅವಶೇಷಗಳು ಪತ್ತೆಯಾಗಿವೆ. ಮಂಗಳೂರಿನ ಹೊರವಲಯದ ಗಂಜಿಪಠದ ಬಳಿಯ ಮಳಲಿಯಲ್ಲಿನ ಜುಮಾ ಮಸೀದಿಯ ದುರಸ್ತಿಯ ಕೆಲಸ ನಡೆಯುತ್ತಿದೆ. ಆಗ ಅಲ್ಲಿ ಅಗೆಯುತ್ತಿರುವಾಗ ಅವಶೇಷಗಳು ಸಿಕ್ಕಿದೆ.

ಮಥುರಾದಲ್ಲಿ ಶ್ರೀಕೃಷ್ಣಜನ್ಮಭೂಮಿಯ ಮೇಲೆ ಶ್ರೀಕೃಷ್ಣ ದೇವಾಲಯದ ಮೇಲಿರುವ ಧ್ವನಿವರ್ಧಕಗಳ ಸದ್ದನ್ನು ಕಡಿಮೆ ಮಾಡಲಾಗುವುದು !

ಇಲ್ಲಿಯ ಶ್ರೀಕೃಷ್ಣಜನ್ಮಭೂಮಿಯಲ್ಲಿನ ಶ್ರೀಕೃಷ್ಣ ದೇವಾಲಯದ ಮೇಲೆ ಹಾಕಲಾಗುವ ಧ್ವನಿವರ್ಧಕಗಳ ಶಬ್ಧವನ್ನು ಕಡಿಮೆಗೊಳಿಸುವಂತೆ ಸರಕಾರವು ತೀರ್ಮಾನ ತೆಗೆದುಕೊಂಡಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ರಾಜ್ಯದಲ್ಲಿರುವ ಧಾರ್ಮಿಕ ಸ್ಥಳಗಳಲ್ಲಿರುವ ಧ್ವನಿವರ್ಧಕಗಳ ಶಬ್ಧವನ್ನು ನ್ಯೂನ ಮಾಡಲು ಕರೆ ನೀಡಿದ್ದರು.

ಗೋವಾದಲ್ಲಿ ಪೋರ್ಚುಗೀಸರು ನಾಶ ಮಾಡಿದ ಹಿಂದು ದೇವಾಲಯಗಳನ್ನು ಶೋಧನೆಯ ಪ್ರಕ್ರಿಯೆ ಪ್ರಾರಂಭ

ಹಳೆಗೂಡಿಕೆ ಹಾಗೂ ಪುರಾತತ್ವ ನಿರ್ದೇಶನಾಲಯವು ಪೊರ್ಚುಗೀಸರು ಗೋವಾದಲ್ಲಿ ತಮ್ಮ ಕ್ರೂರ ಅಧಿಕಾರಾವಧಿಯಲ್ಲಿ ನಾಶ ಮಾಡಿದ ಹಿಂದೂಗಳ ದೇವಾಲಯಗಳನ್ನು ಶೋಧನೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ಕಟನಿ (ಮಧ್ಯಪ್ರದೇಶ) ಇಲ್ಲಿ ರೈಲು ನಿಲ್ದಾಣ ಪ್ರದೇಶದಲ್ಲಿನ ಹಳೆಯ ಶ್ರೀರಾಮ ಮಂದಿರದ ಮುಂಭಾಗದ ಗೋಡೆಯನ್ನು ಹಿಂದೂ ಸಂಘಟನೆಗಳು ಕೆಡವಿದವು !

