ಇಂದು ಕೊರೋನಾ ಮಹಾಮಾರಿಯಿಂದಾಗಿ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಮಾತ್ರವಲ್ಲ, ಲಕ್ಷಾಂತರ ಜನರು ಈ ಮಹಾಮಾರಿಯಿಂದ ಬಳಲುತ್ತಿದ್ದಾರೆ. ಮುಂದಿನ ಆಪತ್ಕಾಲದ ಭೀಕರತೆಯ ಬಗ್ಗೆ ಯುಗದೃಷ್ಟಾರರು, ಭವಿಷ್ಯಕಾರರು, ಅನೇಕ ಸಂತರು ಭವಿಷ್ಯ ನುಡಿದಿದ್ದಾರೆ. ಮುಂಬರುವ ಭೀಕರ ಆಪತ್ಕಾಲವನ್ನು ಎದುರಿಸಲು ಭಗವಂತನ ಭಕ್ತರಾಗುವುದೊಂದೇ ಪರ್ಯಾಯವಾಗಿದೆ. ನ ಮೇ ಭಕ್ತಃ ಪ್ರಣಶ್ಯತೆ ಎಂಬ ಭಗವಂತನ ವಚನದಂತೆ ಭಕ್ತರ ರಕ್ಷಣೆ ಭಗವಂತ ಮಾಡುತ್ತಾನೆ. ಅದಕ್ಕಾಗಿ ನಾವು ಸಾಧನೆ ಮಾಡಬೇಕು. ಭಗವಂತನ ಕೃಪೆಯಿಂದ ೨೦೨೩ ರಲ್ಲಿ ಹಿಂದೂ ರಾಷ್ಟ್ರವು ಬರಲಿದೆ. ಈ ಧರ್ಮಕಾರ್ಯದಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ. ಇದರಿಂದ ನಮ್ಮ ಉದ್ಧಾರವಾಗಲಿದೆ, ಎಂದು ಸನಾತನ ಸಂಸ್ಥೆಯ ಧರ್ಮ ಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಮಾರ್ಗದರ್ಶನ ಮಾಡಿದರು. ಸನಾತನ ಸಂಸ್ಥೆಯ ವತಿಯಿಂದ ಪೂ. ರಮಾನಂದ ಗೌಡ ಇವರು ಇತ್ತೀಚೆಗೆ ‘ಕೊರೊನಾ ಮಹಾಮಾರಿಯ ವಿರುದ್ಧ ಮಾನಸಿಕ ಹಾಗೂ ಆಧ್ಯಾತ್ಮಿಕ ಸ್ತರದಲ್ಲಿ ಹೇಗೆ ಹೋರಾಡಬೇಕು ? ಈ ವಿಷಯ ದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾರ್ಗದರ್ಶನ ಮಾಡುತ್ತಿದ್ದರು. ಇದರ ನೇರ ಪ್ರಸಾರದ ಸಮಯದಲ್ಲಿ ೪ ಸಾವಿರದ ೩೦೦ ಜನರು ಹಾಗೂ ಮಾರ್ಗದರ್ಶನದ ನಂತರ ದಿನವಿಡೀ ೨೦ ಸಾವಿರ ಜಿಜ್ಞಾಸುಗಳು ಕಾರ್ಯಕ್ರಮದ ವಿಡಿಯೋ ನೋಡಿದರು.
