ದೇವಸ್ಥಾನದ ಪವಿತ್ರ ನೌಕೆಯಲ್ಲಿ ಬೂಟನ್ನು ಹಾಕಿಕೊಂಡು ಛಾಯಾಚಿತ್ರಗಳನ್ನು ತೆಗೆದ ಪ್ರಕರಣದಲ್ಲಿ ಮಲಯಾಳಮ್ ನಟಿಯ ಬಂಧನ ಮತ್ತು ಬಿಡುಗಡೆ

ತಿರುವನಂತಪುರಂ (ಕೇರಳ) – ಹಿಂದೂಗಳ ಧಾರ್ಮಿಕ ಸ್ಥಳದಲ್ಲೇ ಬೂಟು ಹಾಕಿಕೊಂಡು ಛಾಯಾಚಿತ್ರವನ್ನು ತೆಗೆದ ಪ್ರಕರಣದಲ್ಲಿ ಪೊಲೀಸರು ಮಲಯಾಳಮ್ ದೂರದರ್ಶನದ ನಟಿ ನಿಮಿಷಾ ಬಿಜೋ ಮತ್ತು ಆಕೆಯ ಗೆಳತಿ ಉನ್ನಿ ಇವರನ್ನು ಬಂಧಿಸಲಾಗಿತ್ತು. ನಂತರ ಅವರಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಅಲ್ಲಿಯ ಪಲ್ಲಿಯೋಡಂ (ನಾಗನ ಪವಿತ್ರ ನೌಕೆ) ಅದರಲ್ಲಿ ಬೂಟು ಹಾಕಿಕೊಂಡು ಕುಳಿತು ನಿಮಿಷಾ ಬಿಜೋ ಮತ್ತು ಉನ್ನಿ ಇವರು ಛಾಯಾಚಿತ್ರಗಳನ್ನು ತೆಗೆದಿದ್ದರು. ಈ ಪ್ರಕರಣದಲ್ಲಿ ದೇವಸ್ಥಾನ ಸಮಿತಿಯಿಂದ ಪೊಲೀಸರಿಗೆ ದೂರು ನೀಡಲಾಗಿತ್ತು.