‘ನ್ಯಾಯಾಲಯ ಆಯುಕ್ತ’ರ ನೇಮಕಾತಿಯ ವಿರುದ್ಧ ಅಂಜುಮನ್ ಇಂತಜಾಮಿಯಾ ಕಮಿಟಿಯ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ

ಕಾಶಿ ವಿಶ್ವನಾಥ ದೇವಸ್ಥಾನ-ಜ್ಞಾನವಾಪಿ ಮಸೀದಿ ವಿವಾದ

ವಾರಣಾಸಿ : ಉತ್ತರ ಪ್ರದೇಶದ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಅಂಜುಮನ್ ಇಂತಜಾಮಿಯಾ ಕಮಿಟಿಯು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಈ ಅರ್ಜಿಯಲ್ಲಿ ನ್ಯಾಯಾಲಯದ ಆಯುಕ್ತರ ನೇಮಕಾತಿಯನ್ನು ವಿರೋಧಿಸಲಾಗಿತ್ತು. ‘ಸಾಕ್ಷ್ಯ ಸಂಗ್ರಹಿಸಲು ಆಯುಕ್ತರನ್ನು ಘಟನಾಸ್ಥಳಕ್ಕೆ ಕಳುಹಿಸಿದ್ದರೆ, ಅರ್ಜಿದಾರರ ಹಕ್ಕು ಉಲ್ಲಂಘನೆಯಾಗುವುದಿಲ್ಲ. ನ್ಯಾಯಾಂಗ ಆಯೋಗವನ್ನು ಕಳುಹಿಸುವುದು ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗಿಲ್ಲ’, ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜೆ.ಜೆ. ಮುನೀರ್ ಇವರು ಹೇಳಿದ್ದಾರೆ. ನ್ಯಾಯಾಲಯವು ಈ ಹಿಂದೆ ನ್ಯಾಯಾಲಯ ಆಯುಕ್ತರನ್ನು ನೇಮಿಸಿ ಜ್ಞಾನವಾಪಿ ಮಸೀದಿ ಮತ್ತು ಕಾಶಿ ವಿಶ್ವನಾಥ ಮಂದಿರದ ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲಿಸಿ ಚಿತ್ರೀಕರಿಸಲು ಆದೇಶ ನೀಡಿದೆ. ಇದಕ್ಕೆ ಕಮಿಟಿಯು ವಿರೋಧ ವ್ಯಕ್ತಪಡಿಸಿತ್ತು.

೧. ಈ ಪ್ರಕರಣದಲ್ಲಿ ಹಿರಿಯ ವಿಭಾಗದ ದಿವಾಣಿ ನ್ಯಾಯಾಧೀಶರ ಪರವಾಗಿ ನ್ಯಾಯಾಂಗ ಆಯುಕ್ತ ಕಳುಹಿಸುವ ನಿರ್ಧಾರವನ್ನು ಈ ಅರ್ಜಿಯ ಮೂಲಕ ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ರಾಖಿ ಸಿಂಹ ಸೇರಿದಂತೆ ಇತರ ೮ ಜನರನ್ನು ವಾರಣಾಸಿ ದಿವಾಣಿ ನ್ಯಾಯಾಲಯದಲ್ಲಿ ಶೃಂಗಾರಗೌರಿ, ಹನುಮಾನ್, ನಂದಿ ಮತ್ತು ಗಣೇಶನನ್ನು ಪೂಜಿಸುವ ಹಕ್ಕಿನ ವಿರುದ್ಧ ದಾವೆ ಹೂಡಿದ್ದಾರೆ.

೨. ನ್ಯಾಯಾಲಯವು ಮಧ್ಯಂತರ ನಿರ್ದೇಶನಗಳನ್ನು ನೀಡಲು ನಿರಾಕರಿಸಿತು ಮತ್ತು ಅವರ ಉತ್ತರಗಳನ್ನು ಕೋರಿ ವಿರೋಧಕರಿಗೆ ಸಮನ್ಸ್ ನೀಡಿತು. ಇನ್ನೊಂದೆಡೆ ದರ್ಶನ ಪೂಜೆ ವೇಳೆ ಸ್ಥಳ ಪರಿಶೀಲನೆ ನಡೆಸಿ ಭದ್ರತೆ ಒದಗಿಸುವಂತೆ ಹಿಂದೂ ಪಕ್ಷ ಮನವಿ ಮಾಡಿತು. ‘ನ್ಯಾಯವಾದಿ ಆಯುಕ್ತ’ರನ್ನು ಕಳುಹಿಸುವಂತೆ ಹಿಂದೂ ಪಕ್ಷದ ವಕೀಲರು ಒತ್ತಾಯಿಸಿದರು. ಈ ಕುರಿತು ನ್ಯಾಯಾಲಯವು ಅಜಯ್ ಕುಮಾರ್ ಅವರನ್ನು ’ನ್ಯಾಯವಾದಿ ಆಯುಕ್ತ’ರನ್ನಾಗಿ ನೇಮಿಸಿ ವರದಿಯನ್ನು ಸಿದ್ಧಪಡಿಸಿ ಅವರಿಗೆ ಕಳುಹಿಸುವಂತೆ ಸೂಚಿಸಿತು.