ಪೂ. ರಮಾನಂದ ಗೌಡ ಇವರ ಸತ್ಸಂಗದಿಂದ ಎಲ್ಲ ಜಿಜ್ಞಾಸುಗಳಿಗೆ ಲಾಭವಾಗಬೇಕೆಂದು ಮಾಡಿದ ಪ್ರಯತ್ನಗಳುಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವಿವಿಧ ಉಪಕ್ರಮಗಳ ಮಾಧ್ಯಮದಿಂದ ಜೋಡಿಸಲ್ಪಟ್ಟ ಹಿಂದುತ್ವ ನಿಷ್ಠರು, ‘ಸನಾತನ ಪ್ರಭಾತದ ವಾಚಕರು, ಜಾಹೀರಾತುದಾರರು, ಅರ್ಪಣೆದಾರರು, ಜಾಲತಾಣಕ್ಕೆ ಭೇಟಿ ನೀಡುವವರು, ಹಿಂದುತ್ವ ನಿಷ್ಠ ನ್ಯಾಯವಾದಿಗಳು, ಉದ್ಯಮಿಗಳು, ಸೊಶಿಯಲ್ ಮೀಡಿಯಾ ಮಾಧ್ಯಮದಿಂದ ಸಿಕ್ಕಿದ ಜಿಜ್ಞಾಸುಗಳು, ಹಿತಚಿಂತಕರು ಮತ್ತು ಧರ್ಮಶಿಕ್ಷಣವರ್ಗಕ್ಕೆ ಬರುವವರ ಕುಟುಂಬದವರು ಹಾಗೂ ಸಾಧಕರ ಕುಟುಂಬದವರು ಹಾಗೂ ಇತ್ತೀಚೆಗೆ ಜೋಡಣೆಯಾದ ಎಲ್ಲಾ ಜಿಜ್ಞಾಸುಗಳನ್ನು ಸೇರಿಸಿ ಸುಮಾರು ೨೧ ಸಾವಿರಕ್ಕೂ ಅಧಿಕ ಮಂದಿಗೆ ಈ ಕಾರ್ಯಕ್ರಮದ ಆಮಂತ್ರಣ ತಲುಪಿಸಲಾಗಿತ್ತು. – ಸರ್ವಶ್ರೀ ಗುರುಪ್ರಸಾದ ಗೌಡ ಮತ್ತು ಮೋಹನ ಗೌಡ, ಹಿಂದೂ ಜನಜಾಗೃತಿ ಸಮಿತಿ |
ಪೂ. ರಮಾನಂದ ಗೌಡ ಇವರ ಮಾರ್ಗದರ್ಶನದಲ್ಲಿನ ಕೆಲವು ಅಂಶಗಳು :* ಮನೋಧೈರ್ಯ ಕಾಪಾಡಲು ಮನಸ್ಸಿಗೆ ಸ್ವಯಂಸೂಚನೆ ಹೇಗೆ ಕೊಡಬೇಕು, ಎಂಬುದರ ಮಾಹಿತಿ ನೀಡಲಾಯಿತು. * ಕೊರೊನಾ ಮಹಾಮಾರಿಯ ಸಮಯದಲ್ಲಿ ಆಧ್ಯಾತ್ಮಿಕ ಬಲವನ್ನು ಹೆಚ್ಚಿಸಲು ‘ಶ್ರೀ ದುರ್ಗಾದೇವಿ (೩ ಸಲ), ಶ್ರೀ ಗುರುದೇವ ದತ್ತ (೧ ಸಲ), ಶ್ರೀ ದುರ್ಗಾದೇವಿ (೩ ಸಲ), ಓಂ ನಮಃ ಶಿವಾಯ (೧ ಸಲ) ಈ ನಾಮಜಪ ಮಾಡುವುದರ ಮಹತ್ವವನ್ನು ಹೇಳಿದರು. * ಪೂರ್ವಜರ ತೊಂದರೆ ದೂರವಾಗಲು ಮಾಡಬೇಕಾದ ‘ಶ್ರೀ ಗುರುದೇವ ದತ್ತ ಈ ನಾಮಜಪ ಮಾಡುವುದರ ಮಹತ್ವವನ್ನು ಹೇಳಿದರು. |
ಗಮನಾರ್ಹ ಅಂಶಗಳು
೧. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜಿಜ್ಞಾಸೂಗಳ ಪೈಕಿ ೫೪೭ ಜನರು ಸಾಧನೆ ಮಾಡಲು ಇಚ್ಛಿಸಿದರು.
೨. ಅನೇಕ ಈ ಕಾರ್ಯಕ್ರವನ್ನು ಕುಟುಂಬ ಸಮೇತರಾಗಿ ನೋಡಿರುವುದಾಗಿ ತಿಳಿಸಿದರು.
೩. ‘ನಮಗೆ ಈ ಮೊದಲು ಕೊರೊನಾ ಕಾಲದಲ್ಲಿ ಮಾಡಬೇಕಾದ ನಾಮಜಪವು ತಿಳಿದಿತ್ತು. ಅದನ್ನು ಮಾಡಿದ್ದರಿಂದ ನಮ್ಮ ರಕ್ಷಣೆಯಾಗುತ್ತಿದೆ, ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದರು.
