ಅಲವರ (ರಾಜಸ್ಥಾನ) ಇಲ್ಲಿ ಮತಾಂಧರ ಸಮೂಹದಿಂದ ನಡೆದ ಹಲ್ಲೆಯಲ್ಲಿ ದಲಿತ ಹಿಂದೂ ಯುವಕನ ಸಾವು

* ಹಿಂದೂಗಳನ್ನು ಅಸಹಿಷ್ಣುಗಳು ಎಂದು ಹೇಳಿ ಪ್ರಶಸ್ತಿಗಳನ್ನು ಹಿಂತಿರುಗಿಸುವ ಲೇಖಕ, ಸಾಹಿತಿ, ಪತ್ರಕರ್ತರು ಮುಂತಾದ ಗುಂಪು ಈಗ ಎಲ್ಲಿದ್ದಾರೆ ? ಕಾಂಗ್ರೆಸ್‍ನ ರಾಜ್ಯದಲ್ಲಿ ಮತಾಂಧರಿಂದ ಆಗುವ ಹಿಂದೂಗಳ ಹತ್ಯೆಯ ವಿಷಯವಾಗಿ ಈಗ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ತೃಣಮೂಲ ಕಾಂಗ್ರೆಸ್‍ ಮುಂತಾದ ಕಪಟ ಜಾತ್ಯತೀತವಾದಿ ರಾಜಕೀಯ ಪಕ್ಷಗಳು ಎಲ್ಲಿವೆ ? – ಸಂಪಾದಕರು 

* ‘ದಲಿತ-ಮುಸ್ಲಿಮ್ ಭಾಯಿ ಭಾಯಿ’ ಎಂಬ ಘೋಷಣೆ ನೀಡುವ ಮತಾಂಧರು ಈ ಪ್ರಕರಣದ ಕಡೆಗೆ ತಮ್ಮ ಅನುಕೂಲಕ್ಕೆ ನೋಡಿಯೂ ನೋಡದ ಹಾಗೆ ಇರುತ್ತಾರೆ, ಎಂಬುದು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು 

( ಪ್ರಾತಿನಿಧಿಕ ಚಿತ್ರ )

ಅಲವರ (ರಾಜಸ್ಥಾನ) – ಇಲ್ಲಿಯ ಮತಾಂಧರ ಸಮೂಹವು ಯೋಗೇಶ ಜಾಟವ ಈ ದಲಿತ ಯುವಕನನ್ನು ಥಳಿಸಿ ಬರ್ಬರವಾಗಿ ಹತ್ಯೆಮಾಡಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಜನರು ಅಲ್ಲಿಯ ಅಲವರ – ಭರತಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಯೋಗೇಶನ ಶವವನ್ನಿಟ್ಟು ರಸ್ತೆ ತಡೆ ಮಾಡಿದ್ದಾರೆ. ಯೋಗೇಶ ಇವರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಸಹಾಯಧನ ಘೋಷಿಸಬೇಕು, ಎಂದು ರಾಜ್ಯ ಸರಕಾರಕ್ಕೆ ಒತ್ತಾಯಿಸಲಾಗಿದೆ. ಬಿಜೆಪಿಯ ಮಾಜಿ ಶಾಸಕ ಜ್ಞಾನದೇವ ಆಹುಜಾ ಇವರು ಯೋಗೇಶ ಅವರ ಪರಿವಾರದ ಒಬ್ಬರಿಗೆ ಸರಕಾರಿ ಕೆಲಸ ಕೊಡುವ ಬಗ್ಗೆ ಸಹ ಬೇಡಿಕೆ ಇಟ್ಟಿದ್ದಾರೆ. ಪೊಲೀಸರು ಈ ಹತ್ಯೆಯ ಪ್ರಕರಣದಲ್ಲಿ ರಶೀದ, ಸಾಜೇತ ಪಠಾಣ, ಮುಬೀನಾ ಮತ್ತು ಇತರ ಮೂವರ ಮೇಲೆ ದೂರನ್ನು ದಾಖಲಿಸಿದ್ದಾರೆ.

ಯೋಗೇಶ ಇವರಿಗೆ ಥಳಿಸಿದ ಘಟನೆ ಸಪ್ಟೆಂಬರ 15 ರಂದು ನಡೆದಿತ್ತು. ಯೋಗೇಶ ದ್ವಿಚಕ್ರವಾಹನದಲ್ಲಿ ಹೋಗುವಾಗ ಅವರ ವಾಹನ ಒಬ್ಬ ಮಹಿಳೆಗೆ ಗುದ್ದಿದ ಕಾರಣ ಸಮೂಹವು ಅವರನ್ನು ಹಿಡಿದು ಥಳಿಸಿದ್ದರು. ಇದರಲ್ಲಿ ಅವನು ಗಂಭೀರವಾಗಿ ಗಾಯಗೊಂಡರು. ಕೊನೆಗೆ ಸಪ್ಟೆಂಬರ 18 ರಂದು ಅವರು ಸಾವನ್ನಪ್ಪಿದರು.

ಪೊಲೀಸ್ ಅಧಿಕಾರಿ ಇಲಿಯಾಸ್ ಆರೋಪಿಯನ್ನು ರಕ್ಷಿಸುತ್ತಿರುವುದಾಗಿ ಸಂಬಂಧಿಕರ ಆರೋಪ

ಪೊಲೀಸರು ಈ ಆರೋಪದ ಬಗ್ಗೆ ವಿಚಾರಣೆ ನಡೆಸಿ ಸತ್ಯವನ್ನು ಜನರಿಗೆ ಹೇಳಬೇಕು ! – ಸಂಪಾದಕರು 

ಸಂಬಂಧಿಕರು, ಪೊಲೀಸ್ ಠಾಣೆಯ ಅಧಿಕಾರಿ ಇಲಿಯಾಸ ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದ್ದರಿಂದ ಇಲಿಯಾಸ ಇವರನ್ನು ಅಮಾನತು ಮಾಡಿ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಹೇಳಿದೆ.