ಹಿಂದೂ ದೇವಾಲಯಗಳ ಪರಂಪರೆಯಲ್ಲಿ ಹಸ್ತಕ್ಷೇಪ ಮಾಡಲು ತಮಿಳುನಾಡಿನ ಸ್ಟಾಲಿನ್ ಸರಕಾರಕ್ಕೆ ಯಾವುದೇ ಅಧಿಕಾರವಿಲ್ಲ ! – ನ್ಯಾಯವಾದಿ ಸೀತಾರಾಮ ಕಲಿಂಗಾ

‘ದೇವಾಲಯದ ಪರಂಪರೆಯಲ್ಲಿ ತಮಿಳುನಾಡು ಸರಕಾರದ ಹಸ್ತಕ್ಷೇಪ ಏಕೆ ? ವಿಷಯದ ಕುರಿತು ವಿಶೇಷ ‘ಆನ್‌ಲೈನ್’ ಸಂವಾದ

ಭಾರತದ ಇತಿಹಾಸದಲ್ಲಿ, ರಾಜರು ಮತ್ತು ಮಹಾರಾಜರು ದೇವಾಲಯಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ನಡೆಸುತ್ತಿರಲಿಲ್ಲ, ಆದರೆ ದೇವಾಲಯಗಳಿಗೆ ಭೂಮಿ ಮತ್ತು ಹಣವನ್ನು ದಾನ ಮಾಡುತ್ತಿದ್ದರು. ಆ ಸಮಯದಲ್ಲಿ ದೇವಾಲಯಗಳ ನಿರ್ವಹಣೆಯನ್ನು ಭಕ್ತರು ನೋಡಿಕೊಳ್ಳುತ್ತಿದ್ದರು; ಆದರೆ, ಭಾರತದ ಸ್ವಾತಂತ್ರ್ಯದ ನಂತರ, ದೇವಾಲಯಗಳ ಸಂಪತ್ತನ್ನು ನೋಡಿದ ‘ಜಾತ್ಯತೀತ’ ಸರಕಾರಗಳು ದೇವಾಲಯಗಳನ್ನು ವಶಕ್ಕೆ ಪಡೆಯಲು ಹುನ್ನಾರ ನಡೆಸಿವೆ. ವಾಸ್ತವಿಕವಾಗಿ, ಹಿಂದೂ ದೇವಾಲಯಗಳನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಅದರ ಪರಂಪರೆಗಳನ್ನು ಬದಲಾಯಿಸಲು ಅವರಿಗೆ ಯಾವುದೇ ಹಕ್ಕಿಲ್ಲ. ದೇವಾಲಯಗಳಲ್ಲಿ ಪುರೋಹಿತರ ನೇಮಕವನ್ನು ಧರ್ಮಶಾಸ್ತ್ರದ ಪ್ರಕಾರ ಮಾಡಲಾಗುತ್ತದೆ. ಅದನ್ನು ಬದಲಾಯಿಸುವ ಹಕ್ಕು ಸರಕಾರಕ್ಕೆ ಇಲ್ಲ. ತಮಿಳುನಾಡಿನ ದೇವಾಲಯಗಳಿಗೆ ಸಂಬಂಧಿಸಿದಂತೆ 1972 ರಿಂದ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳಿಂದ ಜಾರಿಯಾದ ಅನೇಕ ತೀರ್ಪುಗಳು ಹಿಂದೂಗಳ ಪರವಾಗಿವೆ. ಆದ್ದರಿಂದ ತಮಿಳುನಾಡಿನಲ್ಲಿ ಬ್ರಾಹ್ಮಣೇತರ ಪುರೋಹಿತರನ್ನು ನೇಮಿಸಲು ಸ್ಟಾಲಿನ್ ಸರಕಾರ ನಿರ್ಧರಿಸಿದರೆ, ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯವಾದಿ ಸೀತಾರಾi ಕಲಿಂಗಾ ಹೇಳಿದರು. ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ದೇವಾಲಯದ ಪರಂಪರೆಯಲ್ಲಿ ತಮಿಳುನಾಡು ಸರಕಾರದ ಹಸ್ತಕ್ಷೇಪ ಏಕೆ ?’ ಎಂಬ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ಸಮಿತಿಯ ಜಾಲತಾಣ Hindujagruti.org, ಯೂಟ್ಯೂಬ್ ಮತ್ತು ಟ್ವಿಟರ್‌ನಲ್ಲಿ 2663 ಜನರು ಪ್ರತ್ಯಕ್ಷವಾಗಿ ವೀಕ್ಷಿಸಿದ್ದಾರೆ.