೪. ಮಾರ್ಗದರ್ಶನ ಮುಗಿದು ೨ ಗಂಟೆಯಲ್ಲಿ ೧೮ ಜನ ದೂರವಾಣಿ ಕರೆ ಮಾಡಿ ನಾವು ಮುಂದೆ ಹೇಗೆ ಮಾಡಬೇಕು ಎಂಬುವುದನ್ನು ಕೇಳಿದರು. ಇದರಲ್ಲಿ ಉಚ್ಚ ಶಿಕ್ಷಿತ ಜಿಜ್ಞಾಸುಗಳಿದ್ದರು.
೫. ‘ನಮಗೆ ತುಂಬಾ ಭಯ ಇತ್ತು ಮತ್ತು ಇದರಿಂದ ಹೇಗೆ ಹೊರಗೆ ಬರುವುದು ಎಂಬುದು ಗೊತ್ತಾಗುತ್ತಿರಲಿಲ್ಲ. ನಮಗೆ ಮಾರ್ಗದರ್ಶನ ಕೇಳಿ ತುಂಬಾ ಆಧಾರ ಸಿಕ್ಕಿತು. ಇಂದಿನ ಮಾರ್ಗದರ್ಶನದಿಂದ ನಮ್ಮ ಭಯ ದೂರವಾಯಿತು, ಎಂದು ಹೆಚ್ಚುನ ಜಿಜ್ಞಾಸುಗಳು ಹೇಳಿದರು.
೬. ಹಿಂದೂ ಜನಜಾಗೃತಿ ಸಮಿತಿಯ ‘ಯುಟ್ಯುಬ್ ಚಾನೆಲ್ಗೆ ೩೭೯ ಧರ್ಮಾಭಿಮಾನಿಗಳು ಚಂದಾದಾರರಾದರು.
೭. ಸಾಪ್ತಾಹಿಕ ಕನ್ನಡ ಸನಾತನ ಪ್ರಭಾತಕ್ಕೆ ಕೆಲವರು ‘ಆನ್‌ಲೈನ್ ಮೂಲಕ ಚಂದಾ ಮಾಡಿದ್ದು ಕೆಲವರು ಪತ್ರಿಕೆಗೆ ಚಂದಾ ಮಾಡಲು ಇಚ್ಛೆ ವ್ಯಕ್ತ ಪಡಿಸಿದ್ದಾರೆ.
ಪೂ. ರಮಾನಂದ ಗೌಡ ಇವರ ಮಾರ್ಗದರ್ಶನ ಕೇಳಿ ಜಿಜ್ಞಾಸುಗಳು ತಿಳಿಸಿದ ವೈಶಿಷ್ಟ್ಯಪೂರ್ಣ ಅಭಿಪ್ರಾಯಗಳು
೧. ಸಂತರ ಮಾರ್ಗದರ್ಶನದಿಂದ ನಾನು ಪ್ರಭಾವಿತನಾದೆನು. ಈಗ ನಾನು ಕೊರೊನಾ ಕಾಲದಲ್ಲಿ ಮಾಡಬೇಕಾದ ನಾಮಜಪವನ್ನು ಮಾಡುತ್ತಿದ್ದೇನೆ. ನಾನು ಸ್ವಸಂರಕ್ಷಣಾ ಮತ್ತು ಪ್ರಥಮೋಪಚಾರ ತರಬೇತಿ ಪಡೆದು ಸಮಷ್ಟಿ ಸೇವೆಯಲ್ಲಿ ತೊಡಗಿಸಿಕೊಳ್ಳುವ ಇಚ್ಚೆಯಿದೆ. ಸನಾತನ ಸಂಸ್ಥೆಯಂತಹ ಶ್ರೇಷ್ಠ ಸಂಸ್ಥೆ ಸಿಕ್ಕಿದ್ದು ನನಗೆ ತುಂಬಾ ಸಂತೋಷವಾಗಿದೆ. – ಶ್ರೀಶೈಲ ಸಂಗಾಪೂರ
೨. ಸಂತರ ಸತ್ಸಂಗ ತುಂಬಾ ಒಳ್ಳೆಯದಿತ್ತು. ಕೋರೊನಾ ಸಂಬಂಧಿಸಿದ ಭಯವಾದಾಗ ಯಾವ ರೀತಿ ಸ್ಥಿರವಾಗಿರಬೇಕು ಎಂದು ತಿಳಿಯಿತು. ನಾನು ಕೆಲವೊಮ್ಮೆ ಮನೆಯ ವಿಷಯದಲ್ಲಿ ಮತ್ತು ಕಛೇರಿ ವಿಷಯದಲ್ಲಿ ಸಿಲುಕಿಕೊಂಡಿರುತ್ತೇನೆ. ಅದರಿಂದ ಹೊರಬರಲಾಗದೇ ನನಗೆ ಒತ್ತಡ ಬರುತ್ತಿತ್ತು. ಎಲ್ಲ ಪರಿಸ್ಥಿತಿಗಳಲ್ಲಿ ಸ್ಥಿರವಾಗಿರಲಲು ಹೇಗೆ ಪ್ರಯತ್ನಿಸಬೇಕೆಂದು ಇಂದು ಕಲಿಯಲು ಸಿಕ್ಕಿತು. ತುಂಬಾ ಕೃತಜ್ಞತೆ ಅನ್ನಿಸುತ್ತಿದೆ. – ಡಾ. ಆನಂದ, ಉಪನ್ಯಾಸಕರು, ಕೃಷಿ ವಿಶ್ವವಿದ್ಯಾಲಯ, ರಾಯಚೂರು.
೩. ಸಂತರ ಮಾರ್ಗದರ್ಶನ ಕೇಳಿದ ನಂತರ ಧರ್ಮ ಮತ್ತು ರಾಷ್ಟ್ರಕ್ಕಾಗಿ ಸೇವೆ ಮಾಡಬೇಕೆಂಬ ಆಸಕ್ತಿ ಉಂಟಾಗಿದೆ. ಇಂದು ಸನಾತನ ಸಂಸ್ಥೆ ಹೇಳುತ್ತಿರುವುದು ಸತ್ಯವಾಗುತ್ತಿದೆ. ನಾನು ನಿಸ್ವಾರ್ಥದಿಂದ ಸೇವೆ ಮಾಡಲು ಪ್ರಯತ್ನ ಮಾಡುತ್ತೇನೆ. – ಶ್ರೀ. ಮಂಜುನಾಥ ಜುಮ್ಮಣ್ಣನವರು, ಕೊಪ್ಪಳ
೪. ಸಂತರ ಮಾರ್ಗದರ್ಶನ ತುಂಬಾ ಒಳ್ಳೆಯದಿತ್ತು. ನಾನು ಇಲ್ಲಿಯವರೆಗೆ ಅನೇಕ ಸಂತರನ್ನು ಭೇಟಿಯಾಗಿದ್ದೇನೆ. ಆದರೆ ಸನಾತನದ ಸಂತರ ವೈಶಿಷ್ಟ್ಯ ಬೇರೆಯೇ ಅನಿಸಿತು. ಅವರ ಮಾತು ಕೇಳುತ್ತಲೇ ತುಂಬಾ ಚೈತನ್ಯದ ಅರಿವಾಗುತ್ತಿತ್ತು. ಮತ್ತು ಅದನ್ನು ಪುನಃ ಪುನಃ ಕೇಳುತ್ತಲೇ ಇರಬೇಕು ಎಂದೆನಿಸುತ್ತಿತ್ತು. ‘ಸನಾತನ ಚೈತನ್ಯವಾಣಿ ಆಪ್ ನಲ್ಲಿರುವ ಎಲ್ಲಾ ಮಂತ್ರಗಳು ತುಂಬಾ ಶಕ್ತಿ ಹೊಂದಿವೆ. ನಾನು ಅದನ್ನು ಕೇಳುತ್ತಿರುತ್ತೇನೆ. ನಮ್ಮ ಮನೆಯಲ್ಲಿ ನಾನು ಮತ್ತು ಕುಟುಂಬದವರೆಲ್ಲರೂ ಬೆಳಿಗ್ಗೆ ಕೊರೊನಾ ಕಾಲದಲ್ಲಿ ಮಾಡುವ ನಾಮಜಪವನ್ನು ಮಾಡುತ್ತಿದ್ದೇವೆ. ಇಂತಹ ಸಂಸ್ಥೆಗೆ ನಮ್ಮನ್ನು ಜೋಡಿಸಿದ್ದಕ್ಕೆ ತುಂಬಾ ಧನ್ಯವಾದಗಳು. – ಶ್ರೀ. ರವೀಂದ್ರ ಮಹಾಬಲಶೆಟ್ಟಿ, ಬೆಳಗಾವಿ
೫. ಸಂತರ ಮಾರ್ಗದರ್ಶನದಿಂದ ಒಳ್ಳೆಯದೆನಿಸಿತು. ಕೊರೊನಾದಿಂದ ತುಂಬಾ ಭಯವಿತ್ತು. ಸಂತರ ಮಾರ್ಗದರ್ಶನದಿಂದ ನಮ್ಮಲ್ಲಿರುವ ಭಯ ದೂರವಾಯಿತು. ಇಂದಿನ ಮಾರ್ಗದರ್ಶನ ದಿಂದ ನಾನು ಆಧ್ಯಾತ್ಮಿಕ ಸಾಧನೆ ಮಾಡಲೇಬೇಕೆಂದೆನಿಸಿತು. – ಸೌ. ಮಂಜುಳಾ, ಶಿಕ್ಷಕಿ, ರಾಣೆಬೆನ್ನೂರು
೬. ಇಂದಿನ ಸತ್ಸಂಗದಿಂದ ನನಗೆ ನಮ್ಮ ಮುಂದಿನ ಜೀವನದಲ್ಲಿ ಸಾಧನೆ ಮಾಡುವುದರ ಅವಶ್ಯಕತೆ ಎಷ್ಟಿದೆ ಎಂದು ತಿಳಿಯಿತು. ಅದರ ಜೊತೆಗೆ ಕಷ್ಟಗಳು ಬಂದಾಗ, ಅಡಚಣೆಗಳು ಬಂದಾಗ ಆಧ್ಯಾತ್ಮಿಕ ಸಾಧನೆಯ ಮೂಲಕ ಹೇಗೆ ಪರಿಹಾರ ಮಾಡಬಹುದು ಎಂಬುವುದನ್ನು ತಿಳಿಯಿತು. ಇಂದು ಕೋರೋನಾ ಮಹಾಮಾರಿ ರೋಗದ ಬಗ್ಗೆ ನನ್ನಲ್ಲಿದ್ದ ಭಯವನ್ನು ಹೋಗಲಾಡಿಸಿದಿರಿ. ನನಗೆ ತುಂಬಾ ಆನಂದವಾಯಿತು. ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. – ಶ್ರೀ. ರಂಜಿತ ಕುಮಾರ್, ದಕ್ಷಿಣ ಕನ್ನಡ
೭. ಸತ್ಸಂಗವು ಕೇಳಿ ತುಂಬಾ ಖುಷಿಯಾಯಿತು. ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕಿತು. ಕೊರೊನಾ ರೋಗದ ಭಯವನ್ನು ನಾಮಜಪದಿಂದ ದೂರ ಮಾಡಬಹುದೆಂದು ತಿಳಿಯಿತು. ಮಾರ್ಗದರ್ಶನದಿಂದ ಮನಸ್ಸು ಹಗುರವಾಯಿತು.- ಶ್ರೀ. ವಿಜಿತ್ ಪೂಜಾರಿ, ದಕ್ಷಿಣ ಕನ್ನಡ
೮. ಪ್ರಸಕ್ತ ಆಪತ್ಕಾಲದಲ್ಲಿ ಬಹಳ ಅರ್ಥಪೂರ್ಣ ಕಾರ್ಯಕ್ರಮ. ಅಂಧರಾದ ನಮ್ಮನ್ನು ಕೈ ಹಿಡಿದು ಆತ್ಮೊನ್ನತಿಯತ್ತ ಕೊಂಡು ಹೋಗುವ ಗುರುಗಳಿಗೆ ಕೋಟಿ ಕೋಟಿ ವಂದನೆಗಳು. – ಶ್ರೀ. ಮಧುಸೂದನ್ ಆಯರ್, ದಕ್ಷಿಣ ಕನ್ನಡ
೯. ಇಂದಿನ ಸತ್ಸಂಗವು ನಮ್ಮಲ್ಲಿ ಆಧ್ಯಾತ್ಮಿಕ ಬದಲಾವಣೆ ತರಲು ಪ್ರೇರಣೆಯಾಯಿತು. ಇದಕ್ಕೆ ಗುರುಗಳ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು – ಶ್ರೀ. ವೆಂಕಟೇಶ, ದಕ್ಷಿಣ ಕನ್ನಡ
೧೦. ಅಧರ್ಮದಿಂದ ಸಮಾಜಕ್ಕೆ ಹಾನಿಯಾಗುತ್ತಿದೆ. ಅಯೋಗ್ಯ ಕರ್ಮದ ಫಲವನ್ನು ಎಲ್ಲರೂ ಭೋಗಿಸಬೇಕು ಎಂದು ತಿಳಿದು ಮನಸಿಗೆ ತುಂಬಾ ತಳಮಳ ಉಂಟಾಯಿತು. ಕೊರೊನಾ ಮಹಾಮಾರಿ ಕಾಲದಲ್ಲಿ ಮಾಡಬೇಕಾದ ನಾಮಜಪವನ್ನು ಸ್ವತಃ ನಾನೂ ಮಾಡುತ್ತೇನೆ ಮತ್ತು ಇತರರಿಗೂ ಹೇಳುತ್ತೇನೆ. ಸಂತರು ಮಾರ್ಗದರ್ಶನದಲ್ಲಿ ಸತ್ಸಂಗದ ಮಹತ್ವವನ್ನು ಬಹಳ ಚೆನ್ನಾಗಿ ತಿಳಿಸಿಕೊಟ್ಟರು. ನಾನು ನಿಯಮಿತ ಸತ್ಸಂಗಕ್ಕೆ ಬರಲು ಪ್ರಯತ್ನ ಮಾಡುತ್ತೇನೆ. – ಶ್ರೀಪಾದ ರಾವ್ ದಕ್ಷಿಣ ಕನ್ನಡ
೧೧. ಪೂ. ರಮಾನಂದ ಅಣ್ಣನವರ ಪ್ರತಿಯೊಂದು ವಾಕ್ಯಗಳು ಚೈತನ್ಯದಾಯಕವಾಗಿತ್ತು, ಮನಸ್ಸಿಗೆ ತುಂಬಾ ಆನಂದ ಅನ್ನಿಸಿತು. ಪೂ. ಅಣ್ಣನವರ ಮಾರ್ಗದರ್ಶನ ಸಂಪೂರ್ಣವಾಗಿ ಕೇಳಿದ್ದರಿಂದ ಮನಸ್ಸು ಚೈತನ್ಯಮಯವಾಯಿತು. ನಮಗೆ ಮಾರ್ಗದರ್ಶನದ ಆಯೋಜನೆ ಮಾಡಿ ನಮಗೆ ಸಾಧನೆಯಲ್ಲಿ ಸಹಾಯ ಮಾಡಿದ್ದಕ್ಕಾಗಿ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಿಗೆ ಅನಂತ ಕೋಟಿ ಪ್ರಣಾಮಗಳು. – ಶಂಭುಲಿಂಗಯ್ಯ ತುಮಕೂರು
೧೨. ನನಗೆ ಪೂರ್ಣ ವೇಳೆ ಸೇವೆ ಮಾಡಬೇಕೆಂಬ ಇಚ್ಛೆ ಹೆಚ್ಚಾಗಿದೆ. ಸಮಾಜಕ್ಕೆ ಒಳ್ಳೆಯ ದೃಷ್ಟಿಕೋನ ಕೊಡುವಂತಹ ಸಂಸ್ಥೆ ಎಂದರೆ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ. – ಶ್ರೀ. ಶ್ಯಾಮ್ ನಾಯಕ್, ಬೆಂಗಳೂರು
