ಹಿಂದೂ ತೀರ್ಥಯಾತ್ರೆಗೆ ಹೋಗಲು ಮುಸಲ್ಮಾನ ಚಾಲಕರಿರುವ ವಾಹನದಲ್ಲಿ ಕೂರಬಾರದು !

ಕರ್ನಾಟಕದಲ್ಲಿರುವ ಹಿಂದೂಗಳಿಗೆ ಹಿಂದೂ ಸಂಘಟನೆಗಳ ಮನವಿ !

ಇಂತಹ ಮನವಿ ಮಾಡುವ ಹಿಂದೂ ಸಂಘಟನೆಗಳನ್ನು ‘ಮತಾಂಧ’ ಎಂದು ಕರೆದರೆ ಈ ಸಮಸ್ಯೆ ಬಗೆಹರಿಯುವುದಿಲ್ಲ, ಆದರೆ ‘ಇಂತಹ ಮನವಿಯನ್ನು ಮಾಡುವ ಸಮಯ ಏಕೆ ಬಂತು ?’, ಮತ್ತು ‘ಅವರಿಗೆ ಅಭದ್ರತೆಯ ಭಾವನೆ ಏಕೆ ಬರುತ್ತಿದೆ ?’, ಎಂಬುದರ ತನಿಖೆ ನಡೆಸುವುದು ಅಗತ್ಯವಿದೆ ! – ಸಂಪಾದಕರು

ಬೆಂಗಳೂರು – ಕರ್ನಾಟಕ ರಾಜ್ಯದಲ್ಲಿ ಹಿಜಾಬ್, ಹಲಾಲ್ ಮಾಂಸ ಮತ್ತು ಮಸೀದಿಗಳಲ್ಲಿನ ಭೋಂಗಾಗಳ ನಂತರ ಭಕ್ತರನ್ನು ದೇವಸ್ಥಾನಗಳಿಗೆ ಕರೆತರುತ್ತಿರುವ ಮುಸ್ಲಿಂ ಸಾರಿಗೆ ಸಂಸ್ಥೆಗಳ ವಿರುದ್ಧ ಹಿಂದೂ ಸಂಘಟನೆಗಳು ಅಭಿಯಾನವನ್ನು ಪ್ರಾರಂಭಿಸಿವೆ. ‘ಭಾರತರಕ್ಷಣಾ ವೇದಿಕೆ’ಯ ಪ್ರಶಾಂತ ಬಂಗೇರಾ ಮಾತನಾಡಿ, ‘ತೀರ್ಥಯಾತ್ರೆಗೆ ತೆರಳುವಾಗ ಹಿಂದೂಗಳು ಮುಸ್ಲಿಂ ಚಾಲಕರ ವಾಹನನಲ್ಲಿ ಕೂರಬಾರದು. ಅವರ ಟ್ಯಾಕ್ಸಿ ಅಥವಾ ಇತರ ವಾಹನಗಳನ್ನು ಬಳಸಬೇಡಿ. ಅಲ್ಲದೆ, ಮುಸ್ಲಿಂ ಸಾರಿಗೆ ಸಂಸ್ಥೆಗಳ ಒಡೆತನದ ವಾಹನಗಳನ್ನು ಬಳಸಬಾರದು. ಎಲ್ಲಾ ಹಿಂದೂ ಸಂಘಟನೆಗಳು ಈ ಕರೆಯನ್ನು ಬೆಂಬಲಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು’, ಎಂದು ಮನವಿ ಮಾಡಿದರು. ಈ ಕರೆಯನ್ನು ಶ್ರೀರಾಮ ಸೇನೆಯೂ ಬೆಂಬಲಿಸಿದೆ. ರಾಜ್ಯ ಸಚಿವ ಕೆ.ಎಸ್. ಈಶ್ವರಪ್ಪಾ ಇವರು, ‘ನನಗೆ ಈ ಅಭಿಯಾನದ ಬಗ್ಗೆ ಗೊತ್ತಿಲ್ಲ’ ಎಂದು ಹೇಳಿದರು.

