ಕಾಗದದ ಮೂರ್ತಿಯನ್ನು ಮಾರುವ ‘ಅಮೆಜಾನ್’, ‘ಫಿಫಕಾರ್ಟ್’, ‘ಇಂಡಿಯಾಮಾರ್ಟ್’ ಮುಂತಾದ ಜಾಲತಾಣಗಳ ವಿರುದ್ಧ ಪೊಲೀಸರಲ್ಲಿ ದೂರುಹಿಂದುತ್ವನಿಷ್ಠ ಸಂಘಟನೆಗಳಿಂದ ಕ್ರಮಕೈಗೊಳ್ಳಬೇಕೆಂಬ ಬೇಡಿಕೆ |
ಮುಂಬೈ – ಕಾಗದದಿಂದ ತಯಾರಿಸಲಾಗುವ ಗಣೇಶ ಮೂರ್ತಿಗಳು ಅತ್ಯಂತ ಮಾಲಿನ್ಯಕಾರಿ ಮತ್ತು ಪರಿಸರಕ್ಕೆ ಘಾತಕವಾಗಿರುವುದರಿಂದ ಅದರ ಮೇಲೆ ‘ರಾಷ್ಟ್ರೀಯ ಹಸಿರು ಪ್ರಾಧಿಕರಣ, ಪಶ್ಚಿಮ ವಿಭಾಗ, ಪುಣೆ ಯು ಸೆಪ್ಟೆಂಬರ್ 30, 2016 ರಂದು ನಿರ್ಬಂಧದ ಆದೇಶ ನೀಡಿತ್ತು. ಹಾಗೆಯೇ ಪ್ರಾಧಿಕರಣವು ಆಗಿನ ಸರಕಾರದ ಕಾಗದದ ಮೂರ್ತಿಯನ್ನು ಪ್ರೋತ್ಸಾಹಿಸುವ ಬಗ್ಗೆ ನೀಡಿದ ಮೇ 3, 2011 ರ ಸರಕಾರಿ ಆದೇಶಕ್ಕೂ ತಡೆಯಾಜ್ಞೆಯನ್ನು ತಂದಿತ್ತು. ಹೀಗಿರುವಾಗಲೂ ‘ಅಮೆಜಾನ್’, ‘ಫ್ಲಿಫಕಾರ್ಟ್’, ‘ಇಂಡಿಯಾಮಾರ್ಟ್’ ಮುಂತಾದ ಇ-ಕಾಮರ್ಸ್ ಜಾಲತಾಣಗಳಿಂದ (ಆನ್ಲೈನ್ ಮೂಲಕ ವಸ್ತುಗಳ ಖರೀದಿ ಮತ್ತು ಮಾರಾಟ ಮಾಡುವ ಸೌಲಭ್ಯವಿರುವ ಜಾಲತಾಣಗಳಿಂದ) ದೊಡ್ಡಪ್ರಮಾಣದಲ್ಲಿ ಕಾಗದದ ಮೂರ್ತಿಯ ಮಾರಾಟ ನಡೆಯುತ್ತಿದೆ. ಇದು ಪ್ರಾಧಿಕಾರದ ಆದೇಶದ ಉಲ್ಲಂಘನೆಯಾಗಿದ್ದು ಇದರಿಂದ ದೊಡ್ಡಪ್ರಮಾಣದಲ್ಲಿ ಮಾಲಿನ್ಯ ಹೆಚ್ಚಾಗುವುದು. ಆದ್ದರಿಂದ ರಾಷ್ಟ್ರೀಯ ಹಸಿರು ಪ್ರಾಧಿಕರಣದ ನ್ಯಾಯಯುತ ಆದೇಶದ ಉಲ್ಲಂಘನೆ ಮಾಡುವವರ ಮೇಲೆ ಅಪರಾಧವನ್ನು ದಾಖಲಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರ ಹಿಂದುತ್ವನಿಷ್ಠ ಸಂಘಟನೆಗಳು ಪುಣೆ, ಸಂಭಾಜಿ ನಗರ ಮತ್ತು ಜಲಗಾವ್ ನಲ್ಲಿ ಪೋಲಿಸರ ಬಳಿ ದೂರು ದಾಖಲಿಸಿವೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಚತ್ತೀಸಗಡ ರಾಜ್ಯ ಸಂಘಟಕರಾದ ಶ್ರೀ ಸುನೀಲ ಘನವಟ ಇವರು ತಿಳಿಸಿದ್ದಾರೆ.