೧೩. ಪೂ. ರಮಾನಂದ ಅಣ್ಣವರ ಸತ್ಸಂಗ ಕೇಳಿ ತುಂಬಾ ಒಳ್ಳೆಯದೆನಿಸಿತು. ಈಗಿನ ಅಪತ್ಕಾಲದಲ್ಲಿ ನಾವು ಏನು ಪ್ರಯತ್ನ ಮಾಡಬೇಕು ಎಂದು ತಿಳಿಯಿತು. ನಾನು ೨೦೦೫ ರಿಂದ ೨೦೦೬ ರಲ್ಲಿ ಸನಾತನ ಸಂಸ್ಥೆಯ ಸಂಪರ್ಕದಲ್ಲಿದ್ದೆನು. ಅನಂತರ ಸಂಸ್ಥೆಯ ಸಂಪರ್ಕ ಇಲ್ಲವಾಯಿತು. ಈ ಸತ್ಸಂಗ ಸಿಗುತ್ತಿದ್ದರಿಂದ ತುಂಬಾ ಖುಷಿ ಆಯಿತು. ನಾನು ಮುಂದೆ ಸಮಿತಿಯ ಧರ್ಮಶಿಕ್ಷಣವರ್ಗಕ್ಕೆ ಜೋಡಣೆಯಾಗುತ್ತೇನೆ ಮತ್ತು ಸಾಧನೆ ಮಾಡಲು ಪ್ರಯತ್ನ ಮಾಡುತ್ತೇನೆ. -ಶ್ರೀ ನಾಗರಾಜ್ ನಾಯ್ಕ್ ಉತ್ತರ ಕನ್ನಡ
೧೪. ಇಂದಿನ ಸತ್ಸಂಗ ಕೇಳಿ ನನಗೆ ತುಂಬಾ ಒಳ್ಳೆಯದೆನಿಸಿತು. ಇಂತಹ ಸತ್ಸಂಗ ಇದು ಮೊದಲ ಬಾರಿ ನನಗೆ ಸಿಕ್ಕಿತು. ಸತ್ಸಂಗದಲ್ಲಿ ಹೇಳಿದ ಎಲ್ಲಾ ವಿಷಯಗಳು ತುಂಬಾ ಮಹತ್ವದ್ದಾಗಿತ್ತು. ‘ಈಗಿನ ಪರಿಸ್ಥಿತಿಯಲ್ಲಿ ನಮಗೆ ಕೇವಲ ಭಗವಂತ ಮಾತ್ರ ರಕ್ಷಣೆ ಮಾಡಲು ಸಾಧ್ಯ ಎಂದು ಹೇಳಿದ್ದು ನನಗೆ ತುಂಬಾ ಮನದಟ್ಟಾಯಿತು. ನಾನು ‘ಸೋಷಿಯಲ್ ಮೀಡಿಯಾ ಮೂಲಕ ಧರ್ಮಪ್ರಸಾರ ಸೇವೆ ಮಾಡಲು ಪ್ರಯತ್ನಿಸುತ್ತೇನೆ. ಇನ್ನು ನಾನು ಹೇಗೆ ಪ್ರಯತ್ನ ಮಾಡಬೇಕು ಎಂದು ತಿಳಿಸಿ ಹಾಗೆ ಮಾಡುತ್ತೇನೆ. – ಶ್ರೀ ಗಣೇಶ ಶೆಟ್ಟಿ, ಉತ್ತರ ಕನ್ನಡ
೧೫. ನಾನು ಚಿಕ್ಕವನಿದ್ದಾಗ ಸಂಸ್ಥೆಯ ಬಗ್ಗೆ ಕೇಳಿದ್ದೆ. ಇಂದು ತುಂಬಾ ವರ್ಷದ ನಂತರ ನನಗೆ ಈ ಸತ್ಸಂಗ ಸಿಕ್ಕಿದ್ದು ತುಂಬಾ ಒಳ್ಳೆಯದು ಅನಿಸಿತು. ನಾನು ಇನ್ನು ನಾಮಜಪ ನಿಯಮಿತವಾಗಿ ಮಾಡುವೆನು. ನೀವು ಮುಂದೆ ಸತ್ಸಂಗ ಇಟ್ಟರೆ ನಿಯಮಿತವಾಗಿ ಬರುತ್ತೇನೆ. ಈ ಸತ್ಸಂಗದಿಂದ ಅಪತ್ಕಾಲದ ತೀವ್ರತೆ ಗಮನಕ್ಕೆ ಬಂದಿತು. – ಶ್ರೀ. ಮೋಹಿತ್ ರಾಮದಾಸ, ಉತ್ತರ ಕನ್ನಡ
