ಪ್ರಯಾಗರಾಜ್, ಜನವರಿ 9 (ಸುದ್ದಿ.) – ಇಲ್ಲಿನ ಮಹಾಕುಂಭಮೇಳಕ್ಕೆ ಬರುವ ಭಕ್ತರಿಗಾಗಿ ರೈಲ್ವೆ ಇಲಾಖೆಯು ಭರ್ಜರಿ ಸಿದ್ಧತೆ ನಡೆಸಿದ್ದು, 2 ತಿಂಗಳಲ್ಲಿ ಒಟ್ಟು 1 ಸಾವಿರದ 300 ರೈಲುಗಳು ಭಕ್ತರನ್ನು ಕರೆದು ತರುವುದಕ್ಕಾಗಿ ಸಂಚರಿಸಲಿದೆ. ಭಕ್ತಾದಿಗಳಿಗೆ ಸೌಲಭ್ಯ ಕಲ್ಪಿಸಲು ಯಾವುದೇ ಅಡಚಣೆಯಾಗದಂತೆ ರೈಲ್ವೆ ಇಲಾಖೆಯ 4 ಸಾವಿರ ನೌಕರರು ಶ್ರಮಿಸುತ್ತಿದ್ದಾರೆ, ಎಂದು ಪ್ರಯಾಗರಾಜ್‌ನ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಯಾಗ್‌ರಾಜ್, ನೈನಿ, ಪ್ರಯಾಗರಾಜ್ ಚೌಕಿ ಮತ್ತು ಝನ್ಸಿ ರೈಲು ನಿಲ್ದಾಣಗಳಿಂದ ಭಕ್ತರಿಗಾಗಿ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲಾ ನಿಲ್ದಾಣಗಳಲ್ಲಿ ಭಕ್ತರಿಗೆ ಆಹಾರದ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ರೈಲು ನಿಲ್ದಾಣದ ಬಳಿ ಪ್ರಯಾಣಿಕರಿಗೆ ನಿಲುಗಡೆಗೆ ಸ್ಥಳಗಳನ್ನು ಗೊತ್ತುಪಡಿಸಲಾಗಿದೆ. ಭಕ್ತರ ಭದ್ರತೆಗಾಗಿ ರಾಜ್ಯ ಮೀಸಲು ಪಡೆ ಹಾಗೂ ರೈಲ್ವೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭಕ್ತರು ಒಳಗೆ ಮತ್ತು ಹೊರಗೆ ಹೋಗಿಬರಲು, ನಿಲ್ದಾಣಗಳಲ್ಲಿ 4 ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ.