ಅಯೋಧ್ಯೆಯಲ್ಲಿನ ಶ್ರೀ ರಾಮಮಂದಿರಕ್ಕೆ 34 ಕೋಟಿ ರೂಪಾಯಿಯ ಭೂಮಿ 18.50 ಕೋಟಿಗೆ ಸಿಕ್ಕಿತು; ಭೂಸ್ವಾಧೀನದಲ್ಲಿ ಹಗರಣ ಇಲ್ಲ- ಡಾ. ವಿಶ್ವಂಭರನಾಥ ಅರೋರಾ, ಹಿರಿಯ ಪತ್ರಕರ್ತ, ‘ಟೈಮ್ಸ್’ ಸಮೂಹ
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ದೇವಾಲಯವನ್ನು ಆಯಾತಾಕೃತಿಯಲ್ಲಿ ನಿರ್ಮಿಸಲು ಅಡಚಣೆ ಬರುತ್ತಿತ್ತು. ಆದ್ದರಿಂದ ಹತ್ತಿರದ ಭೂಮಿಯನ್ನು ಖರೀದಿಸಲಾಯಿತು. ಅದರಲ್ಲಿ 2 ಕೋಟಿ ರೂಪಾಯಿಗಳ ಭೂಮಿಯನ್ನು 18 ಕೋಟಿ 50 ಲಕ್ಷಕ್ಕೆ ಖರೀದಿಸಲಾಗಿದೆ ಎಂದು ಆರೋಪಿಸಲಾಗಿದೆ. 2011 ರಲ್ಲಿ ಭೂಮಿಯ ಮೌಲ್ಯ 2 ಕೋಟಿ ರೂಪಾಯಿ ಇತ್ತು. ಪ್ರತಿ ವರ್ಷವೂ ಇದರ ದರ ಹೆಚ್ಚುತ್ತಾ ಹೋಯಿತು. 2019 ರಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪು ಶ್ರೀ ರಾಮಮಂದಿರ ಪರವಾಗಿ ಬಂದಾಗ, ಅಲ್ಲಿನ ಎಲ್ಲಾ ಜಮೀನುಗಳ ದರಗಳು ದ್ವಿಗುಣಗೊಂಡವು. ಸರಕಾರವು ಈ ಭೂಮಿಯನ್ನು ಮಾರುಕಟ್ಟೆ ಬೆಲೆಗೆ ಖರೀದಿಸಿದ್ದರೆ, ಸರಕಾರವು 34 ಕೋಟಿ ರೂಪಾಯಿ ನೀಡಬೇಕಾಗುತ್ತಿತ್ತು. ಆದರೆ ರಾಮ ಜನ್ಮಭೂಮಿ ಟ್ರಸ್ಟ್‌ನ ಕೋರಿಕೆಯ ಮೇರೆಗೆ ಈ ಮೊತ್ತವನ್ನು 18 ಕೋಟಿ 50 ಲಕ್ಷ ರೂಪಾಯಿಗೆ ಇಳಿಸಲಾಯಿತು. ಇದರಿಂದ ಭೂಸ್ವಾಧೀನದಲ್ಲಿ ಯಾವುದೇ ಹಗರಣ ನಡೆದಿಲ್ಲ ಎಂದು ‘ಟೈಮ್ಸ್’ ಸಮೂಹದ ಹಿರಿಯ ಪತ್ರಕರ್ತ ಡಾ. ವಿಶ್ವಂಭರನಾಥ ಅರೋರಾ ಹೇಳಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಶ್ರೀರಾಮ ಮಂದಿರದ ಅಪಪ್ರಚಾರದ ಸಂಚು’ ಈ ವಿಷಯದ ಆನ್‌ಲೈನ್ ವಿಶೇಷ ಚರ್ಚಾಕೂಟದಲ್ಲಿ ಅವರು ಮಾತನಾಡುತ್ತಿದ್ದರು. ಸಮಿತಿಯ ಜಾಲತಾಣ Hindujagruti.org, ಯೂಟ್ಯೂಬ್ ಮತ್ತು ಟ್ವಿಟರ್‌ನಲ್ಲಿ ಈ ಕಾರ್ಯಕ್ರಮವನ್ನು ೩೩೦೦ ಜನರು ಪ್ರತ್ಯಕ್ಷವಾಗಿ ನೋಡಿದ್ದಾರೆ.
