ಭಾರತ-ಬಾಂಗ್ಲಾದೇಶ ಗಡಿಯಲ್ಲಿ ನಡೆದ ಘಟನೆ
ಮಾಲದಾ (ಬಂಗಾಳ) – ಬಂಗಾಳದ ಮಾಲದಾ ಜಿಲ್ಲೆಯ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಗಡಿ ಭದ್ರತಾ ಪಡೆ ಸೈನಿಕರು ಭಾರತೀಯ ಗಡಿಯಲ್ಲಿ ಬೇಲಿ ಹಾಕುವ ಕೆಲಸ ಮಾಡುತ್ತಿದ್ದಾಗ, ಬಾಂಗ್ಲಾದೇಶದ ಸೇನೆಯು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಇದರಿಂದ ಎರಡೂ ಸೇನೆಗಳ ನಡುವೆ ಸಂಘರ್ಷಕ್ಕೆ ಕಾರಣವಾಯಿತು. ಸುಖದೇವ್‌ಪುರದ ಗ್ರಾಮಸ್ಥರು ಈ ಬಗ್ಗೆ ಮಾಹಿತಿ ಪಡೆದುಕೊಂಡು ಅವರು ಕತ್ತಿ, ಕೊಡಲಿಗಳು ಮತ್ತು ಲಾಠಿಗಳೊಂದಿಗೆ ಗಡಿಯನ್ನು ತಲುಪಿದರು. ಭಾರತೀಯ ನಾಗರಿಕರ ಉಗ್ರ ನೋಟವನ್ನು ನೋಡಿ, ಬಾಂಗ್ಲಾದೇಶದ ಸೈನಿಕರು ಭಯಭೀತರಾಗಿ ಅಲ್ಲಿಂದ ಕಾಲ್ಕಿತ್ತರು. ಈ ಸಂದರ್ಭದಲ್ಲಿ ಗ್ರಾಮಸ್ಥರು ‘ಭಾರತ್ ಮಾತಾ ಕಿ ಜಯ’, ‘ವಂದೇ ಮಾತರಂ’ ಮತ್ತು ‘ಜಯ ಶ್ರೀ ರಾಮ’ ಮುಂತಾದ ಘೋಷಣೆಗಳನ್ನು ಕೂಗಿದರು.
ಗಡಿ ಬೇಲಿ ಯೋಜನೆಗೆ ಎರಡೂ ದೇಶಗಳು ಈಗಾಗಲೇ ಒಪ್ಪಿಕೊಂಡಿತ್ತು. ಆದರೂ, ಬಾಂಗ್ಲಾದೇಶದ ಸೈನಿಕರು ಅದನ್ನು ವಿರೋಧಿಸಲು ಬಂದಿದ್ದರು. ಗಡಿ ಭದ್ರತಾ ಪಡೆಯ ಅಧಿಕಾರಿ ಮಟ್ಟದಲ್ಲಿ ಈ ವಿವಾದವನ್ನು ಬಾಂಗ್ಲಾದೇಶಕ್ಕೆ ತಲುಪಿಸಿತು. ಇದಾದ ನಂತರ, ವಿವಾದ ಇತ್ಯರ್ಥವಾಯಿತು. ಭಾಜಪದ ಬಂದಾಲದ ಶಾಸಕ ಮತ್ತು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಈ ಘಟನೆಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ಸಂಪಾದಕೀಯ ನಿಲುವುಭಾರತಕ್ಕೆ ಹೋಲಿಸಿದರೆ ಬಾಂಗ್ಲಾದೇಶದ ಸೇನೆಯ ಸಾಮರ್ಥ್ಯಗಳು ನಗಣ್ಯವಾಗಿದ್ದರೂ, ಭಾರತೀಯ ಸೇನೆಯನ್ನು ಈ ರೀತಿ ಬೆದರಿಸಲು ಬಾಂಗ್ಲಾದೇಶದ ಸೇನೆ ಏಕೆ ಪ್ರಯತ್ನಿಸುತ್ತಿದೆ ಎಂಬುದನ್ನು ಪರಿಗಣಿಸಿದರೆ, ಭಾರತವು ಈಗ ಆಕ್ರಮಣಕಾರಿಯಾಗುವುದು ಅತ್ಯಂತ ಅಗತ್ಯವಾಗಿದೆ ಎಂಬುದು ಗಮನಕ್ಕೆ ಬರುತ್ತದೆ ! |