ಕಟನಿ (ಮಧ್ಯಪ್ರದೇಶ) ಇಲ್ಲಿ ರೈಲು ನಿಲ್ದಾಣ ಪ್ರದೇಶದಲ್ಲಿನ ಹಳೆಯ ಶ್ರೀರಾಮ ಮಂದಿರದ ಮುಂಭಾಗದ ಗೋಡೆಯನ್ನು ಹಿಂದೂ ಸಂಘಟನೆಗಳು ಕೆಡವಿದವು !

ಕಟನಿ (ಮಧ್ಯಪ್ರದೇಶ) – ಕೆಲವು ವರ್ಷಗಳ ಹಿಂದೆ ರೈಲ್ವೇ ಆಡಳಿತವು ಕಟನಿಯ ರೈಲು ನಿಲ್ದಾಣದ ಪ್ರದೇಶದ ಹಳೆಯ ಶ್ರೀ ರಾಮ ಮಂದಿರದ ಮುಂಭಾಗದಲ್ಲಿ ಗೋಡೆಯೊಂದನ್ನು ನಿರ್ಮಿಸಿತ್ತು. ಇದರಿಂದ ದೇವಸ್ಥಾನಕ್ಕೆ ತೆರಳಲು ಭಕ್ತರು ಪರದಾಡುವಂತಾಗಿತ್ತು. ರೈಲ್ವೇ ಆಡಳಿತದ ಈ ಕ್ರಮಕ್ಕೆ ಹಿಂದೂ ಸಂಘಟನೆಗಳು ಆಗಾಗ್ಗೆ ವಿರೋಧ ವ್ಯಕ್ತಪಡಿಸಿದ್ದವು.

(ಸೌಜನ್ಯ : SS STUDIO)

ಕೊನೆಗೆ ಶ್ರೀರಾಮ ನವಮಿಯ ಮುನ್ನಾ ದಿನ ಈ ಸಂಘಟನೆಗಳು ತಾವಾಗಿಯೇ ಗೋಡೆ ಕೆಡವಿದವು. ಇದೀಗ ದೇವಸ್ಥಾನಕ್ಕೆ ಪ್ರವೇಶ ಕಲ್ಪಿಸಲು ರೈಲ್ವೇ ಆಡಳಿತ ಒಪ್ಪಿಗೆ ನೀಡಿದೆ.