ಈ ಸಮಯದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರರಾದ ಶ್ರೀ. ವಿನೋದ ಬನ್ಸಾಲ್ ಅವರು ಶ್ರೀ. ಅರೋರಾ ಮಂಡಿಸಿದ ಸಂಗತಿಗಳು ಸ್ಥಳೀಯ ಜನರಿಗೆ ಸಂಪೂರ್ಣವಾಗಿ ತಿಳಿದಿದ್ದರಿಂದ ಮೂರು ದಿನಗಳಲ್ಲಿ ಭೂ ಖರೀದಿ ಹಗರಣದ ಆರೋಪವು ವಿಫಲವಾಯಿತು. ಆರೋಪಗಳು ನಿಜವಾಗಿದ್ದರೆ, ಆರೋಪಿಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಏಕೆ ಹೋಗಲಿಲ್ಲ ? ಈ ಪ್ರಕರಣದಲ್ಲಿ ಅವರು ಏಕೆ ಪ್ರಕರಣ ದಾಖಲಿಸಲಿಲ್ಲ ? ಮೂಲತಃ, ರಾಮನನ್ನು ಕಾಲ್ಪನಿಕವೆಂದು ಪರಿಗಣಿಸುವ ಜನರೇ ವಿಕೃತ ಮನಸ್ಥಿತಿಯೊಂದಿಗೆ ರಾಮ ದೇವಾಲಯದ ನಿರ್ಮಾಣವನ್ನು ವಿರೋಧಿಸುತ್ತಿದ್ದಾರೆ; ಆದರೆ ರಾಷ್ಟ್ರವಿರೋಧಿ ‘ಟೂಲ್-ಕಿಟ್’ ಈಗ ಬಹಿರಂಗವಾಗುತ್ತಿದೆ. ಶ್ರೀ ರಾಮಮಂದಿರಕ್ಕಾಗಿ ಭಾರತದ 60 ಕೋಟಿ ಜನರು ೩೫೦೦ ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆಯೋ, ಅದು ಶ್ರೀ ರಾಮನ ಅನುಗ್ರಹದಿಂದ ನಿರ್ಮಾಣವಾಗಲಿದೆ; ಎಂದು ಹೇಳಿದರು.
ಈ ಸಂಚಿನ ಹಿಂದಿನ ಕಾರಣವನ್ನು ವಿವರಿಸುತ್ತಾ, ‘ಸಾಂಸ್ಕೃತಿಕ ಗೌರವ ಸಂಸ್ಥೆಯ’ ಕೇಂದ್ರ ಕಚೇರಿಯ ಮುಖ್ಯಸ್ಥರಾದ ಶ್ರೀ. ಸಂಜೀವ ಪುಂಡಿರ ಇವರು, ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇಂತಹ ಸಮಯದಲ್ಲಿ, ಉತ್ತರಪ್ರದೇಶದಲ್ಲಿ ಅಸ್ತಿತ್ವದಲ್ಲಿಲ್ಲದ ‘ಆಮ್ ಆದ್ಮಿ ಪಕ್ಷ’ದ ಸಂಸದರು ಈ ಆರೋಪಗಳನ್ನು ಮಾಡಿದ್ದಾರೆ. ಗೌರವಾನ್ವಿತ ಚಂಪತ್ ರಾಯ್ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವವರನ್ನು ಎಂದಿಗೂ ಕ್ಷಮಿಸುವುದಿಲ್ಲ. ಅವರ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಬೇಕು ಎಂದು ಹೇಳಿದರು.
ಹಿಂದೂ ಜನಜಾಗೃತಿ ಸಮಿತಿಯ ದೆಹಲಿ ಸಮನ್ವಯಕ ಶ್ರೀ. ಕಾರ್ತಿಕ್ ಸಾಳುಂಕೆಯವರು, ಈ ಹಗರಣವು ಒಂದು ನೆಪವಾಗಿದೆ, ದೇವಾಲಯದ ಕೆಲಸವನ್ನು ನಿಲ್ಲಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ದೇವಾಲಯದ ಕೆಲಸಕ್ಕೆ ಅಡ್ಡಿಯುಂಟುಮಾಡುವ, ಅದನ್ನು ತಡೆಹಿಡಿಯುವ ಹಾಗೂ ಜನರನ್ನು ದಾರಿ ತಪ್ಪಿಸುವವರ ಒಂದು ಗುಂಪೇ ಇದರಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಮ ಮಂದಿರವನ್ನು ತಮ್ಮ ಜೀವನದುದ್ದಕ್ಕೂ ವಿರೋಧಿಸಿ ಅಲ್ಪಸಂಖ್ಯಾತರನ್ನು ಓಲೈಸಿದ್ದಾರೆ, ಇಂತಹ ಜನರಿಗೆ ರಾಮಮಂದಿರದ ಬಗ್ಗೆ ಆರೋಪ ಮಾಡಲು ಯಾವ ಅಧಿಕಾರ ಇದೆ ? ಎಂದು ಪ್ರಶ್ನಿಸಿದರು.
ಅಯೋಧ್ಯೆಯ ತಪಸ್ವಿ ಛಾವಣಿಯ ಪರಮಹಂಸದಾಸ ಮಹಾರಾಜ ಇವರಿಗೆ 100 ಕೋಟಿ ರೂಪಾಯಿಗಳ ಆಮಿಷ ಒಡ್ಡಿದ್ದರೆಂದು ಮಹಾರಾಜರು ಹೇಳಿರುವುದರ ಬಗ್ಗೆಯೂ ಕೂಲಂಕಷವಾಗಿ ತನಿಖೆ ಮಾಡಬೇಕು ಎಂದೂ ಸಾಳುಂಕೆಯವರು ಹೇಳಿದರು.