ಸೈಬರ್ ವಂಚಕರನ್ನು ನ್ಯಾಯಕ್ಕೆ ಒಳಪಡಿಸಲು ಕೈಗೊಂಡ ಕ್ರಮ
ಜಯಪುರ (ರಾಜಸ್ಥಾನ) – ರಾಜಸ್ಥಾನದ ಡಿಗ್ ಪ್ರದೇಶದ ಪಾಲ್ಡಿ ಗ್ರಾಮದಲ್ಲಿ, ಹಿರಿಯ ಮತ್ತು ಪ್ರಮುಖ ವ್ಯಕ್ತಿಗಳು ಮಕ್ಕಳು ಮತ್ತು ಯುವಕರು ಜನರಿಂದ ಸೈಬರ್ ವಂಚನೆ ಮಾಡಲೆಂದು ಖರೀದಿಸಿದ್ದ 300 ಮೊಬೈಲ್ ಫೋನ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನು ಕಸಿದು ಎಲ್ಲಾ ಮೊಬೈಲ್ ಫೋನ್‌ಗಳನ್ನು ಒಡೆದು ಸುಟ್ಟುಹಾಕಿದರು. ಈ ಘಟನೆಯ ಮೂಲಕ ಸೈಬರ್ ವಂಚನೆಗೆ ಕುಖ್ಯಾತಿ ಪಡೆದಿರುವ ಈ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತಿಸುವುದಾಗಿ ಹಿರಿಯರು ಸಂದೇಶ ರವಾನಿಸಿದ್ದಾರೆ. ಗ್ರಾಮದಲ್ಲಿ ಒಂದು ತಂಡ ರಚನೆ ಮಾಡಲಾಗುವುದು. ಅವರು ಹಳ್ಳಿಯ ಮಕ್ಕಳು ಅಥವಾ ಯುವಕರು ಮಾಡಿದ ವಂಚನೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಅವರನ್ನು ಸರಿಯಾದ ದಾರಿಗೆ ತರಲು ಪ್ರಯತ್ನಿಸುತ್ತಾರೆ. ಅನೇಕ ಹಳ್ಳಿಗಳ ಹಿರಿಯರು ಯುವಕರಿಗೆ ಸೈಬರ್ ವಂಚನೆ ಮಾಡುವುದಿಲ್ಲ ಎಂದು ಪ್ರಮಾಣ ವಚನ ನೀಡಿದರು, ಎಂದು ಹಿರಿಯರು ಹೇಳಿದರು.
1. ‘ರಾಜಸ್ಥಾನ ಪತ್ರಿಕಾ’ದ ‘ಆಪರೇಷನ್ ರಕ್ಷಾ ಕವಚ’ ಮತ್ತು ಭರತಪುರ ವಿಭಾಗದ ಪೊಲೀಸ್ ಮಹಾನಿರ್ದೇಶಕ ರಾಹುಲ ಪ್ರಕಾಶ ಅವರು ತೆಗೆದುಕೊಂಡ ಕಠಿಣ ಕ್ರಮದಿಂದಾಗಿ, ಡಿಗ್ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸೈಬರ್ ವಂಚಕರನ್ನು ಖಂಡಿಸಲು ಪ್ರಾರಂಭವಾಗಿದೆ.
2. ಭರತಪುರ ವಿಭಾಗದ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ, ಪೊಲೀಸ್ ತಂಡವು ಸೈಬರ್ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಅನೇಕ ಜನರು ಜೈಲು ಸೇರಿದ್ದಾರೆ.
3. ಸೈಬರ್ ಅಪರಾಧಗಳಿಂದ ಯುವಕರನ್ನು ತಡೆಯಲು ಗ್ರಾಮದ ಹಿರಿಯರು ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈ ಗ್ರಾಮಗಳಲ್ಲಿ ಈಗ ಸೈಬರ್ ವಂಚನೆ ಘಟನೆಗಳಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.
ಸಂಪಾದಕೀಯ ನಿಲುವುಜನರಿಗೆ ಮೋಸ ಮಾಡುವುದಿಲ್ಲ ಎಂದು ಮಕ್ಕಳು ಮತ್ತು ಯುವಕರಿಗೆ ಪ್ರಮಾಣವಚನ ನೀಡಲಾಯಿತು. ಮಕ್ಕಳಿಗೆ ವಂಚನೆ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿಸುವುದರ ಜೊತೆಗೆ ‘ಸಾಧನೆ’ ಕಲಿಸಿದರೆ ಅವರು ಅಂತಹ ಅಪರಾಧಗಳಿಗೆ ಕೈವೊಡ್ಡುವುದಿಲ್ಲ ! |