ನೂಹದಲ್ಲಿ ನಡೆದ ದಾಳಿ ಬಗ್ಗೆ ಸರಕಾರಕ್ಕೆ ಪೂರ್ವ ಸೂಚನೆ ಇರಲಿಲ್ಲ !

ಆಂತರಿಕ ಶತ್ರುಗಳ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲಾಗದ ಸರಕಾರವು ವಿದೇಶಿ ಶಕ್ತಿಗಳ ಆಕ್ರಮಣವನ್ನು ಹೇಗೆ ಹಿಮ್ಮೆಟ್ಟಿಸುತ್ತದೆ ?

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಚಕಮಕಿಯಲ್ಲಿ ೩ ಭಾರತೀಯ ಸೈನಿಕರ ವೀರಮರಣ !

ಕೇಂದ್ರಾಡಳಿತ ಪ್ರದೇಶ ಕುಲಗಾಮಾ ಜಿಲ್ಲೆಯಲ್ಲಿ ಆಗಸ್ಟ್ ೫ ರಂದು ಜಿಹಾದಿ ಭಯೋತ್ಪಾದಕರೊಂದಿಗೆ ನಡೆದ ಚಕಮಕಿಯಲ್ಲಿ ೩ ಸೈನಿಕರು ವೀರಗತಿ ಹೊಂದಿದ್ದಾರೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ ಸುರಕ್ಷಾ ದಳದವರಿಗೆ ದಕ್ಷಿಣ ಕಾಶ್ಮೀರದ ಕುಲಗಾಮ ಜಿಲ್ಲೆಯಲ್ಲಿ ಕೆಲವು ಭಯೋತ್ಪಾದಕರು ಬಂದಿರುವ ಸೂಚನೆ ದೊರೆತಿತ್ತು.

ಪುರುಷರೊಂದಿಗೆ ಮಹಿಳೆಯರನ್ನೂ ನಮಾಜ್ ಮಾಡಲು ಅನುಮತಿ ನೀಡಿದ ಪ್ರಕರಣದಲ್ಲಿ ಮೌಲ್ವಿಯ ಬಂಧನ !

ಪುರುಷರೊಂದಿಗೆ ಮಹಿಳೆಯರನ್ನೂ ನಮಾಜ್ ಮಾಡಲು ಅನುಮತಿ ನೀಡಿದ ಪ್ರಕರಣದಲ್ಲಿ ಮೌಲ್ವಿ ಪಾಂಜಿ ಗುಮಿಲಾಂಗರನ್ನು ಬಂಧಿಸಲಾಗಿದೆ. ಅವರು ಇಸ್ಲಾಂನ ಅವಮಾನ ಮಾಡಿದ್ದಾರೆ ಮತ್ತು ದ್ವೇಷ ಹರಡುವ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸಾಮೂಹಿಕ ಬಲಾತ್ಕಾರದ ನಂತರ ಹುಟ್ಟಿದ ಮಗನಿಂದ ೨೮ ವರ್ಷದ ನಂತರ ತಾಯಿಗೆ ನ್ಯಾಯ ದೊರಕಿಸಿಕೊಟ್ಟ !

ಇಲ್ಲಿಯ ೨೮ ವರ್ಷಗಳ ಹಿಂದಿನ ಸಾಮೂಹಿಕ ಬಲಾತ್ಕಾರ ಪ್ರಕರಣದ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಸಾಮೂಹಿಕ ಬಲಾತ್ಕಾರದ ಸಮಯದಲ್ಲಿ ಸಂತ್ರಸ್ತೆಯು ೧೨ ವರ್ಷವಳಾಗಿದ್ದಳು. ೨೮ ವರ್ಷಗಳನಂತರ ಉತ್ತರ ಪ್ರದೇಶ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ದೆಹಲಿ ವಿಮಾನ ನಿಲ್ದಾಣದಿಂದ ಖಲಿಸ್ತಾನಿ ಭಯೋತ್ಪಾದಕನ ಬಂಧನ

ಪಂಜಾಬ್ ಪೊಲೀಸರು ಭಯೋತ್ಪಾದಕ ಸಂಘಟನೆ ‘ಖಲಿಸ್ತಾನ್ ಲಿಬರೇಶನ್ ಫೋರ್ಸ್’ ನ ಭಯೋತ್ಪಾದಕ ಹರಜಿತ್ ಸಿಂಗ್ ನನ್ನು ದೆಹಲಿ ವಿಮಾನ ನಿಲ್ದಾಣದಿಂದ ಬಂಧಿಸಿದ್ದಾರೆ. ಅವನು ಸ್ಪೇನ್ ದೇಶದ ಪ್ರಜೆಯಾಗಿದ್ದಾನೆ, ಅವನ ಸಹಚರ ಅಮರಿಂದರ್ ಸಿಂಗ್ ಅಲಿಯಾಸ್ ಬಂಟಿಯನ್ನು ಪೊಲೀಸರು ಲೂಧಿಯಾನದಿಂದ ಬಂಧಿಸಿದ್ದಾರೆ.

