ದೇವಾಲಯ ಸಲಹಾಸಮಿತಿಯ ನಾಸ್ತಿಕತೆಯ ಮೇಲೆ ಛೀಮಾರಿ ಹಾಕಿದ ಕೇರಳ ಉಚ್ಚ ನ್ಯಾಯಾಲಯ !

  • ದೇವಾಲಯ ಸರಕಾರೀಕರಣದ ದುಷ್ಪರಿಣಾಮ !

  • ಕಳಪೆ ದರ್ಜೆಯ ಪೂಜಾಸಾಮಗ್ರಿಯ ಮಾರಾಟ ಮಾಡಿದ್ದರಿಂದ ಸ್ವತಃ ನೋಂದಿಸಿಕೊಂಡ ಉಚ್ಚ ನ್ಯಾಯಾಲಯ !

ತಿರುವನಂಥಪುರಮ್ (ಕೇರಳ) – ಕೊಟ್ಟಯಮ್ ಜಿಲ್ಲೆಯಲ್ಲಿ ವಾಯಿಕೋಮ ಮಹಾದೇವ ದೇವಾಲಯದಲ್ಲಿ ಕಳಪೆ ದರ್ಜೆಯ ಪೂಜಾಸಾಮಗ್ರಿಗಳ ಮಾರಾಟ ನಡೆಯುತ್ತಿರುವುದಾಗಿ ಒಂದು ವಾರ್ತೆಯಿಂದ ಗಮನಕ್ಕೆ ಬಂದ ಮೇಲೆ ಕೇರಳ ಉಚ್ಚ ನ್ಯಾಯಾಲಯವು ಅದನ್ನು ಸ್ವತಃ ನೋಂದಿಸಿಕೊಂಡಿತು. ಸಂಬಂಧಪಟ್ಟ ವಾರ್ತೆಯಿಂದ ದೇವಾಲಯಲದಲ್ಲಿ ಉಪಯೋಗಿಸಲಾಗುವ ‘ಕೂವಾಲಮ’ (ಬಿಲ್ವಪತ್ರ) ಹಾಗೂ ಇತರ ‘ವಳಿಪಡೂ’ (ಪೂಜಾಸಾಮಗ್ರಿಗಳು) ಕಡಿಮೆ ದರ್ಜೆಯದ್ದಾಗಿರುವುದಾಗಿ ಬೆಳಕಿಗೆ ಬಂದಿದೆ. ನ್ಯಾಯಾಲಯವು ದೇವಾಲಯ ಸಲಹಾಗಾರ ಸಮಿತಿಯ ಅಶ್ರದ್ಧೆಯ ಬಗ್ಗೆ ಛೀಮಾರಿ ಹಾಕುತ್ತಾ ಅದಕ್ಕೆ ತನ್ನ ಜವಾಬ್ದಾರಿಯನ್ನು ಮನವರಿಕೆ ಮಾಡಿಕೊಟ್ಟಿದೆ. ನ್ಯಾಯಾಲಯವು, ‘ಶಿವನಿಗೆ ಅರ್ಪಿಸಲಾಗುವ ಬಿಲ್ವ ಪತ್ರವು ಭಗವಂತನ ಉತ್ಪತ್ತಿ, ಸ್ಥಿತಿ ಹಾಗೂ ಲಯದ ಕಾರ್ಯದ ಪ್ರತೀಕವಾಗಿರುವುದರಿಂದ ಅದು ಪರಿಶುದ್ಧವಾಗಿರುವುದು ಅಗತ್ಯ. ಸಮಿತಿಯು ಪೂಜಾಸಾಮಗ್ರಿಯ ಗುಣಮಟ್ಟದ ಬಗ್ಗೆ ಸತತ ಗಮನಹರಿಸುವದು ಅಪೇಕ್ಷಿತವಾಗಿದೆ. ಧಾರ್ಮಿಕ ವಿಧಿಗಳಲ್ಲಿ ಹಾಗೂ ಪೂಜೆಗಳಲ್ಲಿ ಬಳಸಲಾಗುವ ಪೂಜಾಸಾಮಗ್ರಿಗಳು ಪರಿಶುದ್ಧವಾಗಿರಬೇಕು.’ ಎಂದು ಹೇಳಿತು.

