ಗುಂಡುಹಾರಿಸಿ ಕಟಿಹಾರ್ (ಬಿಹಾರ) ನಗರದ ಮಹಾಪೌರರ ಹತ್ಯೆ.

ಮಹಾಪೌರರನ್ನೇ ಹಾಡುಹಗಲಲ್ಲಿ ಹತ್ಯೆ ಮಾಡಲಾಗುತ್ತದೆ. ಇದು ಬಿಹಾರದ ಪೊಲೀಸರಿಗೆ ನಾಚಿಕೆಗೇಡಿನ ವಿಚಾರ. ಇದರಿಂದ ಬಿಹಾರದಲ್ಲಿ ಮತ್ತೆ ಜಂಗಲ ರಾಜ್ಯವು ಪ್ರಾರಂಭವಾಗಿದೆ ಅಂತ ತಿಳಿಯಬೇಕೆ?

ಜಮ್ಮು – ಕಾಶ್ಮೀರದಲ್ಲಿ ಏಕಕಾಲದಲ್ಲಿ ಮೂರು ಸ್ಥಳಗಳಲ್ಲಿ ಅನುಮಾನಾಸ್ಪದ ಡ್ರೋನ್‍ಗಳು ಪತ್ತೆ !

ರಾಜ್ಯದಲ್ಲಿ ಡ್ರೋನ್‍ಗಳು (ಮಾನವರಹಿತ ವೈಮಾನಿಕ ವಾಹನಗಳು) ಈಗಲೂ ಕಂಡುಬರುತ್ತವೆ. ಜುಲೈ 29 ರಂದು ರಾತ್ರಿ ಪಾಕಿಸ್ತಾನದ ಡ್ರೋನ್‍ಗಳು ಸಾಂಬಾ ಜಿಲ್ಲೆಯ 3 ಸ್ಥಳಗಳಲ್ಲಿ ಹಾರುತ್ತಿರುವುದು ಕಂಡುಬಂದಿದೆ.

ಮಹೋಬಾ (ಉತ್ತರಪ್ರದೇಶ) ಇಲ್ಲಿಯ ಅಪ್ರಾಪ್ತ ಬಾಲಕಿಯನ್ನು ಬಲಾತ್ಕರಿಸಿದ ಆರೋಪಿಯಿಂದ ಪೊಲೀಸ್ ಕೊಠಡಿಯಲ್ಲಿ ಆತ್ಮಹತ್ಯೆ.

ಸಂಜಯನನ್ನು ತಕ್ಷಣ ಸಮೀಪದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತ್ರೆಗೆ ಸೇರಿಸುವ ಮೊದಲೇ ಅವನು ಸಾವನ್ನಪ್ಪಿದ್ದನು ಎಂದು ಡಾಕ್ಟರರು ಸ್ಪಷ್ಟಪಡಿಸಿದರು. ಈ ಪ್ರಕರಣದಲ್ಲಿ ಪ್ರಾಥಮಿಕ ವಿಚಾರಣೆಯಲ್ಲಿ ಒಬ್ಬ ಇನ್ಸ್ ಪೆಕ್ಟರ್ ಮತ್ತು ಇಬ್ಬರು ಹವಾಲ್ದಾರರನ್ನು ಅಮಾನತುಗೊಳಿಸಲಾಗಿದೆ.

ಕೃಷ್ಣ ಭಕ್ತಿ ಮಾಡಲು ಹರಿಯಾಣದ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಯಾದ ಭಾರತಿ ಅರೋರಾ ಇವರಿಂದ ಸ್ವೇಚ್ಛೆಯಿಂದ ನಿವೃತ್ತಿ ಪಡೆಯುವ ನಿರ್ಧಾರ !

ಇತರ ಪೊಲೀಸ್ ಅಧಿಕಾರಿಗಳು ಪೊಲೀಸ್ ಅಧಿಕಾರಿ ಅರೋರಾರಂತೆ ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಾ ಸಾಧನೆಯನ್ನೂ ಮಾಡಿದರೆ ಭಾರತದಲ್ಲಿ ರಾಮರಾಜ್ಯ ಬರಲು ಸಹಾಯವಾಗಲಿದೆ !

ಜಿಹಾದಿ ಉಗ್ರಗಾಮಿಗಳಿಂದ ಜಮ್ಮುವಿನ ದೇವಾಲಯಗಳ ಮೇಲೆ ಆಕ್ರಮಣ ಮಾಡುವ ಷಡ್ಯಂತ್ರ !

ಜಿಹಾದಿ ಉಗ್ರಗಾಮಿಗಳಿಗೆ ಧರ್ಮ(ಪಂಥ) ಇರುವುದರಿಂದಲೇ ಅವರು ತಮ್ಮ ಧಾರ್ಮಿಕ ಸ್ಥಳಗಳ ಮೇಲಲ್ಲ, ಹಿಂದೂಗಳ ದೇವಾಲಯಗಳ ಮೇಲೆ ಆಕ್ರಮಣ ನಡೆಸಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ!

ಪಾಕಿಸ್ತಾನದಲ್ಲಿ ಚೀನಾದ ನಾಗರಿಕರ ಮೇಲೆ ನಡೆಸಿದ ಗುಂಡು ಹಾರಾಟದಲ್ಲಿ ಇಬ್ಬರಿಗೆ ಗಾಯ

ಜುಲೈ 28 ರಂದು ಸಂಜೆ ಅಪರಿಚಿತ ದಾಳಿಕೋರರು ಓರ್ವ ಚೀನಾ ನಾಗರಿಕನ ಚತುಶ್ಚಕ್ರವಾಹನದ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಚೀನಾದ ನಾಗರಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಹಾಗೂ ಇನ್ನೋರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಆರೋಪಿ ಅಲ್ಬರ್ಟ್ ಫರ್ನಾಂಡಿಸ್‍ನನ್ನು ಪೊಲೀಸರು ಬಂಧಿಸಿದ ನಂತರ ದೇವಸ್ಥಾನಕ್ಕೆ ಹೋಗಿ ಕ್ಷಮಾಯಾಚನೆ !

ಬಜ್ಪೆಯ ನಿವಾಸಿಯಾಗಿರುವ ಅಲ್ಬರ್ಟ್ ಫರ್ನಾಂಡಿಸ್ ಮುಂಬಯಿಯಲ್ಲಿ ಕೆಲಸ ಮಾಡುತ್ತಿದ್ದು ಕೆಲವು ದಿನಗಳ ಹಿಂದೆ ಆತ ದಿನೇಶ ಎಂಬ ಹಿಂದೂವಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯನ್ನು ನಿಂದಿಸುವ ಧ್ವನಿ ಸಂದೇಶವನ್ನು ಕಳುಹಿಸಿದ್ದನು. ಆ ಸಂದೇಶವನ್ನು ಕೇಳಿ ಹಿಂದೂ ಸಂಘಟನೆಗಳು ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದವು.

ಉತ್ತರಪ್ರದೇಶದಲ್ಲಿ ಸಂಘದ ಸ್ವಯಂಸೇವಕರ ಮಗನ ಶವ ಮರಕ್ಕೆ ನೇತು ಹಾಕಿರುವ ಸ್ಥಿತಿಯಲ್ಲಿ ಪತ್ತೆ

ಇಲ್ಲಿ ಸ್ವಯಂಸೇವಕರೊಬ್ಬರ ಮಗನ ಶವವು ಮರಕ್ಕೆ ನೇತು ಹಾಕಿರುವ ಸ್ಥಿತಿಯಲ್ಲಿ ಸಿಕ್ಕಿದೆ. ಅಕ್ಷಯ (ವಯಸ್ಸು ೨೨ ವರ್ಷ) ಎಂದು ಅವನ ಹೆಸರಾಗಿದೆ. ಗ್ರಾಮಸ್ಥರು ಈ ಘಟನೆಗೆ ಪೊಲೀಸರೇ ಹೊಣೆ ಎಂದು ನಿರ್ಧರಿಸಿ ‘ಪೊಲೀಸರ ಭಯದಿಂದ ಅಕ್ಷಯನು ಈ ರೀತಿಯ ಕೃತ್ಯ ಮಾಡಿದ್ದಾನೆ, ಎಂದು ಆರೋಪಿಸಿದ್ದಾರೆ.

‘ಪೊಕ್ಸೋ ಕಾಯಿದೆ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪು !

‘ಪೊಕ್ಸೋ ಕಾನೂನಿನಂತೆ ಪ್ರೌಢಳಲ್ಲದ ಬಾಲಕಿಯು ನೀಡಿದ ಸಮ್ಮತಿಗೆ ಭಾರತೀಯ ದಂಡ ಸಂಹಿತೆಯಲ್ಲಿ ಮಾನ್ಯತೆ ಇಲ್ಲ. ಆದುದರಿಂದ ‘ಚೈಲ್ಡ್ ಮ್ಯಾರೇಜ್ ರಿಸ್ಟ್ರ್ರೆಂಟ ಆಕ್ಟ್ ಕಲಂ ೯ ಮತ್ತು ೧೦ ರ ಅನ್ವಯ ಈ ಮದುವೆ ಕಾನೂನುಬಾಹಿರವಾಗುತ್ತದೆ,  ಸಹಜವಾಗಿಯೇ ಸತ್ರ ನ್ಯಾಯಲಯವು ಆರೋಪಿಗೆ ಜಾಮೀನು ನಿರಾಕರಿಸಿತು.

ಮಹಾಯುದ್ಧ, ಭೂಕಂಪ ಇತ್ಯಾದಿ ಆಪತ್ತುಗಳನ್ನು ಪ್ರತ್ಯಕ್ಷವಾಗಿ ಹೇಗೆ ಎದುರಿಸುವಿರಿ ?

ರಾಷ್ಟ್ರದ್ರೋಹಿಗಳು ಈ ರೀತಿಯಲ್ಲಿ ಹಿಂಸಾಚಾರ ಮಾಡಿದರೆ, ರಾಷ್ಟ್ರಪ್ರೇಮಿಗಳಿಗೆ ಅದೊಂದು ಅಕಸ್ಮಾತಾಗಿ ಬಂದೆರಗುವ ಆಪತ್ತೇ ಆಗಿರುತ್ತದೆ. ಇದರಿಂದ ಬದುಕುಳಿಯಲು ಪೂರ್ವನಿಯೋಜನೆ ಮಾಡುವುದು ಅತ್ಯಾವಶ್ಯಕವಾಗಿದೆ.