೧೬. ನನಗೆ ಸಂತರ ಮಾರ್ಗದರ್ಶನದಿಂದ ಅಪತ್ಕಾಲ ಎಂದರೆ ಏನು ? ಈ ಅಪತ್ಕಾಲದಲ್ಲಿ ನಮ್ಮ ರಕ್ಷಣೆಯಾಗಲು ಸಾಧನೆ ಹೇಗೆ ಮಾಡಬೇಕು ಎಂದು ತಿಳಿಯಿತು. ಈಗಿನ ಭಯದ ವಾತಾವರಣದಿಂದ ಹೊರಗೆ ಬರಲು ಆಧ್ಯಾತ್ಮಿಕವಾಗಿ ಪ್ರಯತ್ನ ಮಾಡಲೇಬೇಕು ಎನಿಸಿತು. – ಸೌ. ರೇಖಾ ಭಟ್, ಉತ್ತರ ಕನ್ನಡ
೧೭. ಪೂ. ರಮಾನಂದ ಅಣ್ಣನವರ ಮಾರ್ಗದರ್ಶನ ಕೇಳಿ ತುಂಬಾ ಸಂತೋಷವಾಯಿತು ಮತ್ತು ಇನ್ನೂ ಹೆಚ್ಚು ಸೇವೆ ಮಾಡಲು ಬಯಸುತ್ತೇನೆ. ಮಾರ್ಗದರ್ಶನದಲ್ಲಿ ಹೇಳಿದ ಎಲ್ಲ ವಿಷಯಗಳನ್ನು ಆಚರಣೆಯಲ್ಲಿ ತರಲು ಪ್ರಯತ್ನಿಸುತ್ತೇನೆ. – ಉಷಾ ಎಮ್, ಶಿವಮೊಗ್ಗ
೧೮. ಪೂ. ರಮಾನಂದ ಅಣ್ಣನವರು ನಮಗೆ ಮನಮುಟ್ಟುವಂತೆ ಮಾರ್ಗದರ್ಶನ ಮಾಡಿದರು. ನಾಮಜಪದಿಂದ ನಮ್ಮಲ್ಲಿರುವ ನಕಾರಾತ್ಮಕತೆ ನಾಶವಾಗಿ ದುಷ್ಟಶಕ್ತಿಗಳಿಂದ ನಮ್ಮ ರಕ್ಷಣೆಯಾಗಲು ಹಾಗೂ ನನ್ನಲ್ಲಿ ಆತ್ಮಶಕ್ತಿಯ ಬಲ ಹೆಚ್ಚಾಗಲು ನಾಮಜಪವನ್ನು ಹೆಚ್ಚು ಮಾಡಲು ಪ್ರಯತ್ನಿಸುತ್ತೇನೆ. ಪ್ರತೀವಾರ ಸತ್ಸಂಗದಲ್ಲಿ ಹೇಳಿಕೊಡುವ ಪ್ರತಿಯೊಂದು ವಿಷಯವನ್ನು ಕಲಿತು ಕೃತಿಯಲ್ಲಿ ತರಲು ಪ್ರಯತ್ನ ಮಾಡುತ್ತೇನೆ. – ಲಕ್ಷ್ಮಿ ರಾಧಾಕೃಷ್ಣ, ಶಿವಮೊಗ್ಗ
೧೯. ಇಂದಿನ ಈ ಕರೋನದ ಕಾಲದಲ್ಲಿ ಭಯದ ಸ್ಥಿತಿಯಲ್ಲಿ ಅನೇಕ ಕುಟುಂಬಗಳಿಗೆ ಈ ಸತ್ಸಂಗದಿಂದ ಧೈರ್ಯ ತುಂಬುವುದು ಅವಶ್ಯಕ ಇತ್ತು. ಇಂದು ಈ ಸತ್ಸಂಗವು ಅದಕ್ಕೆ ತುಂಬಾ ಸಹಾಯವಾಯಿತು. – ಶ್ರೀ. ಸುಭಾಷ್ ಚಂದ್ರ, ಧಾರವಾಡ