ಗೋರಕನಾಥ ದೇವಸ್ಥಾನದ ಮೇಲೆ ಜಿಹಾದಿಯಿಂದ ಕತ್ತಿಯಿಂದ ದಾಳಿ !

2 ಪೊಲೀಸರಿಗೆ ಗಾಯ !

ದಾಳಿ ನಡೆಸುವಾಗ `ಅಲ್ಲಾಹು ಅಕ್ಬರ್’ನ ಘೋಷಣೆ !

ದಾಳಿಖೋರ ಮುರ್ತಾಜ್ ಇವನು ಐಐಟಿ ಮುಂಬಯ ಕೆಮಿಕಲ್ ಇಂಜಿನಿಯರ್ ಪದವೀಧರ

* ಪ್ರಖರ ಹಿಂದುತ್ವನಿಷ್ಠ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಈ ದೇವಸ್ಥಾನದ ಮಹಂತರಾಗಿದ್ದಾರೆ. ಆದ್ದರಿಂದ ಈ ದೇವಸ್ಥಾನ ಹಿಂದುತ್ವದ ಕೇಂದ್ರವಾಗಿದೆ. ಅವರು ಹಿಂದೂತ್ವದ ಆಸ್ಮಿತೆಯ ಪ್ರತೀಕ ಆಗಿದ್ದಾರೆ. ಆದ್ದರಿಂದಲೇ ಅದು ಜಿಹಾದಿಗಳ ಕಣ್ಣುಗಳಿಗೆ ಕುಟಕುತ್ತದೆ. ಹಿಂದೂಗಳ ಆಸ್ಮಿತೆಯ ಮೇಲೆ ಆಘಾತ ಮಾಡುವುದಕ್ಕಾಗಿ ಈ ದಾಳಿ ನಡೆದಿದೆ ಎಂದು ಹೇಳಿದರೆ ತಪ್ಪಾಗಲಾರದು ?- ಸಂಪಾದಕರು 

(ಸೌಜನ್ಯ : Hindustan Times )

ಗೊರಖಪುರ (ಉತ್ತರಪ್ರದೇಶ) – ಇಲ್ಲಿಯ ಪ್ರಸಿದ್ಧ ಗೋರಕನಾಥ ದೇವಸ್ಥಾನದ ಮೇಲೆ ಅಹಮದ ಮುರ್ತಜಾ ಅಬ್ಬಾಸಿ ಎಂಬ ಯುವಕನು ಏಪ್ರಿಲ್ 3 ರ ರಾತ್ರಿ `ಅಲ್ಲಾಹು ಅಕ್ಬರ್’ನ(`ಅಲ್ಲಾ ಶ್ರೇಷ್ಠನಾಗಿದ್ದಾನೆ’ಯ) ಘೋಷಣೆ ನೀಡುತ್ತಾ ಕತ್ತಿಯಿಂದ ದಾಳಿ ನಡೆಸಿದನು. ಇದರಲ್ಲಿ 2 ಪೊಲೀಸರು ಗಾಯಗೊಂಡರು. ಅಲ್ಲಿ ನೇಮಕಗೊಂಡಿರುವ ಸುರಕ್ಷಾ ರಕ್ಷಕರು ಅವನನ್ನು ಬಂಧಿಸಿದರು. ಮುರ್ತಜಾ ದೇವಸ್ಥಾನದೊಳಗೆ ನುಗ್ಗಲು ಪ್ರಯತ್ನಿಸುತ್ತಿರುವಾಗ ಘಟನೆ ನಡೆದಿದೆ. ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಈ ದೇವಸ್ಥಾನದ ಮಹಂತರಾಗಿದ್ದಾರೆ. ಈ ದೇವಸ್ಥಾನದಲ್ಲಿ ಈ ಮೊದಲು ಜಿಹಾದಿ ಭಯೋತ್ಪಾದಕರಿಂದ ಗುರಿಯಾಗಿಸುವ ಪ್ರಯತ್ನ ಮಾಡಲಾಗಿತ್ತು. ಆದ್ದರಿಂದ ಇಲ್ಲಿ ಬಿಗಿ ಬಂದೋಬಸ್ತು ಇರುತ್ತದೆ.

( ಸೌಜನ್ಯ : TIMES NOW )

1. ಬಂಧಿಸಲಾದ ಜಿಹಾದಿ ಮುರ್ತಜಾ ಗೋರಖಪುರದ ಸಿವಿಲ್ ಲೈನ್‍ನಲ್ಲಿ ವಾಸವಾಗಿದ್ದಾನೆ. ಆತ ಐಐಟಿ ಮುಂಬಯಿಯಿಂದ ಕೆಮಿಕಲ್ ಇಂಜಿನಿಯರಿಂಗ ಪದವಿಯನ್ನು ಹೊಂದಿದ್ದಾನೆ. ಆತ ಸಂಜೆ ಈ ದೇವಸ್ಥಾನದ ಬಳಿ ಬಂದು ಒಳಗೆ ಪ್ರವೇಶಿಸಲು ಪ್ರಯತ್ನಿಸುವಾಗ ಅವನಿಗೆ ಸುರಕ್ಷಾ ರಕ್ಷಕರು ಪರೀಕ್ಷಣೆಗಾಗಿ ತಡೆದರು. ಆಗ ಆತನು ಅಲ್ಲಾಹು ಅಕ್ಬರ್ ಘೋಷಣೆ ನೀಡುತ್ತಾ ಆತನ ಬಳಿ ಇದ್ದ ಕತ್ತಿಯನ್ನು ಹೊರತೆಗೆದು ಪೊಲೀಸರ ಮೇಲೆ ದಾಳಿ ನಡೆಸಿದನು. ಇದರಲ್ಲಿ ಗೋವಿಂದ ಗೌಡ ಮತ್ತು ಅನಿಲ್ ಪಾಸ್ವಾನ ಇವರಿಬ್ಬರು ಗಾಯಗೊಂಡರು.

