ಹಿಂದೂ ರಾಷ್ಟ್ರ ಸ್ಥಾಪನೆಯ ಧರ್ಮಕಾರ್ಯದಲ್ಲಿ ಪಾಲ್ಗೊಂಡು ತಮ್ಮ ಉದ್ಧಾರ ಮಾಡಿಕೊಳ್ಳಿ ! – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಸನಾತನ ಸಂಸ್ಥೆಯ ವತಿಯಿಂದ ಪೂ. ರಮಾನಂದ ಗೌಡ ಇವರು ಇತ್ತೀಚೆಗೆ ‘ಕೊರೊನಾ ಮಹಾಮಾರಿಯ ವಿರುದ್ಧ ಮಾನಸಿಕ ಹಾಗೂ ಆಧ್ಯಾತ್ಮಿಕ ಸ್ತರದಲ್ಲಿ ಹೇಗೆ ಹೋರಾಡಬೇಕು ? ಈ ವಿಷಯ ದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾರ್ಗದರ್ಶನ ಮಾಡುತ್ತಿದ್ದರು. ಇದರ ನೇರ ಪ್ರಸಾರದ ಸಮಯದಲ್ಲಿ ೪ ಸಾವಿರದ ೩೦೦ ಜನರು ಹಾಗೂ ಮಾರ್ಗದರ್ಶನದ ನಂತರ ದಿನವಿಡೀ ೨೦ ಸಾವಿರ ಜಿಜ್ಞಾಸುಗಳು ಕಾರ್ಯಕ್ರಮದ ವಿಡಿಯೋ ನೋಡಿದರು.

ಹಿಂದೂ ವಿರೋಧಿ ಪ್ರಸಿದ್ಧಿ ಮಾಧ್ಯಮಗಳ ಪಿತೂರಿಯ ವಿರುದ್ಧ ಧರ್ಮಾಭಿಮಾನಿಗಳಿಂದ #Hinduphobic_Media ಟ್ವಿಟರ್ ಟ್ರೆಂಡ್ !

ಪ್ರಸಿದ್ಧಿ ಮಾಧ್ಯಮಗಳು ಮತ್ತು ಫೇಸ್‍ಬುಕ್ ಇವೆರಡೂ ಜಂಟಿಯಾಗಿ ಒಂದು ಪಿತೂರಿಯ ಮೂಲಕ ಹಿಂದೂಗಳನ್ನು ಮಟ್ಟಹಾಕಿ ಅವರ ಧ್ವನಿಯನ್ನು ಅದಮಲು ಪ್ರಯತ್ನಿಸುತ್ತಿವೆ. ಈ ಪಿತೂರಿಯ ವಿರುದ್ಧ ಹಿಂದೂ ಧರ್ಮಾಭಿಮಾನಿಗಳಿಂದ ಜೂನ್ ೨೭ ರಂದು #Hinduphobic_Media ಈ ಹೆಸರಿನ ಹ್ಯಾಷ್‍ಟ್ಯಾಗ್ ಟ್ರೆಂಡ್ ಮಾಡಲಾಗಿತ್ತು. ಅದು ರಾಷ್ಟ್ರೀಯ ಟ್ರೆಂಡ್‍ನಲ್ಲಿ ೫ ನೇ ಸ್ಥಾನದಲ್ಲಿತ್ತು. ಇದರಲ್ಲಿ ೩೬ ಸಾವಿರಕ್ಕಿಂತಲೂ ಹೆಚ್ಚು ಟ್ವೀಟ್ಸ್‍ಗಳನ್ನು ಮಾಡಲಾಯಿತು.

‘ಶಿವರಾಜ್ಯಾಭಿಷೇಕ ದಿನ : ಹಿಂದೂ ರಾಷ್ಟ್ರ ಸಂಕಲ್ಪ- ದಿನ’ ಕುರಿತು ವಿಶೇಷ ಆನ್‌ಲೈನ್ ಚರ್ಚಾಗೋಷ್ಠಿ !

ಛತ್ರಪತಿ ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ಯದ ಪ್ರತಿಜ್ಞೆ ತೆಗೆದುಕೊಳ್ಳುವ ಮೊದಲು ದೇಶದ ಸ್ಥಿತಿ ಹೇಗಿತ್ತೋ ಇಂದು ಕೂಡ ಅಂತಹ ಸ್ಥಿತಿ ನಿರ್ಮಾಣವಾಗಿದೆ. ಕೇವಲ ಶಿವರಾಜ್ಯಾಭಿಷೇಕ ದಿನದಂದು ಹಿಂದೂ ಸಾಮ್ರಾಜ್ಯ ದಿನವನ್ನು ಆಚರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಕಾಶಿ-ಮಥುರಾವನ್ನು ಸ್ವತಂತ್ರಗೊಳಿಸಲು ಶಿವರಾಯರ ಸಂಕಲ್ಪವಿತ್ತು.

