ಪ್ರಯಾಗರಾಜ್, ಜನವರಿ 9 (ಸುದ್ದಿ) – ಅಖಿಲ ಭಾರತದ ಮೂರೂ ಆಖಾಡಗಳು ಸಾಮೂಹಿಕವಾಗಿ ಜನವರಿ 8 ರಂದು ಕುಂಭ ಕ್ಷೇತ್ರದಲ್ಲಿ ಪ್ರವೇಶಿಸಿವೆ. ಇದರಲ್ಲಿ ಶ್ರೀ ಮಹಂತ್, ಆಚಾರ್ಯ ಮಹಾಮಂಡಲೇಶ್ವರ, ಜಗದ್ಗುರು ಶಂಕರಾಚಾರ್ಯರು ಇವರುಗಳ ಸಮಾವೇಶ ಇದೆ. ಇದರಲ್ಲಿ ಖಾಲ್ಸಾ ಆಖಾಡವೂ ಸೇರಿದೆ. ಸನಾತನ ಧರ್ಮವನ್ನು ವಿಶ್ವದಲ್ಲಿಯೇ ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯಲು ಗಂಗಾ ಮಾತೆಯ ಚರಣಗಳಲ್ಲಿ ಪ್ರಾರ್ಥಿಸಲಿದ್ದೇವೆ. ಈ ಮೇಳವು ನಿರ್ವಿಘ್ನವಾಗಿ ನಡೆಯಬೇಕು. ಇದರಲ್ಲಿ ಯಾವುದೇ ವಿಘ್ನ ಬಾರದಿರಲಿ, ಇದಕ್ಕಾಗಿ ನಾವು ಗಂಗಾಮಾತೆಯನ್ನು ಪ್ರಾರ್ಥಿಸಲಿದ್ದೇವೆ. ಕುಂಭಮೇಳದಲ್ಲಿ ಭಾಗವತ್ ಕಥೆ, ರಾಮಾಯಣ ಕಥೆ, ವಿವಿಧ ಯಾಗಗಳ ಅನುಷ್ಟಾನದ ಮೂಲಕ ಸನಾತನ ಧರ್ಮದ ಪ್ರಚಾರ ಕಾರ್ಯ ಮಾಡಲಿದ್ದೇವೆ, ಎಂದು ದಿಗಂಬರ ಆಖಾಡದ ಮಹಂತ್ ಪೂಜನೀಯ ರಾಮ ಕಿಶೋರದಾಸ್ ಶಾಸ್ತ್ರಿ ಮಹಾರಾಜ ಅವರು ‘ಸನಾತನ ಪ್ರಭಾತ’ದ ವರದಿಗಾರರಿಗೆ ಮಾಹಿತಿ ನೀಡಿದರು.