ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪ್ರತಿಯೊಂದು ನಡೆ, ನುಡಿ ಮತ್ತು ಕೃತಿಯಿಂದ ವ್ಯಕ್ತವಾಗುವ ಪೂ. ಶಿವಾಜಿ ವಟಕರ ಇವರ ಭಾವ (ವಯಸ್ಸು ೭೮ ವರ್ಷ) !
(ಪೂ.) ಶಿವಾಜಿ ವಟಕರ ಅವರು ಪ್ರತಿವಾರ ‘ಸಂತರ ವ್ಯಷ್ಟಿ ಸಾಧನೆಯ ವರದಿ ಸತ್ಸಂಗ’ ದಲ್ಲಿ ತಮ್ಮಿಂದಾದ ತಪ್ಪುಗಳನ್ನು ‘ಆತ್ಮನಿವೇದನೆ’ಯ ಭಾವದಿಂದ ಹೇಳುತ್ತಾರೆ. ಅವರು ದೈನಿಕ ‘ಸನಾತನ ಪ್ರಭಾತ’ದಲ್ಲಿನ ಲೇಖನ, ಸಾಧಕರಿಗಾಗಿ ಸೂಚನೆ, ಆಧ್ಯಾತ್ಮಿಕ ಗ್ರಂಥ ಇತ್ಯಾದಿಗಳಲ್ಲಿನ ವ್ಯಷ್ಟಿ ಸಾಧನೆಯ ಬಗೆಗಿನ ಅಂಶಗಳ ಅಧ್ಯಯನ ಮಾಡುತ್ತಾರೆ.