ರಾಜಸ್ಥಾನದಿಂದ ಪಾಕಿಸ್ತಾನಿ ಗೂಢಚರನ ಬಂಧನ !

ಇಂತಹ ದೇಶದ್ರೋಹಿಗಳನ್ನು ಎಲ್ಲಿಯ ತನಕ ನಡುರಸ್ತೆಯಲ್ಲಿ ಗಲ್ಲಿಗೆ ಏರಿಸುವುದಿಲ್ಲವೋ, ಅಲ್ಲಿಯವರೆಗೂ ಇಂತಹ ಕೃತ್ಯ ಮಾಡುವವರಲ್ಲಿ ಭಯ ಹುಟ್ಟುವುದಿಲ್ಲ, ಇದು ಸರಕಾರಕ್ಕೆ ಎಂದು ಅರ್ಥವಾಗುವುದು ?- ಸಂಪಾದಕರು 

ಸಂದೀಪ ಕುಮಾರ

ಜಯಪುರ – ಸೈನ್ಯ ಮತ್ತು ರಾಜಸ್ಥಾನ ಪೊಲೀಸ್ ಇವರ ಗೂಢಚರ ವಿಭಾಗದಿಂದ ರಾಜಸ್ಥಾನದ ಝುಂಝುನು ಎಂಬಲ್ಲಿನ ನರಹರ ಪ್ರದೇಶದಿಂದ ಒಬ್ಬ ಪಾಕಿಸ್ತಾನೀ ಗೂಢಚರನನ್ನು ಬಂಧಿಸಲಾಗಿದೆ. ಸಂದೀಪ ಕುಮಾರ (30 ವರ್ಷ) ಎಂದು ಆತನ ಹೆಸರಾಗಿದ್ದು, ಆತ ಪಾಕಿಸ್ತಾನದ ಗೂಢಚರ ಇಲಾಖೆ ಐ.ಎಸ್.ಐ. ಗಾಗಿ ಬೇಹುಗಾರಿಕೆ ಮಾಡುತ್ತಿದ್ದನು. ಆತ ಇಲ್ಲಿ ಒಂದು ‘ಗ್ಯಾಸ್ ಏಜೆನ್ಸಿ’ ನಡೆಸುತ್ತಾನೆ. ಅಲ್ಲಿಂದ ಸಮೀಪದಲ್ಲಿಯೇ ಸೈನ್ಯದ ನೆಲೆ ಇದ್ದೂ ಆತ ಅಲ್ಲಿಗೂ ಗ್ಯಾಸ್ ಪೂರೈಸುತ್ತಾನೆ.

ರಾಜಸ್ಥಾನದ ಪೊಲೀಸ್ ನಿರ್ದೇಶಕ (ಗುಪ್ತಚರ ವಿಭಾಗ) ಉಮೇಶ ಮಿಶ್ರ ಇವರು, ಜುಲೈ 2021 ರಲ್ಲಿ ಐ.ಎಸ್.ಐ.ನ ಅಧಿಕಾರಿಗಳು ಸಂದೀಪ ಕುಮಾರ ಇವನಿಂದ ಇಲ್ಲಿಯ ಸೇನೆಯ ನೆಲೆಯ ಮಾಹಿತಿ ಮತ್ತು ಛಾಯಾಚಿತ್ರಗಳನ್ನು ಕೇಳಿದ್ದರು, ಅದಕ್ಕನುಸಾರ ಸಂದೀಪನು ಸೈನ್ಯದ ನರಹರನಲ್ಲಿಯ ನೆಲೆಯ ಛಾಯಾಚಿತ್ರಗಳು, ಹಾಗೂ ಸಂವೇದನಾಶೀಲ ಮತ್ತು ಗೌಪ್ಯ ಸೂಚನೆಗಳನ್ನು ‘ವಾಟ್ಸಾಪ್’, ಸಂಚಾರವಾಣಿ, ಅದೇ ರೀತಿ ‘ವಿಡಿಯೋ ಕಾಲ’ ಮುಖಾಂತರ ಐ.ಎಸ್.ಐ. ನ ಅಧಿಕಾರಿಗಳಿಗೆ ಕಳುಹಿಸಿದ್ದಾನೆ. ಅದಕ್ಕಾಗಿ ಅವನಿಗೆ ಹಣ ನೀಡಲಾಗುತ್ತಿತ್ತು ಎಂದು ಹೇಳಿದ್ದಾರೆ.