ಮುಂಬಯಿ – ಹಿಂದಿ ಚಲನಚಿತ್ರ ನಟಿ ಸಾರಾ ಅಲಿ ಖಾನ್ ಜನವರಿ 6 ರಂದು ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಅವರು ಅದರ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ಅವರು ‘ಸಾರಾ ಕೆ ಸಾಲ ಕಾ ಪಹಿಲಾ ಸೋಮವಾರ’ (ಸಾರಾಳ ಈ ವರ್ಷದ ಮೊದಲ ಸೋಮವಾರ) ‘ಜಯ ಭೋಲೆನಾಥ್!’ ಎಂದು ಶೀರ್ಷಿಕೆ ನೀಡಿದ್ದರು. ಈ ಬಗ್ಗೆ ಅಬ್ದುಲ್ ಎಂಬ ಮುಸ್ಲಿಂ ಅವರನ್ನು ಟೀಕಿಸಿದರು. ಅವನು, ‘ನೀನು ನರಕಕ್ಕೆ ಹೋಗುತ್ತೀಯ’ ಎಂದು ಬರೆದಿದ್ದ. ಒಬ್ಬನು ಅವಳ ಮೇಲೆ ಉಗುಳುತ್ತಿರುವ ‘ಎಮೋಜಿ’ಯನ್ನು ಪೋಸ್ಟ್ ಮಾಡಿದರೆ, ಇನ್ನೊಬ್ಬನು ‘ನೀನು ಮುಸ್ಲಿಂ ಹೆಸರನ್ನು ಏಕೆ ಇಟ್ಟುಕೊಂಡಿದ್ದೀಯ?’ ನೀನು ನಿನ್ನ ಹೆಸರನ್ನು ಬದಲಾಯಿಸು’ ಎಂದು ಬರೆದಿದ್ದರು, ಅಲೆಕ್ಸ್ ರೆಹಾನ್, ‘ನೀನು ಹಿಂದೂನಾ? ಇದನ್ನೆಲ್ಲಾ ಮಾಡುವುದನ್ನು ನಿಲ್ಲಿಸಿ ನಮಾಜ ಮಾಡು’, ಎಂದು ಬರೆದಿದ್ದ.
ಇದಕ್ಕೂ ಮೊದಲು, ಅವರು ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿರುವ ಮತ್ತು ಶ್ರೀ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಿರುವ ಛಾಯಾಚಿತ್ರವನ್ನು ಸಹ ಪ್ರಸಾರ ಮಾಡಿದ್ದರು. ಆಗಲೂ ಅವರು ಸಾಕಷ್ಟು ವಿರೋಧವನ್ನು ಎದುರಿಸಿದ್ದರು.
ಸಂಪಾದಕೀಯ ನಿಲುವುಹಿಂದೂಗಳು ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಏನಾದರೂ ಮಾಡಿದರೆ ಸೂಕ್ತವೆಂದು ಪರಿಗಣಿಸುವ ಧಾರ್ಮಿಕ ಮತಾಂಧರು, ಮುಸ್ಲಿಂ ನಟಿಯೊಬ್ಬಳು ಹಿಂದೂ ಧರ್ಮಕ್ಕೆ ಸಂಬಂಧಿಸಿದ ಏನಾದರೂ ಮಾಡಿದರೆ ವಿರೋಧಿಸುತ್ತಾರೆ. ಈ ‘ಸರ್ವಧರ್ಮ ಸಮಭಾವ’ ಹೇಗೆ ಆಗಬಹುದು ? |