ಹಿಂದೂಗಳನ್ನು ‘ಕಾಫಿರ್’ ಎಂದು ಕರೆಯುವವರು ತೀರ್ಥಕ್ಷೇತ್ರದಲ್ಲಿ ಬೇಡ ! – ಭಾರತರಕ್ಷಣಾ ವೇದಿಕೆ

(ಸೌಜನ್ಯ : TV 9 Kannada)

ಭಾರತರಕ್ಷಣಾ ವೇದಿಕೆಯ ಮುಖ್ಯಸ್ಥ ಭರತ್ ಶೆಟ್ಟಿ ಮಾತನಾಡಿ, “ನಾವು ತೀರ್ಥಯಾತ್ರೆಗೆ ತೆರಳುವಾಗ ಮಾಂಸಾಹಾರ ಸೇವಿಸುವುದಿಲ್ಲ. ಹಿಂದೂ ದೇವತೆಗಳಲ್ಲಿ ನಂಬಿಕೆಯಿಲ್ಲದವರು ಮತ್ತು ಮಾಂಸ ತಿನ್ನುವವರು ನಮ್ಮ ಧರ್ಮ ಮತ್ತು ಸಂಸ್ಕೃತಿಯನ್ನು ಅವಮಾನಿಸುತ್ತಾರೆ. ಅವರು ನಮ್ಮನ್ನು ‘ಕಾಫಿರ್’ (ಅಲ್ಲಾಹನನ್ನು ನಂಬದವರು) ಎಂದು ಕರೆಯುತ್ತಾರೆ. ಅವರಿಗೆ ಅವರ ಧರ್ಮದಷ್ಟೇ ನಮಗೆ ನಮ್ಮ ಧರ್ಮ ಮುಖ್ಯವಾಗಿದೆ ಎಂದು ಹೇಳಿದರು.

೧. ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕ ಇವರು ‘ಕರ್ನಾಟಕದ ಬೆಳಗಾವಿ ಜಿಲ್ಲೆಯ ಪ್ರಸಿದ್ಧ ಸವದತ್ತಿ ಯಲ್ಲಮ್ಮ ದೇಗುಲದಲ್ಲಿರುವ ಮುಸ್ಲಿಂ ವ್ಯಾಪಾರಿಗಳು ಮತ್ತು ಮಾರಾಟಗಾರರಿಗೆ ದತ್ತಿ ಇಲಾಖೆ ನೋಟಿಸ್ ಜಾರಿ ಮಾಡುವಂತೆ’ ಮನವಿ ಮಾಡಿದ್ದಾರೆ. ಮುಸ್ಲಿಂ ವ್ಯಾಪಾರಸ್ಥರು ದೇವಸ್ಥಾನದ ಬಳಿ ಇರುವ ಅಂಗಡಿಗಳನ್ನು ತೆರವು ಮಾಡದಿದ್ದರೆ, ಶ್ರೀರಾಮ ಸೇನೆ ಕಾರ್ಯಕರ್ತರು ದತ್ತಿ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಭೇಟಿ ಮಾಡಿ ಅಂಗಡಿಗಳನ್ನು ತೆರವು ಮಾಡುವಂತೆ ಒತ್ತಾಯಿಸಲಾಗುವುದು ಎಂದರು.

೨. ಶ್ರೀ. ಪ್ರಮೋದ್ ಮುತಾಲಿಕ್ ಅವರು ಈ ಹಿಂದೆ ಉಪಸಭಾಪತಿ ಹಾಗೂ ಭಾಜಪ ಶಾಸಕ ಆನಂದ್ ಮಾಮನಿ ಅವರನ್ನು ಭೇಟಿ ಮಾಡಿ ಸವದತ್ತಿ ಯೆಲ್ಲಮ್ಮ ದೇಗುಲದ ಪರಿಸರದಿಂದ ಹಿಂದೂಯೇತರ ವ್ಯಾಪಾರಿಗಳನ್ನು ತೆರವು ಮಾಡುವಂತೆ ಒತ್ತಾಯಿಸಿದ್ದರು. ‘ಲಕ್ಷಾಂತರ ಯಾತ್ರಿಕರು ದೇವಾಲಯಕ್ಕೆ ಭೇಟಿ ನೀಡುತ್ತಾರೆ ಮತ್ತು ಶೇ. ೫೦ ಕ್ಕಿಂತ ಹೆಚ್ಚು ಮುಸ್ಲಿಂ ವ್ಯಾಪಾರಿಗಳು ಇಲ್ಲಿ ತಮ್ಮ ವ್ಯಾಪಾರವನ್ನು ಮಾಡುತ್ತಾರೆ’, ಎಂದು ಅವರು ಪ್ರತಿಪಾದಿಸಿದ್ದರು.