ಸ್ಥಳೀಯ ‘ಹಿಂದೂ ಮಕ್ಕಲ ಕಚ್ಛಿ’ ಸಂಘಟನೆಯ ಶ್ರೀ. ಅರ್ಜುನ ಸಂಪತ್ ಅವರು ಮಾತನಾಡುತ್ತಾ, ತಮಿಳುನಾಡಿನಲ್ಲಿ ಚರ್ಚ್ ಅನ್ನು ಕ್ರೈಸ್ತರು ನಡೆಸುತ್ತಿದ್ದಾರೆ. ಮುಸ್ಲಿಮರ ಮದರಸಾ ಮತ್ತು ಮಸೀದಿಗಳಿಗೆ ವಕ್ಫ್ ಬೋರ್ಡ್ ಇದೆ. ಅದರಲ್ಲಿ ತಮಿಳುನಾಡಿನ ‘ಜಾತ್ಯತೀತ’ ಸರಕಾರ ಹಸ್ತಕ್ಷೇಪ ಮಾಡುವುದಿಲ್ಲ; ಆದರೆ ಈ ಜಾತ್ಯತೀತ ಸರಕಾರ ಹಿಂದೂ ದೇವಾಲಯಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ. ಅವರು ದೇವಾಲಯಗಳಲ್ಲಿ ಭಾರಿ ಭ್ರಷ್ಟಾಚಾರ ಮಾಡಿದ್ದಾರೆ, ದೇವಸ್ಥಾನಗಳ 47,000ಎಕರೆ ಭೂಮಿ ಕಾಣೆಯಾಗಿದೆ. ಇಲ್ಲಿ ೪೦ ಸಾವಿರಕ್ಕೂ ಹೆಚ್ಚು ದೇವಾಲಯಗಳು ಸರಕಾರದ ನಿಯಂತ್ರಣದಲ್ಲಿವೆ. ದೇವರು-ಧರ್ಮವನ್ನು ನಂಬದ ಈ ಸರಕಾರವು ಹಿಂದೂ ವಿರೋಧಿಯಾಗಿದ್ದು ಬ್ರಾಹ್ಮಣೇತರ ಪುರೋಹಿತರನ್ನು ನೇಮಿಸುವುದು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ಸ್ಟಾಲಿನ್ ಸರಕಾರ ದೇವಾಲಯದ ಪರಂಪರೆಯಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ದೇವಾಲಯದ ಸಂಸ್ಕೃತಿಯನ್ನು ನಾಶಪಡಿಸುತ್ತಿದೆ. ಇದು ಹಿಂದೂ ದೇವಾಲಯಗಳ ಮೇಲಿನ ದಾಳಿಯೇ ಆಗಿದೆ. ಅದನ್ನು ತಮಿಳುನಾಡಿನ ಜನರು ತೀವ್ರವಾಗಿ ವಿರೋಧಿಸಲಿದ್ದಾರೆ ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರು ಮಾತನಾಡುತ್ತಾ, ಧಾರ್ಮಿಕ ಪರಂಪರೆಗೆ ಸಂಬಂಧಿಸಿದ ನಿರ್ಧಾರಗಳನ್ನು ಧರ್ಮಶಾಸ್ತ್ರದ ಅಧ್ಯಯನಕಾರರು, ತಜ್ಞರು, ಸಂತರು – ಮಹಂತರು ತೆಗೆದುಕೊಳ್ಳಬೇಕು ಆದರೆ ಇದರಲ್ಲಿ ಜಾತ್ಯತೀತ ಸರಕಾರದ ಹಸ್ತಕ್ಷೇಪ ತಪ್ಪಾಗಿದೆ. 2014 ರಲ್ಲಿ ಸರ್ವೋಚ್ಚ ನ್ಯಾಯಾಲಯವು ‘ದೇವಾಲಯಗಳನ್ನು ನಡೆಸುವುದು ಜಾತ್ಯತೀತ ಸರಕಾರದ ಕೆಲಸವಲ್ಲ, ದೇವಾಲಯಗಳನ್ನು ಭಕ್ತರಿಗೆ ಹಸ್ತಾಂತರಿಸಬೇಕು’ ಎಂದು ತೀರ್ಪು ನೀಡಿತ್ತು. ಅದರಂತೆ ದೇಶದಾದ್ಯಂತ ಸರಕಾರದ ಅಧೀನವಾಗಿರುವ 4 ಲಕ್ಷಕ್ಕೂ ಹೆಚ್ಚು ದೇವಾಲಯಗಳನ್ನು ಮುಕ್ತಗೊಳಿಸಿ ಈ ದೇವಾಲಯಗಳು ‘ಧರ್ಮಶಿಕ್ಷಣ’ದ ಕೇಂದ್ರಗಳಾಗಿ ಹೊರಹೊಮ್ಮಲು ವಿಶ್ವಸ್ಥರು, ಪುರೋಹಿತರು, ಹಿಂದೂ ಸಂಘಟನೆಗಳು ಮತ್ತು ನ್ಯಾಯವಾದಿಗಳು ಸೇರಿದಂತೆ ಇಡೀ ಹಿಂದೂ ಸಮುದಾಯವು ಒಗ್ಗೂಡಬೇಕು. ಇದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿ ಪ್ರಾರಂಭಿಸಿದ ‘ರಾಷ್ಟ್ರೀಯ ಮಂದಿರ ರಕ್ಷಾ ಅಭಿಯಾನ’ದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಕರೆ ನೀಡಿದರು.