ಮಂಗಳೂರಿನಲ್ಲಿ ಮಸೀದಿಯ ದುರಸ್ತಿಯ ಸಮಯದಲ್ಲಿ ದೇವಾಲಯದ ಅವಶೇಷಗಳು ಪತ್ತೆ !

ಮಂಗಳೂರು – ಇಲ್ಲಿನ ಒಂದು ಮಸೀದಿಯ ದುರಸ್ತಿಯ ಸಮಯದಲ್ಲಿ ಮಸೀದಿಯ ಕೆಳಗೆ ಹಿಂದೂ ದೇವಾಲಯದ ಅವಶೇಷಗಳು ಪತ್ತೆಯಾಗಿವೆ. ಮಂಗಳೂರಿನ ಹೊರವಲಯದ ಗಂಜಿಪಠದ ಬಳಿಯ ಮಳಲಿಯಲ್ಲಿನ ಜುಮಾ ಮಸೀದಿಯ ದುರಸ್ತಿಯ ಕೆಲಸ ನಡೆಯುತ್ತಿದೆ. ಆಗ ಅಲ್ಲಿ ಅಗೆಯುತ್ತಿರುವಾಗ ಅವಶೇಷಗಳು ಸಿಕ್ಕಿದೆ. ಈ ಕುರಿತು ವಿಶ್ವ ಹಿಂದು ಪರಿಷತ್ತಿನ ಮುಖಂಡರು ಜಿಲ್ಲಾಢಳಿತದ ಬಳಿ ದೂರು ನೀಡಿದ್ದು ದಾಖಲೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವವರೆಗೂ ಕೆಲಸವನ್ನು ನಿಲ್ಲಿಸಬೇಕೆಂದು ಬೇಡಿಕೆ ಸಲ್ಲಿಸದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಆಯುಕ್ತರು ಈ ಅವಶೇಷಗಳ ಬಗ್ಗೆ ಕಾಳಜಿ ವಹಿಸಬೇಕೆಂದು ಹಾಗೂ ಅದನ್ನು ಜೋಪಾನ ಮಾಡಲು ಆದೇಶ ನೀಡಿದ್ದಾರೆ. ‘ಸಧ್ಯ ಮಾಡಲಾಗುವ ದಾವೆಗಳ ಪರಿಶೀಲನೆ ನಡೆಸಿ ನಾವು ಈ ಕುರಿತು ತೀರ್ಮಾನವನ್ನು ಶೀಘ್ರದಲ್ಲಿಯೇ ತೆಗೆದುಕೊಳ್ಳಲಾಗುವುದು ಹಾಗೂ ಅಲ್ಲಿಯವರೆಗೂ ಈ ಅವಶೇಷಗಳ ಬಗ್ಗೆ ಕಾಳಜಿ ವಹಿಸಬೇಕೆಂದು ಆದೇಶ ನೀಡಿದೆ. ಜನರು ಕಾನೂನು ಮ್ತತು ಸುವ್ಯವಸ್ಥೆಯನ್ನು ಕಾಪಾಡಬೇಕು’, ಎಂದು ಸ್ಥಳೀಯ ಆಡಳಿತಾಧಿಕಾರಿಗಳು ಕರೆ ನೀಡಿದ್ದಾರೆ.

ಸಂಪಾದಕೀಯ ನಿಲುವು

‘ಹಿಂದು ಟೆಮ್ಪಲ್ಸ : ವ್ಹಾಟ ಹ್ಯಾಪೆನ್ಡ ಟೂ ದೆಮ ?’ (ಹಿಂದು ದೇವಾಲಯಗಳು : ಅವುಗಳು ಏನಾಯಿತು ?) ಎಂಬ ಹೆಸರಿನ ಪ್ರಸಿದ್ಧ ಪುಸ್ತಕದಲ್ಲಿ ಭಾರತದಲ್ಲಿ ಕಡಿಮೆ ಪಕ್ಷ ಸಾವಿರಾರು ದೇವಾಲಯಗಳನ್ನು ಧ್ವಂಸ ಮಾಡಿ ಅಲ್ಲಿ ಮಸೀದಿಯನ್ನು ಕಟ್ಟಿರುವುದಾಗಿ ಐತಿಹಾಸಿಕ ಪುರಾವೆಯೊಂದಿಗೆ ಸಾಬೀತು ಪಡಿಸಲಾಗಿದೆ. ಮಂಗಳೂರಿನಲ್ಲಿನ ವಿಷಯವು ಅಡಿಗಲ್ಲಾಗಿರುವುದರಿಂದ ಈಗಲಾದರೂ ಆ ದೃಷ್ಟಿಯಿಂದ ಸರಕಾರವು ರಾಷ್ಟ್ರವ್ಯಾಪೀ ಅಭಿಯಾನವನ್ನು ಕೈಗೊಳ್ಳಲಿ, ಎಂದು ಇತಿಹಾಸಪ್ರೇಮಿ ಜನತೆಗೆ ಅನಿಸಿದರೆ ಅದರಲ್ಲಿ ತಪ್ಪೇನಿದೆ ?