ಮಾವನೊಂದಿಗೆ ‘ಹಲಾಲಾ’; ತನ್ನ ಗಂಡನಿಗೆ ತಾಯಿಯಾದ ಮುಸ್ಲಿಂ ಮಹಿಳೆ !

‘ಹಲಾಲಾ’ ಎಂದರೆ ಏನು?

ಮುಸ್ಲಿಂ ಮಹಿಳೆಗೆ ತಲಾಕ ನೀಡಿದ ನಂತರ ಅದೇ ವ್ಯಕ್ತಿಯನ್ನು ಮರುಮದುವೆಯಾಗಲು ಬಯಸಿದರೆ, ಅವಳು ಇನ್ನೊಬ್ಬ ವ್ಯಕ್ತಿಯೊಂದಿಗೆ ದೈಹಿಕ ಸಂಬಂಧ ಇಡಬೇಕಾಗುತ್ತದೆ.

ನವ ದೆಹಲಿ – ಸಾಮಾಜಿಕ ಮಾಧ್ಯಮದಲ್ಲಿ ಓರ್ವ ಮುಸ್ಲಿಂ ಮಹಿಳೆಯೊಬ್ಬಳ ‘ಹಲಾಲಾ’ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸುತ್ತಿರುವ ವಿಡಿಯೋ ಪ್ರಸಾರ ಆಗಿದೆ. ಇದರಲ್ಲಿ ಸಂತ್ರಸ್ತೆ ಮಹಿಳೆಯು, “ನಾನು ನನ್ನ ಗಂಡನನ್ನು ಮದುವೆಯಾಗಿ ಅತ್ತೆಯ ಮನೆಗೆ ಬಂದೆನು. ಕೆಲವು ದಿನಗಳ ನಂತರ ನಮ್ಮ ವಿಚ್ಛೇದನವಾಯಿತು. ತದನಂತರ ನನ್ನ ಮಾವನ ಜೊತೆ ಹಲಾಲಾ ಆಯಿತು. ತದನಂತರ ನಾನು ನನ್ನ ಮಾವನ ಮಗನ ತಾಯಿಯಾದೆ, ನಂತರ ನಾನು ನನ್ನ ಗಂಡನೊಂದಿಗೆ ಪುನಃ ಮದುವೆಯಾದೆ. ಕೆಲವು ಕಾಲದ ನಂತರ ನನ್ನದು ಪುನಃ ವಿಚ್ಛೇದನೆ ಆಯಿತು. ನಂತರ ನನ್ನ ಪತಿ ತನ್ನ ಸಹೋದರನೊಂದಿಗೆ ಹಲಾಲಾ ಮಾಡಲು ಹೇಳಿದರು. ನಂತರ ನಾನು ಅವನ ಅತ್ತಿಗೆಯಾದೆ. ಒಂದು ರೀತಿಯಲ್ಲಿ, ನಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆನು. “ಒಮ್ಮೆ ನಾನು ನನ್ನ ಗಂಡನ ತಾಯಿ, ಒಮ್ಮೆ ನನ್ನನ್ನು ಅವನ ಅತ್ತಿಗೆಯಾಗಲು ಹೇಳಲಾಯಿತು, ಮತ್ತು ಕೆಲವೊಮ್ಮೆ ನಾನು ನನ್ನ ಗಂಡನ ಹೆಂಡತಿಯಾಗಿದ್ದೆ.” ಇದನ್ನೆಲ್ಲಾ ಮಾಡಲಿಕ್ಕೆ ನಾನಿದ್ದೀನಾ ?’ ‘ಹಲಾಲಾ ಕೊನೆಗೊಳ್ಳಬೇಕು’, ಎಂದು ಸಂತ್ರಸ್ತೆ ಪ್ರತಿಕ್ರಿಯಿಸಿದ್ದಾಳೆ.

ಸಂತ್ರಸ್ತೆ ಮಹಿಳೆಯು ಮಾತುಮುಂದುವರೆಸಿ,

1. 2009 ರಲ್ಲಿ ನನ್ನ ಮದುವೆಯಾಯಿತು. ನನಗೆ 2 ವರ್ಷಗಳ ಕಾಲ ಮಕ್ಕಳಾಗದ ಕಾರಣ ನನ್ನ ಪತಿ ನನಗೆ ತಲಾಕ ನೀಡಿದರು. ಈ ವಿಷಯವನ್ನು ಮನೆಯಲ್ಲಿಯೇ ಇಡಲು, ಅವನು ತನ್ನ ತಂದೆಯೊಂದಿಗೆ, ಅಂದರೆ ನನ್ನ ಮಾವನೊಂದಿಗೆ ಹಲಾಲಾ ಮಾಡಲು ಹೇಳಿದನು. ನಂತರ, ಮಾವನ ಜೊತೆ ಮದುವೆಯಾಯಿತು. ಅವರಿಂದ ಅವಳಿಗೆ ಒಂದು ಮಗುವಾಯಿತು.

2. 2017 ರಲ್ಲಿ ನನ್ನ ಮಾವ ನನಗೆ ತಲಾಕ ನೀಡಿದ ನಂತರ ನಾನು ನನ್ನ ಪತಿಯನ್ನು ಮರುಮದುವೆಯಾದೆ. ನಂತರ ಗಂಡ ಮತ್ತೆ ನನಗೆ ತಲಾಕ ನೀಡಿದ. ನಂತರ ನನ್ನ ಪತಿ ತನ್ನ ಸಹೋದರನೊಂದಿಗೆ ಹಲಾಲಾ ಮಾಡಲು ನನಗೆ ಹೇಳಿದನು. ನಾನು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆನು.

3. ನಾನು ನನ್ನ ಗಂಡನೊಂದಿಗೆ ಸಂಬಂಧ ಹೊಂದಬಹುದು; ಆದರೆ ನನಗೆ ಅವನ ತಂದೆ ಮತ್ತು ಸಹೋದರನ ಜೊತೆ ಸಂಬಂಧ ಹೊಂದಲು ಸಾಧ್ಯವಿಲ್ಲ. ನನ್ನ ತವರು ಮನೆಯವರು ಆಕ್ಷೇಪಿಸಿದ ನಂತರ, ನನ್ನ ಮಾವ ನನಗೆ ಅವರೊಂದಿಗೆ ಹೋಗಲು ಹೇಳಿದರು.

ಸಂಪಾದಕೀಯ ನಿಲುವು

‘ಹಿಂದೂ ಧರ್ಮ ಮಹಿಳಾ ವಿರೋಧಿ’ ಎಂಬ ಕೂಗಾಡುವ ಸ್ತ್ರೀ ವಿಮೋಚನಾವಾದಿಗಳೆಂದು ಕರೆಯಲ್ಪಡುವವರಿಗೆ ಮುಸ್ಲಿಮರಲ್ಲಿರುವ ‘ಹಲಾಲಾ’ ಪದ್ಧತಿ ಕಾಣುತ್ತಿಲ್ಲವೇ ? ಅಥವಾ ಅದು ಸರಿ ಅಂತ ಅವರಿಗೆ ಅನಿಸುತ್ತದೆಯೇ ?