Sri Tulaja Bhavani Temple Roof Cracks ಶ್ರೀ ತುಳಜಾಭವಾನಿ ದೇವಾಲಯದ ಗರ್ಭಗುಡಿಯ ಛಾವಣಿಯಲ್ಲಿ ಬಿರುಕು !

ತುಳಜಾಪುರ (ಸೋಲ್ಲಾಪುರ ಜಿಲ್ಲೆ) – ಮಹಾರಾಷ್ಟ್ರದ ಮೂರುವರೆ ಶಕ್ತಿ ಪೀಠಗಳಲ್ಲಿ ಒಂದಾದ ಹಾಗೂ ಮಹಾರಾಷ್ಟ್ರದ ಕುಲದೇವಿ ಶ್ರೀ ತುಳಜಾ ಭವಾನಿ ದೇವಾಲಯದ ಗರ್ಭಗುಡಿಯ ಛಾವಣಿ ಮತ್ತು ಶಿಖರದ ಕೆಳಗಿನ ಭಾಗವು ಬಿರುಕು ಬಿಟ್ಟಿದೆ. ಗರ್ಭಗುಡಿಯ ಗ್ರಾನೈಟ್ ಅನ್ನು ಹೊರತೆಗೆದಾಗ ಇದು ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ. ಸಚಿನ್ ಓಂಬೇಸ್ ಇವರು ಅದನ್ನು ಪರಿಶೀಲಿಸಿದ ನಂತರ ಗರ್ಭಗುಡಿಯಲ್ಲಿನ ಕಲ್ಲುಗಳು ಮತ್ತು ಕಂಬಗಳ ‘ರಚನಾತ್ಮಕ ಲೆಕ್ಕಪರಿಶೋಧನೆ’ (ಕಟ್ಟಡದ ಸ್ಥಿತಿಯನ್ನು ನಿರ್ಣಯಿಸಲು ಮತ್ತು ಸಂಭಾವ್ಯ ಸಮಸ್ಯೆಗಳನ್ನು ಗುರುತಿಸಲು ಸಂಪೂರ್ಣ ಪರಿಶೀಲನೆ) ನಡೆಸಲು ಸೂಚಿಸಿದರು. ಈ ಸಂದರ್ಭದಲ್ಲಿ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕಿ ಜಯ ವಹಾಣೆ ಮತ್ತು ವಾಸ್ತುಶಿಲ್ಪಿ ತೇಜಸ್ವಿನಿ ಆಫಳೆ ಇವರು ಉಪಸ್ಥಿತರಿದ್ದರು.

ಛಾವಣಿಗಳಲ್ಲಿ ಈ ಬಿರುಕುಗಳು ಎಷ್ಟು ದೂರದಲ್ಲಿವೆ? ಇನ್ನೂ ಎಷ್ಟು ಛಾವಣಿಗಳಲ್ಲಿ ಬಿರುಕುಗಳಿವೆ? ಇದನ್ನು ಪರಿಶೀಲಿಸಲು ಪುರಾತತ್ವ ಇಲಾಖೆಯ ತಜ್ಞರನ್ನು ಕರೆಯಿಸಲಾಗುವುದು. ಪುರಾತತ್ವ ಇಲಾಖೆಯ ಮಾರ್ಗದರ್ಶನದಲ್ಲಿ ದೇವಾಲಯದಲ್ಲಿ ಪ್ರಸ್ತುತ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕಲ್ಲಿನ ನಿರ್ಮಾಣ ಇರುವ ಸ್ಥಳಗಳು ಅದೇ ಸ್ಥಿತಿಯಲ್ಲಿ ಉಳಿಯುವಂತೆ ಪುರಾತತ್ವ ಇಲಾಖೆ ಪ್ರಯತ್ನಗಳನ್ನು ಮಾಡುತ್ತಿದೆ.

ಸಂಪಾದಕೀಯ ನಿಲುವು

ದೇವಸ್ಥಾನದಲ್ಲಿ ಭಕ್ತರ ಸಮಿತಿ ಇದ್ದಿದ್ದರೆ, ಸಮಸ್ಯೆ ಉದ್ಭವಿಸುವ ಮೊದಲೇ ಪರಿಹಾರವಾಗುತ್ತಿತ್ತು. ದೇವಸ್ಥಾನಗಳಲ್ಲಿ ಇಂತಹ ಘಟನೆಗಳು ನಡೆಯುತ್ತವೆ, ಇದು ದೇವಸ್ಥಾನದ ಸರಕಾರಿಕರಣದ ದುಷ್ಪರಿಣಾಮ !