ದಾಳಿಕಾರ ಪೊರ್ಚುಗೀಸರ ವಿರುದ್ಧ ಅಭಿಯಾನ ಪ್ರಾರಂಭಿಸಿರುವ ಭಾಜಪದ ಗೋವಾ ಸರಕಾರಕ್ಕೆ ಅಭಿನಂಧನೆಗಳು ! ಗೋವಾ ಮುಕ್ತವಾಗಿ ೬೦ ವರ್ಷಗಳಾದರೂ ಕೂಡ ಇಲ್ಲಿಯವರೆಗಿನ ಆಢಳಿತಗಾರರು ಅದಕ್ಕಾಗಿ ಯಾವುದೇ ರೀತಿಯ ಪ್ರಯತ್ನ ಮಾಡಲಿಲ್ಲ, ಎಂಬುದು ಲಜ್ಜಾಸ್ಪದ ! ಭಾಜಪ ಸರಕಾರವು ಅಷ್ಟಕ್ಕೇ ನಿಲ್ಲದೆ ಪೊರ್ಚುಗೀಸರ ‘ಇನ್ಕ್ವಿಝಿಶನ’ನಂತಹ ಅಮಾನವೀಯ ಅತ್ಯಾಚಾರವನ್ನು ಜಗತ್ತಿನ ಮುಂದೆ ತರಲು ಹಾಗೂ ಪಠ್ಯಪುಸ್ತಕಗಳ ಮೂಲಕ ಹೊಸ ಪೀಳಿಗೆಗೆ ಹೇಳುವ ಅಭಿಯಾನವನ್ನು ಕೈಗೊಳ್ಳಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ ! |
ಪಣಜಿ, ಏಪ್ರಿಲ್ ೧೪ (ವಾರ್ತೆ.) – ಹಳೆಗೂಡಿಕೆ ಹಾಗೂ ಪುರಾತತ್ವ ನಿರ್ದೇಶನಾಲಯವು ಪೊರ್ಚುಗೀಸರು ಗೋವಾದಲ್ಲಿ ತಮ್ಮ ಕ್ರೂರ ಅಧಿಕಾರಾವಧಿಯಲ್ಲಿ ನಾಶ ಮಾಡಿದ ಹಿಂದೂಗಳ ದೇವಾಲಯಗಳನ್ನು ಶೋಧನೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ರಾಜ್ಯ ಸರಕಾರವು ನಿರ್ದೇಶನಾಲಯಕ್ಕೆ ಪುರಾತತ್ವ ಸ್ಥಳಗಳ ಪಟ್ಟಿಯನ್ನು ತಯಾರಿಸಲು ಹೇಳಿದೆ.
Goa begins work on restoring temples destroyed by Portuguese: CM https://t.co/6UbO4vP1D6
— HinduPost (@hindupost) April 8, 2022
ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತರವರು ರಾಜ್ಯ ಬಜೆಟನ ಸಮಯದಲ್ಲಿ ಪೊರ್ಚುಗೀಸರು ನಾಶ ಮಾಡಿರುವ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡುವುದಾಗಿ ಘೋಷಿಸಿದ್ದರು. ಹಳೆಗೂಡಿಕೆ ಹಾಗೂ ಪುರಾತತ್ವ ನಿರ್ದೇಶನಾಲಯದ ಬಳಿ ಪುರಾತನ ಮಹತ್ವವಿರುವಂತಹ ಸ್ಥಳಗಳ ವಿಸ್ತೃತ ಪಟ್ಟಿಯಿದೆ ಹಾಗೂ ನಿರ್ದೇಶನಾಲಯವು ಎಲ್ಲಾ ಸ್ಥಳಗಳ ಸಮೀಕ್ಷೆ ನಡೆಸುವ ಕೆಲಸವನ್ನು ಕೈಗೊಂಡಿದೆ. ರಾಜ್ಯದಲ್ಲಿ ೫೦ ಸ್ಥಳಗಳಿಗೆ ಪುರಾತತ್ವ ಮಹತ್ವವಿದೆ ಹಾಗೂ ಆ ಸ್ಥಳಗಳನ್ನು ಹಳೆಗೂಡಿಕೆ ಮತ್ತು ಪುರಾತತ್ವ ನಿರ್ದೇಶನಾಲಯವು ಪ್ರಕಟಿಸಿದೆ. ಪುರಾತತ್ವ ಮಹತ್ವವಿರುವ ೨೧ ಸ್ಥಳಗಳನ್ನು ಭಾರತೀಯ ಪುರಾತತ್ವ ನಿರ್ದೇಶನಾಲಯವು ಪ್ರಕಟಿಸಿದ್ದು, ಅನೇಕ ಐತಿಹಾಸಿಕ ಮಹತ್ವವಿರುವ ಸ್ಥಳಗಳು ಅಸ್ತವ್ಯಸ್ತವಾಗಿದೆ. ಸದ್ಯಕ್ಕೆ ನಾಶ ಮಾಡಿರುವ ಸ್ಥಳಗಳ ಪಟ್ಟಿಯು ನಿರ್ದೇಶನಾಲಯದ ಬಳಿ ಇಲ್ಲ. ಅದನ್ನು ಕೂಡ ತಯಾರಿಸಲಾಗುವುದು.