‘ಡಿಸಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಈ ಪರಿಷತ್ತಿನ ವಿರುದ್ಧ ಮುಂಬಯಿ ಮತ್ತು ದೆಹಲಿಯಲ್ಲಿ ಅಮೇರಿಕಾದ ರಾಯಭಾರಿ ಕಚೇರಿ ಬಳಿ ಹಿಂದುತ್ವನಿಷ್ಠ ಸಂಘಟನೆಗಳ ಪ್ರತಿಭಟನೆ !

ಸೆಪ್ಟೆಂಬರ್ 10 ರಿಂದ 12 ವರೆಗೆ ಅಮೇರಿಕದಲ್ಲಿ ನಡೆಯುತ್ತಿರುವ ‘ಡಿಸಮೆಂಟಲಿಲಿಂಗ್ ಗ್ಲೋಬಲ್ ಹಿಂದುತ್ವ’ ಈ ಅಂತರರಾಷ್ಟ್ರೀಯ ಪರಿಷತ್ತಿನ ಮೂಲಕ ಹಿಂದುತ್ವದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ದ್ವೇಷವನ್ನು ಹಬ್ಬಿಸಿ ಜಗತ್ತಿನಾದ್ಯಂತದ ಹಿಂದೂಗಳಿಗೆ ಅಸುರಕ್ಷಿತತೆಯ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ಈ ಪರಿಷತ್ತಿನ ಆಯೋಜಕರು, ಪಾಲ್ಗೊಳ್ಳಲಿರುವ ವಕ್ತಾರರು, ಈ ಪರಿಷತ್ತನ್ನು ಬೆಂಬಲಿಸುವ ಜನರು ಹಾಗೂ ಸಂಸ್ಥೆ ಈ ಎಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದುತ್ವನಿಷ್ಠ ಸಂಘಟನೆಗಳು ಇಂದು ಮುಂಬಯಿ ಮತ್ತು ದೆಹಲಿಯಲ್ಲಿರುವ ಅಮೇರಿಕ ರಾಯಭಾರ ಕಚೇರಿ ಬಳಿ ಪ್ರದರ್ಶನಗಳನ್ನು ನಡೆಸಿದವು. ಈ ಕುರಿತಾದ ಮನವಿಯನ್ನು ರಾಯಭಾರ ಕಚೇರಿಯ ಪರವಾಗಿ ಮುಂಬಯಿನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ನಿರೀಕ್ಷಕರು ಮತ್ತು ದೆಹಲಿಯ ಅಮೇರಿಕಾದ ರಾಯಭಾರ ಕಚೇರಿಯ ಭದ್ರತಾ ಅಧಿಕಾರಿಗಳು ಸ್ವೀಕರಿಸಿದರು.

ಡಿಸಮೆಂಟಲಿಂಗ್‌ ಗ್ಲೋಬಲ್‌ ಹಿಂದುತ್ವ ಪರಿಷತ್’ ಇದರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಅಮೇರಿಕಾದ ರಾಯಭಾರಿ ಕಚೇರಿ ಪರವಾಗಿ ಮನವಿ ಸ್ವೀಕರಿಸುತ್ತಿರುವ ಶ್ರೀ. ಸಚಿನ ರಾಣೆ

ಮುಂಬಯಿ ಪೊಲೀಸರು ರಾಯಭಾರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ಅನುಮತಿ ನಿರಾಕರಿಸಿದ್ದರು; ಆದರೆ ಪೊಲೀಸರು ಒದಗಿಸಿದ ಜಾಗದಲ್ಲಿ, ಕೊರೋನಾದ ಎಲ್ಲಾ ಸರಕಾರಿ ನಿಯಮಗಳನ್ನು ಅನುಸರಿಸಿ ಪ್ರತಿಭಟನೆಗಳನ್ನು ನಡೆಸಲಾಯಿತು. ಈ ಸಮಯದಲ್ಲಿ, ಹಿಂದೂ ಜನಜಾಗೃತಿ ಸಮಿತಿ, ಹಿಂದ ಸೈಕಲ್ ಗಣೇಶೋತ್ಸವ ಸಮಿತಿ, ಹಿಂದೂರಾಷ್ಟ್ರಸೇನೆ ಇತ್ಯಾದಿ ಸಂಘಟನೆಗಳೊಂದಿಗೆ ಹಿಂದೂ ಧರ್ಮಪ್ರೇಮಿಗಳು ತಮ್ಮ ಕೈಯಲ್ಲಿ ನಿಷೇಧ ಫಲಕಗಳನ್ನು ಹಿಡಿದು ಆಂದೋಲನ ನಡೆಸಿದರು.

ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ವತಿಯಿಂದ ‘ಹಿಂದುತ್ವ ರಕ್ಷಾ ಬೈಠಕ್’

‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ವತಿಯಿಂದ ‘ಹಿಂದುತ್ವ ರಕ್ಷಾ ಬೈಠಕ್’ ಮೂಲಕ ‘ಡಿಸಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಪರಿಷತ್ತಿನ ಮೂಲಕ ನಡೆಯುತ್ತಿರುವ ಸೈದ್ಧಾಂತಿಕ ದಾಳಿಗಳ ವಿರುದ್ಧ ಹಾಗೂ ಈ ನಿಟ್ಟಿನಲ್ಲಿ ಮುಂದಿನ ಪ್ರಯತ್ನಗಳ ದಿಕ್ಕನ್ನು ನಿರ್ಧರಿಸಲಾಗುವುದು. ಈ ಸಭೆಯಲ್ಲಿ ಭಾರತದ ಹಿಂದುತ್ವನಿಷ್ಠ ಸಂಘಟನೆಗಳ ಪ್ರತಿನಿಧಿಗಳು, ಗಣ್ಯರು, ನ್ಯಾಯವಾದಿಗಳು ಮುಂತಾದವರು ಪಾಲ್ಗೊಳ್ಳಲಿದ್ದಾರೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಈ ಸಮಯದಲ್ಲಿ ಹೇಳಿದರು.