ಅಲವರ (ರಾಜಸ್ಥಾನ) ಇಲ್ಲಿಯ ೩೦೦ ವರ್ಷ ಹಳೆಯದಾದ ಶಿವಮಂದಿರ ಸೇರಿ ೩ ದೇವಸ್ಥಾನಗಳನ್ನು ಮತ್ತೆ ಕಟ್ಟಿಕೊಡಲಿದೆ ಸರಕಾರ !

ಅಲವರ (ರಾಜಸ್ಥಾನ) – ಅಲವರ ಜಿಲ್ಲೆಯ ರಾಯಗಡ ಇಲ್ಲಿ ರಸ್ತೆ ಅಗಲೀಕರಣದ ನೆಪದಲ್ಲಿ ಕೆಡವಲಾದ ೩೦೦ ವರ್ಷ ಹಳೆಯ ಶಿವ ಮಂದಿರ ಸೇರಿ ೩ ದೇವಸ್ಥಾನಗಳನ್ನು ಪುನರ್ ನಿರ್ಮಿಸಲಾಗುವುದು, ಎಂಬ ಮಾಹಿತಿ ರಾಯಗಡ ಹೆಚ್ಚುವರಿ ಜಿಲ್ಲಾಧಿಕಾರಿ ಸುನೀತ ಪಂಕಜ್ ಇವರು ನೀಡಿದರು. ಪಂಕಜ್ ಇವರು ಮಾತು ಮುಂದುವರೆಸುತ್ತಾ, ಜನರು ಎಲ್ಲಿ ಅಪೇಕ್ಷಿಸುವರು ಅಲ್ಲಿ ವಿವಾದಿತ ಇಲ್ಲದೇ ಇರುವ ಸ್ಥಳದಲ್ಲಿ ದೇವಸ್ಥಾನಗಳನ್ನು ನಿರ್ಮಿಸಲಾಗುವುದು.