ಕೆಲವು ವರ್ಷಗಳ ಹಿಂದೆ ರೈಲ್ವೇ ಆಡಳಿತವು ಕಟನಿಯ ರೈಲು ನಿಲ್ದಾಣದ ಪ್ರದೇಶದ ಹಳೆಯ ಶ್ರೀ ರಾಮ ಮಂದಿರದ ಮುಂಭಾಗದಲ್ಲಿ ಗೋಡೆಯೊಂದನ್ನು ನಿರ್ಮಿಸಿತ್ತು. ಇದರಿಂದ ದೇವಸ್ಥಾನಕ್ಕೆ ತೆರಳಲು ಭಕ್ತರು ಪರದಾಡುವಂತಾಗಿತ್ತು. ರೈಲ್ವೇ ಆಡಳಿತದ ಈ ಕ್ರಮಕ್ಕೆ ಹಿಂದೂ ಸಂಘಟನೆಗಳು ಆಗಾಗ್ಗೆ ವಿರೋಧ ವ್ಯಕ್ತಪಡಿಸಿದ್ದವು.

ಹಿಂದೂ ತೀರ್ಥಯಾತ್ರೆಗೆ ಹೋಗಲು ಮುಸಲ್ಮಾನ ಚಾಲಕರಿರುವ ವಾಹನದಲ್ಲಿ ಕೂರಬಾರದು !

ಇಂತಹ ಮನವಿ ಮಾಡುವ ಹಿಂದೂ ಸಂಘಟನೆಗಳನ್ನು ‘ಮತಾಂಧ’ ಎಂದು ಕರೆದರೆ ಈ ಸಮಸ್ಯೆ ಬಗೆಹರಿಯುವುದಿಲ್ಲ, ಆದರೆ ‘ಇಂತಹ ಮನವಿಯನ್ನು ಮಾಡುವ ಸಮಯ ಏಕೆ ಬಂತು ?’, ಮತ್ತು ‘ಅವರಿಗೆ ಅಭದ್ರತೆಯ ಭಾವನೆ ಏಕೆ ಬರುತ್ತಿದೆ ?’, ಎಂಬುದರ ತನಿಖೆ ನಡೆಸುವುದು ಅಗತ್ಯವಿದೆ ! – ಸಂಪಾದಕರು

ಭಾಗಲಪೂರ (ಬಿಹಾರ) ಇಲ್ಲಿಯ ಬುಢಾನಾಥ ದೇವಸ್ಥಾನ ಪರಿಸರದಲ್ಲಿ ಬಾಂಬ್ ಪತ್ತೆ !

ಇತರ ಧರ್ಮದವರ ಪ್ರಾರ್ಥನಾ ಸ್ಥಳಗಳ ಬಳಿ ಎಂದಾದರೂ ಬಾಂಬ್ ಪತ್ತೆ ಆಗುತ್ತದೆಯೇ ?

ಗೋರಕನಾಥ ದೇವಸ್ಥಾನದ ಮೇಲೆ ಜಿಹಾದಿಯಿಂದ ಕತ್ತಿಯಿಂದ ದಾಳಿ !

ಪ್ರಸಿದ್ಧ ಗೋರಕನಾಥ ದೇವಸ್ಥಾನದ ಮೇಲೆ ಅಹಮದ ಮುರ್ತಜಾ ಅಬ್ಬಾಸಿ ಎಂಬ ಯುವಕನು ಏಪ್ರಿಲ್ 3 ರ ರಾತ್ರಿ `ಅಲ್ಲಾಹು ಅಕ್ಬರ್’ನ(`ಅಲ್ಲಾ ಶ್ರೇಷ್ಠನಾಗಿದ್ದಾನೆ’ಯ) ಘೋಷಣೆ ನೀಡುತ್ತಾ ಕತ್ತಿಯಿಂದ ದಾಳಿ ನಡೆಸಿದನು. ಇದರಲ್ಲಿ 2 ಪೊಲೀಸರು ಗಾಯಗೊಂಡರು. ಅಲ್ಲಿ ನೇಮಕಗೊಂಡಿರುವ ಸುರಕ್ಷಾ ರಕ್ಷಕರು ಅವನನ್ನು ಬಂಧಿಸಿದರು