Justice BR Gawai Statement : ನಾನು ಸುಪ್ರೀಂ ಕೋರ್ಟ್‌ನಲ್ಲಿರುವಷ್ಟು ಅಶಿಸ್ತು ಬೇರೆ ನ್ಯಾಯಾಲಯದಲ್ಲಿ ನೋಡಿಲ್ಲ ! – ನ್ಯಾಯಮೂರ್ತಿ ಬಿ.ಆರ್. ಗವಾಯಿ

ಆಲಿಕೆಯ ಸಮಯದಲ್ಲಿ ಕೂಗಾಡಿದ ವಕೀಲರು; ಆಕ್ರೋಶಗೊಂಡ ನ್ಯಾಯಮೂರ್ತಿ ಬಿ.ಆರ್. ಗವಾಯಿ

ನವ ದೆಹಲಿ – ನಾನು ಮುಂಬಯಿ ಹೈಕೋರ್ಟ್‌ನಲ್ಲಿ ನ್ಯಾಯಾಧೀಶನಾಗಿ ಸೇವೆ ಸಲ್ಲಿಸಿದ್ದೇನೆ, ಜೊತೆಗೆ ನಾಗಪುರ ಮತ್ತು ಛತ್ರಪತಿ ಸಂಭಾಜಿನಗರ ಪೀಠಗಳಲ್ಲಿಯೂ ಸೇವೆ ಸಲ್ಲಿಸಿದ್ದೇನೆ; ಆದರೆ ಸುಪ್ರೀಂ ಕೋರ್ಟ್‌ನಂತೆ ಶಿಸ್ತಿನ ಕೊರತೆಯಿರುವ ನ್ಯಾಯಾಲಯವನ್ನು ನಾನು ಎಂದಿಗೂ ನೋಡಿಲ್ಲ. ಇಲ್ಲಿ, ಒಂದು ಕಡೆ 6 ಜನ ವಕೀಲರು ಮತ್ತು ಇನ್ನೊಂದು ಕಡೆ 6 ಜನ ವಕೀಲರು ಪರಸ್ಪರ ಕೂಗಾಡುತ್ತಿರುತ್ತಾರೆ. ಹೈಕೋರ್ಟ್‌ನಲ್ಲಿಯೂ ಸಹ ಇಂತಹ ವಿಷಯ ನಡೆಯುತ್ತಿರುವುದನ್ನು ನಾನು ಎಂದಿಗೂ ಕೇಳಿಲ್ಲ. ಆದ್ದರಿಂದ, ಎಲ್ಲಾ ವಕೀಲರು ನ್ಯಾಯಾಲಯದ ಘನತೆಯನ್ನು ಗೌರವಿಸಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್. ಗವಾಯಿ ಇವರು ಒಂದು ವಿಚಾರಣೆಯ ಸಂದರ್ಭದಲ್ಲಿ ಹೇಳಿದರು. ಎರಡೂ ಕಡೆಯ ವಕೀಲರು ಕೂಗಾಡಲು ಪ್ರಾರಂಭಿಸಿದ್ದರು. ಆದ್ದರಿಂದ ನ್ಯಾಯಮೂರ್ತಿ ಗವಾಯಿ ಅವರು ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.

ಕುತೂಹಲಕಾರಿ ಎಂದರೆ, ಕಳೆದ ವರ್ಷವೂ ಸಹ, ನ್ಯಾಯಮೂರ್ತಿ ಬಿ.ಆರ್. ಗವಾಯಿ ಇವರು ಇದೇ ರೀತಿಯ ಹೇಳಿಕೆ ನೀಡಿದ್ದರು. “ನಮ್ಮಲ್ಲಿ ಯಾರು ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ಗೆ ಹೋಗುತ್ತಾರೆ ಅಲ್ಲಿ ಶಿಸ್ತಿನ ಕೊರತೆಯಿದೆ ಎಂದು ಅನಿಸುತ್ತದೆ.” ಇಲ್ಲಿ ಯಾರು ಬೇಕಾದರೂ ಯಾವುದೇ ಸಮಯದಲ್ಲಿ ಮಾತನಾಡಬಹುದು. “ಇದರಲ್ಲಿ ವ್ಯವಸ್ಥೆಯ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತದೆ” ಎಂದು ಅವರು ಹೇಳಿದ್ದರು.

ಸಂಪಾದಕೀಯ ನಿಲುವು

ಇದು ಕೇವಲ ಉನ್ನತ ಶಿಕ್ಷಣ ಪಡೆದ ಮಾತ್ರಕ್ಕೆ ಒಬ್ಬ ವ್ಯಕ್ತಿ ಸುಸಂಸ್ಕೃತ ಮತ್ತು ಆದರ್ಶಪ್ರಾಯನಾಗುವುದಿಲ್ಲ ಎಂದು ತೋರಿಸುತ್ತದೆ ! ಈ ಕಾರಣಕ್ಕಾಗಿ, ಶಿಕ್ಷಣದಲ್ಲಿ ಸಾಧನೆ ಕಲಿಸುವುದು ಈಗ ಮುಖ್ಯವಾಗಿದೆ. ಸಾಧನೆ ಅರ್ಥಮಾಡಿಕೊಂಡು ಅದನ್ನು ಮಾಡುವ ವ್ಯಕ್ತಿ ಸುಸಂಸ್ಕೃತ ಮತ್ತು ನೀತಿನಿಯಮಗಳನ್ನು ಅನುಸರಿಸುತ್ತಾರೆ !