2. ನಂತರ ಮುರ್ತಜಾ ಓಡಿ ಹೋಗುವ ಪ್ರಯತ್ನ ಮಾಡುವಾಗ ಬೇರೆ ಪೋಲೀಸರು ಮತ್ತು ನೆರೆದಿದ್ದ ನಾಗರಿಕರು ಅವನನ್ನು ಬೆನ್ನಟ್ಟಿದರು. ಸರಿಸುಮಾರು ಒಂದು ಗಂಟೆಯ ವರೆಗೆ ಬಂಧಿಸುವ ಪ್ರಯತ್ನ ನಡೆದಿತ್ತು. (ಒಬ್ಬ ಭಯೋತ್ಪಾದಕರನ್ನು ಹಿಡಿಯಲು ಒಂದು ಗಂಟೆಯ ಸಮಯ ತೆಗೆದುಕೊಳ್ಳುವ ಪೊಲೀಸರು ಶಸ್ತ್ರಸಜ್ಜಿತ ಜಿಹಾದಿ ಭಯೋತ್ಪಾದಕರನ್ನು ಹೇಗೆ ಎದುರಿಸುವರು ? – ಸಂಪಾದಕರು) ನಂತರ ಅವನನ್ನು ಬಂಧಿಸುವಲ್ಲಿ ಯಶಸ್ವಿಯಾದರು. ನಾಗರಿಕರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವುದರಿಂದ ಆತ ಗಾಯಗೊಂಡನು.

3. ಪೊಲೀಸರು ಅವನ ವಿಚಾರಣೆ ನಡೆಸಿದ ನಂತರ ಆತ ತನ್ನ ಹೆಸರು ಮತ್ತು ಎಲ್ಲಿಂದ ಬಂದಿರುವುದು ಎಂಬುದನ್ನು ಹೇಳಿದನು. ಆತ ಏಪ್ರಿಲ್ 3 ರಂದು ಬೆಳಿಗ್ಗೆ ಮುಂಬಯಿಯಿಂದ ಗೋರಖಪುರ್‍ಗೆ ಬಂದಿದ್ದನು. ಪೊಲೀಸರು ಆತನಿಂದ 2 ಕತ್ತಿ, ಪ್ಯಾನ್ ಕಾರ್ಡ್ ಮತ್ತು ಒಂದು ಲ್ಯಾಪ್ಟಾಪ್ ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಹಾಗೂ ಉಗ್ರ ನಿಗ್ರಹ ದಳದಿಂದ ಆತನ ವಿಚಾರಣೆ ನಡೆಸಲಾಗುತ್ತಿದೆ. ಈ ದಾಳಿಯ ಹಿಂದಿನ ಉದ್ದೇಶವೇನು ? ಇದರ ಮಾಹಿತಿ ಕಲೆ ಹಾಕಲಾಗುತ್ತಿದೆ.

4. ಪೊಲೀಸರು ಮುರ್ತಜಾ ಇವನ ಮನೆಗೆ ಹೋಗಿ ವಿಚಾರಣೆ ನಡೆಸುತ್ತಿದ್ದಾರೆ. ಮನೆಯ ತಪಾಸಣೆ ನಡೆಸಲಾಗಿದೆ. ಹಾಗೂ ಅವನು ತಂದೆ ಮುನೀರ್ ಅಹಮದ್ ಇವರನ್ನು ವಶಕ್ಕೆ ಪಡೆಯಲಾಗಿದೆ. ಅವರನ್ನು ವಿಚಾರಣೆ ಒಳಪಡಿಸಲಾಗಿದೆ.

5. ಮುರ್ತಜಾನ ಕುಟುಂಬ ಮೊದಲು ಮುಂಬಯಿನಲ್ಲಿ ವಾಸವಾಗಿತ್ತು. ಸಂಬಂಧಿಕರ ಪ್ರಕಾರ, ಮುರ್ತಜಾನ ಮಾನಸಿಕ ಸ್ಥಿತಿ ಚೆನ್ನಾಗಿಲ್ಲ. (ಹಿಂದೂಗಳ ದೇವಸ್ಥಾನಗಳ ಮೇಲೆ ದಾಳಿ ನಡೆಸುವ, ದೇವಸ್ಥಾನಗಳಲ್ಲಿ ಕಳ್ಳತನ ಮಾಡುವ ಅಥವಾ ಗಲಭೆ ಎಬ್ಬಿಸುವ ಜಿಹಾದಿ ಭಯೊತ್ಪಾದಕರ ಮಾನಸಿಕ ಸ್ಥಿತಿ ಚೆನ್ನಾಗಿರುವುದಿಲ್ಲ, ಹೀಗೆ ಯಾವಾಗಲೂ ಹೇಳುತ್ತಾ ಅವರ ಅಪರಾಧವನ್ನು ಮರೆಮಾಚುವ ಪ್ರಯತ್ನ ಮಾಡಲಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು) ಏಪ್ರಿಲ್ 2 ರಿಂದ ಅವನು ಮನೆಯಿಂದ ನಾಪತ್ತೆಯಾಗಿದ್ದನು. ಆತನನ್ನು ಹುಡುಕಲಾಗುತ್ತಿತ್ತು.