1. 2011ರಲ್ಲಿ ಆಗಿನ ರಾಜ್ಯಸರಕಾರವು ಕಾಗದದ ಮೂರ್ತಿಗೆ ಪ್ರೋತ್ಸಾಹ ನೀಡುವ ಆದೇಶ ಹೊರಡಿಸಿತ್ತು. ಮಾಹಿತಿ ಹಕ್ಕು ಅಧಿಕಾರದಡಿಯಲ್ಲಿ ಈ ಬಗ್ಗೆ ವಿಚಾರಣೆ ಮಾಡಿದಾಗ ‘ಪರಿಸರ ವಿಭಾಗ’ ಮತ್ತು ‘ಮಹಾರಾಷ್ಟ್ರ ಪ್ರದೂಷಣ ನಿಯಂತ್ರಣ ಮಂಡಳ’ ಇವುಗಳು ಈ ಬಗ್ಗೆ ಯಾವುದೇ ವಸ್ತುನಿಷ್ಠ ಅಧ್ಯಯನ ಮಾಡಿಲ್ಲ ಎಂಬ ಲಿಖಿತ ಉತ್ತರವನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಈ ವಿಷಯದಲ್ಲಿ ‘ರಾಷ್ಟ್ರೀಯ ಹಸಿರು ಪ್ರಾಧಿಕರಣ’ದ ಬಳಿ ಕಾಗದದ ಮೂರ್ತಿಯಿಂದ ದೊಡ್ಡ ಪ್ರಮಾಣದಲ್ಲಿ ಜಲಮಾಲಿನ್ಯವಾಗುತ್ತಿರುವ ಬಗ್ಗೆ ಅರ್ಜಿಯನ್ನು ದಾಖಲಿಸಿತ್ತು. ಇದರ ಮೇಲೆ ಪ್ರಾಧಿಕರಣವು ಸೆಪ್ಟೆಂಬರ್ 30, 2013 ರಂದು ಇದರ ಮೇಲೆ ಪ್ರಾಧಿಕರಣವು 30 ಸೆಪ್ಟೆಂಬರ್ 2016 ರಲ್ಲಿ ಆಡಳಿತದ ಈ ನಿರ್ಣಯದ ವಿರುದ್ಧ ಅನಿರ್ದಿಷ್ಟ ಕಾಲಾವಧಿಯ ತಡೆಯಾಜ್ಞೆಯನ್ನು ತಂದಿತ್ತು. ಹಾಗೂ ‘ಕಾಗದದ ಮುದ್ದೆಯಿಂದ ತಯಾರಿಸಿದ ಮೂರ್ತಿಯ ಪ್ರಚಾರ ಮಾಡಬಾರದು’, ಎಂದು ಆದೇಶ ಸಹ ಕೊಡಲಾಗಿತ್ತು. ಆದ್ದರಿಂದ ಈ ಆದೇಶದ ಉಲ್ಲಂಘನೆ ಮಾಡಿ ಕಾಗದದ ಮುದ್ದೆಯ ಮೂರ್ತಿ ಮಾರಾಟ ಮಾಡುವುದು, ಇದು ಕ್ರಿಮಿನಲ್ ಅಪರಾಧವಾಗಿದೆ, ಎಂದು ಶ್ರೀ. ಘನವಟ ಇವರು ಹೇಳಿದ್ದಾರೆ.
2. ಸಂಭಾಜಿನಗರದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶಶಾಂಕ ದೇಶಮುಖ ಮತ್ತು ಹಿಂದೂ ವಿಧಿಜ್ಞ ಪರಿಷತ್ತಿನ ಸಂಸ್ಥಾಪಕ ಸದಸ್ಯ ಪೂ.(ನ್ಯಾಯವಾದಿ) ಸುರೇಶ ಕುಲಕರ್ಣಿ ಇವರು ಸಂಭಾಜಿನಗರ ಪೊಲೀಸು ಆಯುಕ್ತರ ಕಾರ್ಯಾಲಯದಲ್ಲಿ; ಪುಣೆಯ ಸಮಿತಿಯ ಶ್ರೀ. ದೀಪಕ ಆಗವಣೆ ಮತ್ತು ಶ್ರೀಶಿವಪ್ರತಿಷ್ಠಾನ ಹಿಂದುಸ್ಥಾನದ ಶ್ರೀ. ಋಷಿಕೇಶ ಕಾಮಥೆ ಇವರು ಪುಣೆ ಪೊಲೀಸು ಆಯುಕ್ತರ ಕಾರ್ಯಾಲಯದಲ್ಲಿ; ಹಾಗೂ ಜಳಗಾವ ಇಲ್ಲಿಯ ಹಿಂದೂರಾಷ್ಟ್ರ ಸೇನೆಯ ಉತ್ತರ ಮಹಾರಾಷ್ಟ್ರದ ಪ್ರಾಂತ ಪ್ರಮುಖ ಶ್ರೀ. ಮೋಹನ ತಿವಾರಿ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಗಜಾನನ ತಂಬಟ, ಹಿಂದುತ್ವನಿಷ್ಠ ನ್ಯಾಯವಾದಿ ನಿರಂಜನ ಚೌಧರಿ ಮತ್ತು ಹ.ಭ.ಪ. ಯೋಗೇಶ ಮಹಾರಾಜ ಕೋಳಿ ಇವರು ಜಳಗಾವ ಜಿಲ್ಲಾಧಿಕಾರಿ ಅಭಿಜಿತ ರಾವುತ, ಹಾಗೂ ಜಳಗಾವ ಪೊಲೀಸ್ ಅಧೀಕ್ಷಕ ಕಾರ್ಯಾಲಯದಲ್ಲಿ ದೂರಿನ ಅರ್ಜಿಯನ್ನು ನಮೂದಿಸಿದ್ದಾರೆ. ಈ ಸಮಯದಲ್ಲಿ ಜಳಗಾವ ಜಿಲ್ಲಾಧಿಕಾರಿ ಶ್ರೀ. ರಾವುತ ಇವರು ಈ ಪ್ರಕರಣದಲ್ಲಿ ಗಮನ ಹರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಆಶ್ವಾಸನೆಯನ್ನು ಕೊಟ್ಟಿದ್ದಾರೆ.