ಮಾರಕಾಸ್ತ್ರದಿಂದ ಪೊಲೀಸರ ಮೇಲೆ ಹಲ್ಲೆ : ಆರೋಪಿ ಅಫ್ರೀದ್ ಖಾನ್ ಬಂಧನ

ಅಫ್ರೀದ್ ಪೊಲೀಸರನ್ನು ಅವಾಚ್ಯ ಪದಗಳಲ್ಲಿ ನಿಂದಿಸಿ ತನ್ನ ಬಳಿ ಇಟ್ಟುಕೊಂಡಿದ್ದ ಮಚ್ಚಿನಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ ಇದನ್ನು ತಪ್ಪಿಸಿಕೊಳ್ಳುವ ಭರದಲ್ಲಿ ಶಿವಪ್ರಸಾದ ಇವರ ಎಡಗೈನ ಬೆರಳಿಗೆ ಗಾಯವಾಗಿದೆ.

ನೂಹದಲ್ಲಿ 2 ಮಸೀದಿಗಳ ಮೇಲೆ ಪೆಟ್ರೋಲ್ ಬಾಂಬ್ ನಿಂದ ದಾಳಿ !

ನೂಹದಲ್ಲಿ ಹಿಂಸಾಚಾರದ ನಂತರ, ಹರಿಯಾಣದ ಇತರ ಜಿಲ್ಲೆಗಳಲ್ಲಿ ಹಿಂಸಾಚಾರದ ಘಟನೆಗಳು ಮುಂದುವರೆದಿದೆ. ಆಗಸ್ಟ್ 2 ರ ರಾತ್ರಿ, ನೂಹ ಜಿಲ್ಲೆಯ ತಾವಡು ಎಂಬಲ್ಲಿ 2 ಮಸೀದಿಗಳಿಗೆ ಬೆಂಕಿ ಹಚ್ಚಲಾಯಿತು.

ಬಂಗಾಳದಲ್ಲಿ ‘ಡೇಟಿಂಗ್’ ಸೇವೆ ನೀಡುವ ಹೆಸರಿನಲ್ಲಿ ವಂಚನೆ, 16 ಜನರ ಬಂಧನ !

‘ಡೇಟಿಂಗ್’ ಸೇವೆಗಳನ್ನು ಒದಗಿಸುವ ನೆಪದಲ್ಲಿ ನಕಲಿ ‘ಕಾಲ್ ಸೆಂಟರ್’ಗಳನ್ನು ನಡೆಸುತ್ತಿದ್ದ 16 ಜನರನ್ನು ಬಂಗಾಳ ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ 10 ಯುವತಿಯರು ಮತ್ತು 6 ಪುರುಷರು ಸೇರಿದ್ದಾರೆ.

ಭಾರತೀಯ ಯುವಕನೊಂದಿಗೆ ಮದುವೆಯಾಗಲು ಪಾಕಿಸ್ತಾನದಿಂದ ಬಂದ ಸೀಮಾ ಹೈದರಳ ತನಿಖೆ ಮಾಡಿ ಒಳಸಂಚನ್ನು ಬಹಿರಂಗಪಡಿಸುವುದು ಆವಶ್ಯಕ ! – ಶ್ರೀ. ವಿಕ್ರಮ ಸಿಂಹ

ಮಾಧ್ಯಮಗಳಲ್ಲಿ ಮೆರೆಯುತ್ತಿರುವ ಸೀಮಾ-ಸಚಿನ ಈ ಬಗ್ಗೆ ಉತ್ತರಪ್ರದೇಶದ ಮಾಜಿ ಪೊಲೀಸ್ ಉಪಮಹಾನಿರೀಕ್ಷಕ ಶ್ರೀ. ವಿಕ್ರಮ ಸಿಂಹ ಇವರು ‘ಅಂಜೂ ಪಂಕಜ ಶೊ’ ಎಂಬ ‘ಯೂ ಟ್ಯೂಬ್’ ವಾಹಿನಿಯಲ್ಲಿ ಮಾಡಿದ ವಿಶ್ಲೇಷಣೆಯನ್ನು ಇಲ್ಲಿ ನೀಡುತ್ತಿದ್ದೇವೆ.

ಕೊಯಿಮತ್ತೂರು (ತಮಿಳುನಾಡು)ನಲ್ಲಿ ಬಾಂಬ್ ಸ್ಪೋಟದ ಪ್ರಕರಣದಲ್ಲಿನ ಇನ್ನೊಬ್ಬ ಭಯೋತ್ಪಾದಕನ ಬಂಧನ

ಕಳೆದ ವರ್ಷ ಇಲ್ಲಿ ಒಂದು ಪ್ರಾಚೀನ ದೇವಸ್ಥಾನದ ಬಳಿ ಕಾರಿನಲ್ಲಿ ನಡೆದ ಬಾಂಬ್ ಸ್ಪೋಟದ ಪ್ರಕರಣದಲ್ಲಿ ಪೊಲೀಸರು ಮಹಮ್ಮದ್ ಇದ್ರೀಸ್ ನನ್ನು ಬಂಧಿಸಿದ್ದಾರೆ. ಈ ಸ್ಪೋಟದ ಮುಖ್ಯ ಆರೋಪಿ ಜೇಮ್ಸ್ ಮುಬೀನ್ ಸಾವನ್ನಪ್ಪಿದ್ದಾನೆ.