ಉತ್ತರಪ್ರದೇಶದಲ್ಲಿ ಮತಾಂತರವು ಭಯೋತ್ಪಾದಕರೊಂದಿಗೆ ಸಂಬಂಧಿಸಿದೆ ಮತ್ತು ರಾಷ್ಟ್ರವ್ಯಾಪಿ ಇರುವುದರಿಂದ, ತನಿಖೆಯನ್ನು ‘ಎನ್‌ಐಎ’ಗೆ ಹಸ್ತಾಂತರಿಸಿ ! – ಹಿಂದೂ ಜನಜಾಗೃತಿ ಸಮಿತಿಯ ಬೇಡಿಕೆ

ಇತ್ತೀಚೆಗೆ ಉತ್ತರಪ್ರದೇಶದ ಒಂದು ಸಾವಿರ ಹಿಂದೂಗಳನ್ನು ಮತಾಂತರಗೊಳಿಸಿದ ಇಬ್ಬರು ಮೌಲ್ವಿಗಳನ್ನು ಬಂಧಿಸಿದ ನಂತರ, ಅವರಿಗೆ ಪಾಕಿಸ್ತಾನದ ‘ಐ.ಎಸ್.ಐ.’ ಈ ಗೂಢಚಾರ ಸಂಘಟನೆಯಿಂದ ಹಣಕಾಸು ಒದಗಿಸಲಾಗುತ್ತಿದೆ ಎಂಬುದು ವಿಚಾರಣೆಯ ಸಮಯದಲ್ಲಿ ಬೆಳಕಿಗೆ ಬಂದಿದೆ.

ಫೇಸಬುಕ್‌ನ ವೈಚಾರಿಕ ಭಯೋತ್ಪಾದನೆ !

ಫೇಸಬುಕ್‌ನ ಸಂಸ್ಥಾಪಕ ಮಾರ್ಕ ಝುಕೆರಬರ್ಗ ಸ್ವತಃ ಜ್ಯೂ ಧರ್ಮದವರಾಗಿದ್ದಾರೆ. ಜ್ಯೂ ಧರ್ಮದವರು ತಮ್ಮ ಅಸ್ತಿತ್ವಕ್ಕಾಗಿ ಬಹಳ ಸಂಘರ್ಷ ಮಾಡಿದ್ದಾರೆ. ಜಗತ್ತಿನಲ್ಲಿ ಹಿಂದೂ ಧರ್ಮದ ಬಳಿಕ ಅತ್ಯಧಿಕ ನರಮೇಧಕ್ಕೊಳಗಾದವರೆಂದರೆ ಜ್ಯೂ ವಂಶದವರಾಗಿದ್ದಾರೆ. ಈಗಲೂ ಜ್ಯೂಗಳ ದೇಶವಾಗಿರುವ ಇಸ್ರೈಲ್ ತನ್ನ ಅಸ್ತಿತ್ವಕ್ಕಾಗಿ ಅಕ್ಕಪಕ್ಕದ ದೊಡ್ಡ ದೊಡ್ಡ ಅರಬ-ಮುಸ್ಲಿಂ ದೇಶಗಳೊಂದಿಗೆ ಹೋರಾಡುತ್ತಿದೆ.

‘ಶ್ರೀ ರಾಮಮಂದಿರದ ಅಪಪ್ರಚಾರದ ಸಂಚು’ ಈ ಕುರಿತು ಆನ್‌ಲೈನ್ ಚರ್ಚಾಕೂಟ !

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ದೇವಾಲಯವನ್ನು ಆಯಾತಾಕೃತಿಯಲ್ಲಿ ನಿರ್ಮಿಸಲು ಅಡಚಣೆ ಬರುತ್ತಿತ್ತು. ಆದ್ದರಿಂದ ಹತ್ತಿರದ ಭೂಮಿಯನ್ನು ಖರೀದಿಸಲಾಯಿತು. ಅದರಲ್ಲಿ 2 ಕೋಟಿ ರೂಪಾಯಿಗಳ ಭೂಮಿಯನ್ನು 18 ಕೋಟಿ 50 ಲಕ್ಷಕ್ಕೆ ಖರೀದಿಸಲಾಗಿದೆ ಎಂದು ಆರೋಪಿಸಲಾಗಿದೆ. 2011 ರಲ್ಲಿ ಭೂಮಿಯ ಮೌಲ್ಯ 2 ಕೋಟಿ ರೂಪಾಯಿ ಇತ್ತು.

