ಉಪಚಾರದ ಸಮಯದಲ್ಲಿ ಸಾವನ್ನಪ್ಪಿದ ಸಂತ್ರಸ್ತೆ
ದೆಹಲಿಯಲ್ಲಿನ ‘ನಿರ್ಭಯ’ ಬಲಾತ್ಕಾರ ಪ್ರಕರಣದಂತಹ ಇನ್ನೊಂದು ಅಮಾನುಷ ಪ್ರಕರಣ. ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಬಲಾತ್ಕಾರ ಮಾಡುವವರಿಗೆ ಕಠೋರ ಶಿಕ್ಷೆಯಾಗುತ್ತಿಲ್ಲ, ಇದರಿಂದ ಬಲಾತ್ಕಾರಿಗಳಿಗೆ ಕುಮ್ಮಕ್ಕು ಸಿಕ್ಕಿದಂತಾಗಿ ಅಪರಾಧಗಳು ಹೆಚ್ಚಾಗುತ್ತಿವೆ. ಬಲಾತ್ಕಾರ ಮಾಡುವವರಿಗೆ ಕಠಿಣ ಶಿಕ್ಷೆ ನೀಡಿ ಅದರ ಮೇಲೆ ತಕ್ಷಣ ಕಾರ್ಯಾಚರಣೆ ಮಾಡಿದರೆ ಅಪರಾಧಿಗಳು ಪಾಠ ಕಲಿಯುತ್ತಾರೆ.- ಸಂಪಾದಕರು
ಮುಂಬೈ – ಇಲ್ಲಿನ ಸಾಕಿನಾಕಾ ಪರಿಸರದಲ್ಲಿ ಸೆಪ್ಟೆಂಬರ್ 10 ರಂದು ಬಲಾತ್ಕಾರಕ್ಕೊಳಗಾದ ಸಂತ್ರಸ್ತೆಯು ರಾಜಾವಾಡಿಯಲ್ಲಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದಳು. ನರಾಧಮರು ಬಲಾತ್ಕಾರದ ನಂತರ ಗುಪ್ತಾಂಗದಲ್ಲಿ ರಾಡ್ ತುರುಕಿದ್ದರಿಂದ ರಕ್ತಸ್ರಾವವಾಗಿ ಆಕೆಯು ಪ್ರಜ್ಞಾ ಶೂನ್ಯಳಾಗಿದ್ದಳು. ಪೊಲೀಸರು ಆಕೆಯನ್ನು ರಾಜಾವಾಡಿ ಆಸ್ಪತ್ರೆಗೆ ಒಯ್ದಾಗ ಆಕೆಯ ಮೇಲೆ ಉಪಚಾರವನ್ನು ಆರಂಭಿಸಲಾಯಿತು; ಆದರೆ ಉಪಚಾರದ ಸಮಯದಲ್ಲಿ ಆಕೆಯು ಸಾವನ್ನಪ್ಪಿದಳು. ಪೊಲೀಸರು ಈ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಿದ್ದು ಇತರ ಆರೋಪಿಗಳ ಶೋಧಕಾರ್ಯ ನಡೆಯುತ್ತಿದೆ. ಈ ಘಟನೆಯಿಂದ ದೇಶದಾದ್ಯಂತ ಸಂತಾಪ ವ್ಯಕ್ತವಾಗುತ್ತಿದ್ದು ಪುನಃ ಇನ್ನೊಮ್ಮೆ ಮಹಿಳೆಯರ ಸುರಕ್ಷತೆಯ ಪ್ರಶ್ನೆಯೂ ಎದ್ದು ನಿಂತಿದೆ.
Mumbai woman, raped and brutalised in Saki Naka, dies in hospital https://t.co/OrHYSwLr89
— The Times Of India (@timesofindia) September 11, 2021
ಪೊಲೀಸರು ನೀಡಿರುವ ಮಾಹಿತಿಗನುಸಾರ ಸಪ್ಟೆಂಬರ್ 10 ಬೆಳಗಿನ ಜಾವ ಮೂರೂವರೆ ಗಂಟೆಯ ಹೊತ್ತಿಗೆ ಪೊಲೀಸ್ ನಿಯಂತ್ರಣ ಕಕ್ಷೆಗೆ ಸಾಕಿನಾಕದಲ್ಲಿನ ಖೈರಾನ ರಸ್ತೆಯಲ್ಲಿ ಓರ್ವ ಮಹಿಳೆಯು ರಕ್ತದ ಮಡುವಿನಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ ಎಂಬ ದೂರವಾಣಿ ಬಂದಿತ್ತು. ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದ ನಂತರ ಮಹಿಳೆಯನ್ನು ಘಾಟ್ಕೋಪರನಲ್ಲಿರುವ ರಾಜಾವಾಡಿ ಆಸ್ಪತ್ರೆಯಲ್ಲಿ ಸೇರಿಸಿದರು. ಪೊಲೀಸರಿಗೆ ಈಗ ಘಟನೆಯ ಸಿಸಿಟಿವಿ ಫುಟೇಜ್ ಸಿಕ್ಕಿದ್ದು ಮೋಹನ ಚೌಹಾನ ಎಂಬ ಹೆಸರಿನ ಆರೋಪಿಯನ್ನು ಬಂಧಿಸಲಾಗಿದೆ. ಪೊಲೀಸರು ತಪಾಸಣೆಯನ್ನು ಮುಂದುವರೆಸಿದ್ದಾರೆ. ಗಣೇಶೋತ್ಸವದ ಸಮಯದಲ್ಲಿ ನಡೆದಂತಹ ಇಂತಹ ಭೀಷಣ ಘಟನೆಯಿಂದಾಗಿ ಮುಂಬೈ ನಗರವು ತತ್ತರಿಸಿದೆ.