ಮಥುರಾದಲ್ಲಿ ಶ್ರೀಕೃಷ್ಣಜನ್ಮಭೂಮಿಯ ಮೇಲೆ ಶ್ರೀಕೃಷ್ಣ ದೇವಾಲಯದ ಮೇಲಿರುವ ಧ್ವನಿವರ್ಧಕಗಳ ಸದ್ದನ್ನು ಕಡಿಮೆ ಮಾಡಲಾಗುವುದು !

ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರ ಕರೆಗೆ ಸ್ಪಂದನೆ !

ಮಥುರಾ (ಉತ್ತರಪ್ರದೇಶ) – ಇಲ್ಲಿಯ ಶ್ರೀಕೃಷ್ಣಜನ್ಮಭೂಮಿಯಲ್ಲಿನ ಶ್ರೀಕೃಷ್ಣ ದೇವಾಲಯದ ಮೇಲೆ ಹಾಕಲಾಗುವ ಧ್ವನಿವರ್ಧಕಗಳ ಶಬ್ಧವನ್ನು ಕಡಿಮೆಗೊಳಿಸುವಂತೆ ಸರಕಾರವು ತೀರ್ಮಾನ ತೆಗೆದುಕೊಂಡಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ರಾಜ್ಯದಲ್ಲಿರುವ ಧಾರ್ಮಿಕ ಸ್ಥಳಗಳಲ್ಲಿರುವ ಧ್ವನಿವರ್ಧಕಗಳ ಶಬ್ಧವನ್ನು ನ್ಯೂನ ಮಾಡಲು ಕರೆ ನೀಡಿದ್ದರು. ಅದಕ್ಕನುಸಾರ ಶ್ರೀಕೃಷ್ಣ ದೇವಾಲಯದ ಆಢಳಿತವು ಈ ನಿರ್ಧಾರವನ್ನು ತೆಗೆದುಕೊಂಡಿದೆ. ದೇವಾಲಯದ ಧ್ವನಿವರ್ಧಕಗಳಿಂದ ಪ್ರತಿದಿನ ಮುಂಜಾನೆ ಐದುಮುವತ್ತರಿಂದ ಆರುಮುವತ್ತರ ಸಮಯದಲ್ಲಿ ಮಂಗಲಾಚರಣ ಆರತಿ ಹಾಗೂ ವಿಷ್ಣು ಸಹಸ್ರನಾಮವನ್ನು ಕೇಳಿಸಲಾಗುತ್ತದೆ. ಈಗ ಧ್ವನಿವರ್ಧಕಗಳ ಶಬ್ಧವು ದೇವಾಲಯದ ಪರಿಸರದಿಂದ ಹೊರಗೆ ಹೋಗದೆ ಇರುವಷ್ಟು ಕಡಿಮೆಗೊಳಿಸಲಾಗುವುದು.

ಗೌತಮಬುದ್ಧ ನಗರದಲ್ಲಿ ೯೦೦ ಧಾರ್ಮಿಕ ಸ್ಥಳಗಳಿಗೆ ಪೊಲೀಸರು ನೋಟೀಸ್ ಕಳುಹಿಸಿ ಅವರ ಧ್ವನಿವರ್ಧಕಗಳ ಶಬ್ಧವನ್ನು ಕಡಿಮೆ ಮಾಡಲು ಆದೇಶ ನೀಡಿದ್ದಾರೆ. ಒಂದು ವೇಳೆ ಅವರು ನ್ಯಾಯಾಲಯದ ಆದೇಶಗಳನ್ನು ಪಾಲಿಸದೆ ಹೋದರೆ, ಅವರ ಮೇಲೆ ಕಾರ್ಯಾಚರಣೆ ಮಾಡಲಾಗುವುದು ಎಂದು ಈ ನೊಟೀಸಿನಲ್ಲಿ ಹೇಳಲಾಗಿದೆ.

ಸಂಪಾದಕೀಯ ನಿಲುವು

ಹಿಂದೂಗಳು ಕಾಯಿದೆಯನ್ನು ಪಾಲಿಸುತ್ತಾರೆ ಆದ್ದರಿಂದ ದೇವಾಲಯದ ವತಿಯಿಂದ ಮೊಟ್ಟಮೊದಲು ಈ ರೀತಿಯ ತೀರ್ಮಾನ ತೆಗೆದುಕೊಳ್ಳಲಾಯಿತು; ಆದರೆ ಮಸೀದಿಯ ಮೇಲಿರುವ ಧ್ವನಿವರ್ಧಕಗಳ ವಿಷಯದಲ್ಲಿ ಆ ರೀತಿ ಕಂಡು ಬಂದಿಲ್ಲ. ಇದರಿಂದ ಯಾರು ಕಾಯಿದೆಯನ್ನು ಪಾಲಿಸುವುದಿಲ್ಲ ಹಾಗೂ ಅನ್ಯ ಪಂಥದವರನ್ನು ತಪ್ಪಿತಸ್ತರನ್ನಾಗಿಸುತ್ತಾರೆ, ಎಂಬುದು ಸ್ಪಷ್ಟವಾಗುತ್ತದೆ ! ಈಗ ಸರಕಾರವು ಅಂತಹವರ ಮೇಲೆ ಕಠಿಣ ಕಾರ್ಯಾಚರಣೆ ನಡೆಸಲಿ !