ಮಹೋಬಾ (ಉತ್ತರಪ್ರದೇಶ) ಜಿಲ್ಲೆಯಲ್ಲಿ ಮತಾಂತರಿಸಲು ಪ್ರಯತ್ನಿಸುತ್ತಿದ್ದ ಕ್ರೈಸ್ತ ಧರ್ಮಪ್ರಚಾರಕನ ಬಂಧನ

ಸ್ವಾತಂತ್ರ್ಯವೀರ ಸಾವರಕರರು ಇವರು ಹೇಳಿರುವಂತೆ, ‘ಮತಾಂತರವೆಂದರೆ ರಾಷ್ಟ್ರಾಂತರ’ ಆಗಿದೆ. ಆದ್ದರಿಂದ ಸರಕಾರವು ರಾಷ್ಟ್ರೀಯ ಮಟ್ಟದಲ್ಲಿ ಮತಾಂತರ ನಿರ್ಬಂಧ ಕಾನೂನು ಮಾಡಬೇಕು, ಎಂದು ಹಿಂದೂಗಳ ಬೇಡಿಕೆಯಾಗಿದೆ.- ಸಂಪಾದಕರು 

ಲಕ್ಷ್ಮಣಪುರಿ (ಉತ್ತರಪ್ರದೇಶ) – ರಾಜ್ಯದ ಮಹೋಬಾ ಜಿಲ್ಲೆಯಲ್ಲಿ ಹಿಂದೂಗಳನ್ನು ಮತಾಂತರಿಸಲು ಪ್ರಯತ್ನಿಸುತ್ತಿದ್ದ ಆಶಿಷ ಜಾನ್ ಎಂಬ ಕ್ರೈಸ್ತ ಧರ್ಮಪ್ರಚಾರಕನನ್ನು ಇತ್ತೀಚೆಗೆ ಬಂಧಿಸಲಾಯಿತು. ಜಾನ್ ಇವನು ಮತಾಂತರವಾಗುವಂತೆ ಸಂಜಯ ದ್ವಿವೇದಿ ಇವರಿಗೆ ಆಮಿಷವೊಡ್ಡಿದ್ದನು, ಅದೇ ರೀತಿ ಅವರ ಮೇಲೆ ಒತ್ತಡ ಹೇರಿದ್ದನು. ಆದ್ದರಿಂದ ದ್ವಿವೇದಿಯವರು ಪೊಲೀಸರಲ್ಲಿ ದೂರು ನೀಡಿದ್ದರು.

ಮಹೋಬಾದ ಪನವಾಡಿ ಪ್ರದೇಶದಲ್ಲಿ ಠಾಕೂರ ದಾಸ ಮೊಹಲ್ಲಾದಲ್ಲಿ ವಾಸಿಸುವ ಸಂಜಯ ದ್ವಿವೇದಿ ಇವರು ಕೆಲವು ದಿನದಿಂದ ಅನಾರೋಗ್ಯದಿಂದಿದ್ದರು. ಕ್ರೈಸ್ತ ಜಾನ್ ಇವನು ದ್ವಿವೇದಿಯವರಿಗೆ ಕಾಯಿಲೆ ವಾಸಿಗೊಳಿಸುವುದಾಗಿ ಮತ್ತು ವ್ಯಾಪಾರಕ್ಕಾಗಿ ಧನಸಹಾಯ ಮಾಡುವುದಾಗಿ ಆಮಿಷವೊಡ್ಡಿದ್ದನು. ದ್ವಿವೇದಿಯವರು ದೂರಿನಲ್ಲಿ, ತನಗೆ ತಲೆನೋವಿನ ಕಾಯಿಲೆ ಇದೆ, ಆ ವಿಷಯವು ಆಶಿಷ ಜಾನ್ ಇವನಿಗೆ ತಿಳಿದಿತ್ತು. ಜಾನ್ ಇವನು ಅವರಿಗೆ ಕಾಯಿಲೆಯಿಂದ ಗುಣಮುಖನಾಗಲು ಕ್ರೈಸ್ತ ಧರ್ಮ ಸ್ವೀಕರಿಸುವಂತೆ ಹೇಳಿದನು. ಈ ಬಗ್ಗೆ ಮಾಹಿತಿ ಸಿಕ್ಕಿದ ನಂತರ ಹಿಂದುತ್ವನಿಷ್ಠ ಸಂಘಟನೆಯವರು ಪೊಲೀಸರಿಗೆ ತಿಳಿಸಿದರು. ನಂತರ ಪೊಲೀಸರಲ್ಲಿ ದೂರನ್ನು ದಾಖಲಿಸಲಾಯಿತು. ಜಾನ್ ಇವನು 20 ವರ್ಷದ ಹಿಂದೆ ಕ್ರೈಸ್ತಮತಕ್ಕೆ ಮತಾಂತರಗೊಂಡಿದ್ದನು. (ಜಾನ್ ಕಳೆದ 20 ವರ್ಷದಿಂದ ಎಷ್ಟು ಹಿಂದೂಗಳಿಗೆ ಆಮಿಷವೊಡ್ಡಿ ಮತಾಂತರಿಸಿದ್ದಾನೆ ಎಂಬ ಬಗ್ಗೆಯೂ ವಿಚಾರಣೆ ನಡೆಸುವುದು ಅವಶ್ಯಕವಾಗಿದೆ ! -ಸಂಪಾದಕರು)