ನ್ಯಾಯಾಲಯವು ಮುಂದುವರಿಸುತ್ತಾ,

೧. ಇದು ಆಡಳಿತಾಧಿಕಾರಿಯ ಗಂಭೀರ ತಪ್ಪಾಗಿದೆ. ದೇವಾಲಯ ಸಲಹಾ ಸಮಿತಿಯು ತ್ರಾವಣಕೋರ ದೆವಸ್ವಮ್ ಬೋರ್ಡಗೆ ದೇವಾಲಯದ ಕೆಲಸಕಾರ್ಯದಲ್ಲಿ ಸಹಾಯ ಮಾಡುವುದು ಅಪೇಕ್ಷಿತವಾಗಿದೆ.

೨. ಸಮಿತಿಯು ‘ದೇವಾಲಯದ ಸಾಂಪ್ರದಾಯಿಕ ವಿಧಿ ಹಾಗೂ ಉತ್ಸವಗಳನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆಯೇ ?’, ಎಂಬ ಬಗ್ಗೆ ಗಮನ ಹರಿಸುವುದು ಅಪೇಕ್ಷಿತವಾಗಿದೆ. ಹಾಗೂ ‘ಧಾರ್ಮಿಕ ವಿಧಿಗೆ ಸಂಬಂಧಪಟ್ಟ ಆಡಳಿತಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಅವರಿಗೆ ನೀಡಿರುವ ಕಾರ್ಯವನ್ನು ಸಮರ್ಪಕವಾಗಿ ನಡೆಸುತ್ತಿದ್ದಾರೆ’, ಎಂಬುದನ್ನು ನೋಡಬೇಕು.

೩. ಆ ಸಮಯದಲ್ಲಿ ನ್ಯಾಯಾಲಯವು ಪೂಜಾಸಾಮಗ್ರಿಗಳ ಮಾರಾಟ ಮಾಡುವ ಅಂಗಡಿಯವರು ಹಾಗೂ ದೆವಸ್ವಮ್ ಬೋರ್ಡನ ಸಂಬಂಧಪಟ್ಟ ಅಧಿಕಾರಿಗಳು ಒಂದು ತಿಂಗಳಿನೊಳಗೆ ಸರಿಯಾದ ಕಾರ್ಯಾಚರಣೆ ನಡೆಸುವಂತೆ ದೆವಸ್ವಮ್ ಆಯುಕ್ತರಿಗೆ ಆದೇಶ ನೀಡಿತು.

ಸಂಪಾದಕೀಯ ನಿಲುವು

ಇದರ ಅರ್ಥ ಒಂದು ವೇಳೆ ನ್ಯಾಯಾಲಯವು ನೊಂದಿಸಿಕೊಳ್ಳದೆ ಇದ್ದಿದ್ದರೆ ಈ ರೀತಿಯ ಅಪಪ್ರಕಾರವು ಮುಂದುವರೆಯುತ್ತಿತ್ತು ! ಆದ್ದರಿಂದ ದೇವಾಲಯಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸಿ ಅದರ ಆಢಳಿತವನ್ನು ಭಕ್ತರ ಕೈಗೆ ಒಪ್ಪಿಸುವುದು ಅಗತ್ಯ !

‘ದೇವಾಲಯಗಳ ಆಢಳಿತವು ಚೆನ್ನಾಗಿರಲಿ’, ಎಂಬ ಕಾರಣ ನೀಡಿ ಅದರ ಸರಕಾರೀಕರಣ ಮಾಡಲಾಗುತ್ತದೆ; ಆದರೆ ಈ ರೀತಿಯ ಉದಾಹರಣೆಯಿಂದ ಅದರಲ್ಲಿ ಕ್ಷಮಿಸಲಾರದಂತಹ ತಪ್ಪು ನಡೆಯುತ್ತಿರುವುದು ಗಮನಕ್ಕೆ ಬರುತ್ತದೆ. ಇದರ ವಿರುದ್ಧ ಈಗ ಹಿಂದೂಗಳೇ ಒಗ್ಗಟ್ಟಾಗಿ ದೇವಾಲಯಗಳ ಸರಕಾರೀಕರಣವನ್ನು ರದ್ದು ಪಡಿಸಲು ಕಾನೂನುಬದ್ಧ ಮಾರ್ಗದಲ್ಲಿ ಆಂದೋಲನ ಮಾಡಬೇಕು !