ಪ್ರಯಾಗರಾಜನಲ್ಲಿ ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಮಹಂತ ನರೇಂದ್ರ ಗಿರಿ ಅವರ ಅನುಮಾನಾಸ್ಪದ ಸಾವು

ಮಹಂತ ನರೇಂದ್ರ ಗಿರಿಯವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ – ಪೊಲೀಸರ ಹೇಳಿಕೆ

ಸಾಯುವ ಮುನ್ನ ಬರೆದ ಪತ್ರದಲ್ಲಿ ಶಿಷ್ಯನ ಹೆಸರು

ಉತ್ತರಪ್ರದೇಶ ಸರಕಾರವು ತಕ್ಷಣವೇ ಈ ಪ್ರಕರಣದ ತನಿಖೆ ನಡೆಸಬೇಕು ಮತ್ತು ಹಿಂದೂಗಳ ಮುಂದೆ ಸತ್ಯವನ್ನು ತರಬೇಕು ! – ಸಂಪಾದಕರು

ಮಹಂತ ನರೇಂದ್ರ ಗಿರಿ

ಪ್ರಯಾಗರಾಜ (ಉತ್ತರಪ್ರದೇಶ) – ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಮಹಂತ ನರೇಂದ್ರ ಗಿರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆಯು ಬೆಳಕಿಗೆ ಬಂದಿದೆ. ಇಲ್ಲಿಯ ಬಾಘಂಬರಿ ಮಠದಲ್ಲಿ ಅವರ ಶವವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಮಹಂತರು ಆತ್ಮಹತ್ಯೆ ಮಾಡಿಕೊಂಡಿದ್ದು ಅವರು ಆತ್ಮಹತ್ಯೆಯ ಮುನ್ನ ಬರೆದ ಐದು ಪುಟಗಳ ಪತ್ರವು ಪತ್ತೆಯಾಗಿದೆ’, ಎಂದು ಪೊಲೀಸರು ಹೇಳಿದ್ದಾರೆ. ಅದರಲ್ಲಿ ಅವರು ತಾನು ತಮ್ಮ ಶಿಷ್ಯನಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ‘ನನ್ನ ಶಿಷ್ಯನು ನನ್ನನ್ನು ಅಪಮಾನಿಸುತ್ತಿದ್ದನು’, ಎಂದು ಹೇಳಲಾಗಿದೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಆದರೆ, ‘ಹೆಚ್ಚಿನ ತನಿಖೆಯ ನಂತರ ಮಾಹಿತಿಯು ಬೆಳಕಿಗೆ ಬರಲಿದೆ’, ಎಂದು ಪೊಲೀಸರು ತಿಳಿಸಿದ್ದಾರೆ. ಮಹಂತ ನರೇಂದ್ರ ಗಿರಿಯವರಿಗೆ ಶಿಷ್ಯ ಆನಂದ ಗಿರಿ ಇವರೊಂದಿಗೆ ಸಂಪತ್ತಿನ ವಿವಾದವಿತ್ತು; ಆದರೆ ನಂತರ ಮಧ್ಯವರ್ತಿಗಳಿಂದ ಅದನ್ನು ಇತ್ಯರ್ಥ ಪಡಿಸಲಾಗಿತ್ತು. ಮಹಂತ ನರೇಂದ್ರ ಗಿರಿ ಇವರ ಸಾವಿನ ಬಗ್ಗೆ ಸಂತರು, ಮಹಂತರು ಮೊದಲಾದವರು ತಮ್ಮ ದುಃಖವನ್ನು ವ್ಯಕ್ತಪಡಿಸುತ್ತಿದ್ದಾರೆ.