ಹಿಂದೂ ದೇವಾಲಯಗಳ ಪರಂಪರೆಯಲ್ಲಿ ಹಸ್ತಕ್ಷೇಪ ಮಾಡಲು ತಮಿಳುನಾಡಿನ ಸ್ಟಾಲಿನ್ ಸರಕಾರಕ್ಕೆ ಯಾವುದೇ ಅಧಿಕಾರವಿಲ್ಲ ! – ನ್ಯಾಯವಾದಿ ಸೀತಾರಾಮ ಕಲಿಂಗಾ

ಭಾರತದ ಇತಿಹಾಸದಲ್ಲಿ, ರಾಜರು ಮತ್ತು ಮಹಾರಾಜರು ದೇವಾಲಯಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ನಡೆಸುತ್ತಿರಲಿಲ್ಲ, ಆದರೆ ದೇವಾಲಯಗಳಿಗೆ ಭೂಮಿ ಮತ್ತು ಹಣವನ್ನು ದಾನ ಮಾಡುತ್ತಿದ್ದರು. ಆ ಸಮಯದಲ್ಲಿ ದೇವಾಲಯಗಳ ನಿರ್ವಹಣೆಯನ್ನು ಭಕ್ತರು ನೋಡಿಕೊಳ್ಳುತ್ತಿದ್ದರು

ಭಗವಾನ್ ಶಿವ ಮತ್ತು ಪಾರ್ವತಿ ಅವರ ಪ್ರಣಯಕ್ರೀಡೆ ಮಾಡುತ್ತಿರುವ ಚಿತ್ರವಿರುವ ಸಂಚಾರವಾಣಿಯ ‘ಕವರ್’ ಅನ್ನು ಆನ್‍ಲೈನ್ ಮಾರಾಟಕ್ಕಾಗಿ ಇಡುವ ಮೂಲಕ ಫ್ಲಿಪ್‍ಕಾರ್ಟ್’ನಿಂದ ಹಿಂದೂಗಳ ಧಾರ್ಮಿಕ ಭಾವನೆಗಳ ಘೋರ ಅವಮಾನ

ಹಿಂದುದ್ವೇಷಿ ‘ಫ್ಲಿಪ್‍ಕಾರ್ಟ್’ ಇತರ ಧರ್ಮಗಳ ಶ್ರದ್ಧಾಸ್ಥಾನಗಳ ಬಗ್ಗೆ ಇಂತಹ ಚಿತ್ರಗಳಿರುವ ಸಂಚಾರವಾಣಿಗಳ ‘ಕವರ್’ ಅನ್ನು ಮಾರಾಟ ಮಾಡುವ ಧೈರ್ಯವನ್ನು ತೋರಿಸಬಹುದೇ ? ಹಿಂದೂಗಳು ತಮ್ಮ ಶ್ರದ್ಧಾಸ್ಥಾನಗಳ ವಿಡಂಬನೆಯನ್ನು ಮಾಡಲು ಯಾರೂ ಧೈರ್ಯ ಮಾಡುವುದಿಲ್ಲ ಎಂಬ ಭಯವನ್ನು ಸೃಷ್ಟಿಸಬೇಕು !

#Facebook_Targets_HJS ಹ್ಯಾಶ್‌ಟ್ಯಾಗ್ ರಾಷ್ಟ್ರೀಯ ಮಟ್ಟದಲ್ಲಿ ಮೂರನೇ ಸ್ಥಾನ !

ಕಳೆದ ಕೆಲವು ತಿಂಗಳುಗಳಲ್ಲಿ ಫೇಸ್‌ಬುಕ್ ಹಿಂದುತ್ವದ ಪ್ರಚಾರ ಮಾಡುವುದನ್ನು ನಿಷೇಧಿಸಲು ಪ್ರಯತ್ನಿಸುತ್ತಿದೆ. ಈವರೆಗೆ ಫೇಸ್‌ಬುಕ್ ಇದು ಸನಾತನ ಸಂಸ್ಥೆ, ಸುದರ್ಶನ್ ಟಿವಿ, ಸುರೇಶ ಚವ್ಹಾಣಕೆ, ಬಿಜೆಪಿ ಶಾಸಕ ಟಿ. ರಾಜಾಸಿಂಹ ಹೀಗೆ ಅನೇಕ ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ನಾಯಕರ ಪುಟಗಳನ್ನು ನಿರ್ಬಂಧಿಸಿದೆ.

ಫೇಸ್‌ಬುಕ್‌ನ ಹಿಂದೂದ್ವೇಷದ ಹಿಂದೆ ಅಮೇರಿಕಾದ ‘ಟೈಮ್’ ನಿಯತಕಾಲಿಕೆಯ ಕೈವಾಡ !

ಫೇಸ್‌ಬುಕ್ ಹಿಂದೂ ಜನಜಾಗೃತಿ ಸಮಿತಿ, ಸನಾತನ ಪ್ರಭಾತ ನಿಯತಕಾಲಿಕೆ ಮತ್ತು ಸನಾತನ ಶಾಪ್‌ಗಳ ಫೇಸ್‌ಬುಕ್ ಪುಟಗಳಲ್ಲಿನ ವಿಷಯವನ್ನು ವಸ್ತುನಿಷ್ಠವಾಗಿ ಪರಿಶೀಲಿಸದೆ ಅನ್ಯಾಯವಾಗಿ ಕ್ರಮವನ್ನು ತೆಗೆದುಕೊಂಡಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !