‘ಡಿಜಿಟಲ್‌ ಅರೆಸ್ಟ್‌’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !

ತನಿಖಾ ಸಂಸ್ಥೆಯು ಸರ್ವೋಚ್ಚ ನ್ಯಾಯಾಲಯದ ಒಂದು ಹಳೆಯ ತೀರ್ಪನ್ನು ಉಲ್ಲೇಖಿಸಿತು. ಸರಕಾರಿ ನ್ಯಾಯವಾದಿಗಳು ವಾದ ಮಂಡಿಸುತ್ತಾ, ‘ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಅಥವಾ ನಿಯಮಿತ ಜಾಮೀನು ಸಿಕ್ಕಾಗ, ಅವರು ತನಿಖಾ ಸಂಸ್ಥೆಯೊಂದಿಗೆ ಸಹಕರಿಸುವ ಉದ್ದೇಶ ಹೊಂದಿರುವುದಿಲ್ಲ.

ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ವೃದ್ಧನಿಗೆ ೫ ಲಕ್ಷ ರೂಪಾಯಿ ವಂಚನೆ : Gorakhpur Cyber Scam

ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಭಯೋತ್ಪಾದನಾ ವಿರೋಧಿ ದಳದ (ATS) ಅಧಿಕಾರಿಗಳೆಂದು ನಟಿಸಿ ವಂಚಕರು ವೃದ್ಧರೊಬ್ಬರಿಗೆ ೫ ಲಕ್ಷ ರೂಪಾಯಿ ವಂಚಿಸಿದ್ದಾರೆ.

‘ಸೈಲೆಂಟ್ ಕಾಲ್’ ಬಗ್ಗೆ ಜಾಗರೂಕರಾಗಿರಲು ಸೈಬರ್ ಸಂಸ್ಥೆಗಳ ಎಚ್ಚರಿಕೆ : Silent Call Scam

ಅಪರಿಚಿತ ಸಂಖ್ಯೆಗಳಿಂದ ಫೋನ್ ಬರುವುದು ಮತ್ತು ಕರೆ ಸ್ವೀಕರಿಸಿ ‘ಹಲೋ’ ಎಂದ ತಕ್ಷಣವೇ ಎದುರಿನಿಂದ ಫೋನ್ ಕಟ್ ಆಗುವುದು, ಇಂತಹ ಘಟನೆಗಳು ಅನೇಕರ ವಿಷಯದಲ್ಲಿ ನಡೆಯುತ್ತಿರುತ್ತವೆ.

‘ವಾಟ್ಸಾಪ್’ ನಲ್ಲಿ ಮದುವೆ ಆಮಂತ್ರಣ ಪತ್ರಿಕೆಯನ್ನು ಕಳುಹಿಸುವ ಮೂಲಕ ಮೊಬೈಲ್ ನಲ್ಲಿರುವ ಮಾಹಿತಿಯನ್ನು ಕದಿಯುವುದರಿಂದ ನಾಗರಿಕರು ಎಚ್ಚರದಿಂದಿರಬೇಕು!

ಒಂದು ಸಂದೇಶದಲ್ಲಿ, ನಮ್ಮ ಮನೆಯಲ್ಲಿ ಜೂನ್ 7 ರಂದು ಮದುವೆ ಇದೆ. ದಯವಿಟ್ಟು ಕುಟುಂಬ ಸಮೇತರಾಗಿ ಹಾಜರಾಗಿ. ನಾನು ಮದುವೆಯ ಆಮಂತ್ರಣ ಪತ್ರಿಕೆಯನ್ನು ಕಳುಹಿಸಿದ್ದೇನೆ, ಅದು ಹೇಗಿದೆ ಎಂದು ನೋಡಿ ತಿಳಿಸಿ ಎಂದು ಹೇಳಲಾಗಿತ್ತು.

ಮಹಿಳೆಯರ ಬೆತ್ತಲೆ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆನ್ಲೈನ್ ಮೂಲಕ ಧಾರ್ಮಿಕ ಪ್ರವಚನ ನೀಡುತ್ತಿದ್ದ ಪಾದ್ರಿಯ ಬಂಧನ

ಆತ ಓರ್ವ ಮಹಿಳೆಯೊಂದಿಗೆ ಸ್ನೇಹ ಬೆಳೆಸಲು ಯತ್ನಿಸಿದ್ದ; ಆದರೆ ಮಹಿಳೆ ನಿರಾಕರಿಸಿದ್ದಳು. ಈ ವಿಷಯದ ಬಗ್ಗೆ ಕೋಪಗೊಂಡ ಪಾದ್ರಿಯು ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮಹಿಳೆ ಮತ್ತು ಆಕೆಯ ತಾಯಿಯ ಬೆತ್ತಲೆ ಚಿತ್ರಗಳು ಮತ್ತು ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.

ನಾಗ್ಪುರದಲ್ಲಿ ಸೈಬರ್ ಅಪರಾಧ ಕುರಿತು ಹಿರಿಯ ಅಧಿಕಾರಿಗಳಿಗೆ ಸುಳ್ಳು ವರದಿ ನೀಡಿದ ೯ ಪೊಲೀಸರ ಅಮಾನತು!

ಪುಣೆಯಲ್ಲಿ ಈ ತಂಡವು ಶಂಕಿತ ಆರೋಪಿ ಏಕಾಂಶ್ ಜೈನ್‌ನನ್ನು ಭೇಟಿ ಮಾಡಿ ನೋಟಿಸ್ ನೀಡಿತ್ತು; ಆದರೆ ನಾಗ್ಪುರಕ್ಕೆ ಮರಳಿದ ನಂತರ ತಂಡವು ‘ಆರೋಪಿ ಸಿಕ್ಕಿಲ್ಲ,’ ಎಂದು ಹಿರಿಯರಿಗೆ ಸುಳ್ಳು ವರದಿ ಸಲ್ಲಿಸಿತು. ತನಿಖೆಯ ಹೆಸರಿನಲ್ಲಿ ಆರೋಪಿಯಿಂದ ದೊಡ್ಡ ಮಟ್ಟದ ಹಣ ವಸೂಲಿ ಮಾಡಲಾಗಿದೆ ಎಂಬ ಚರ್ಚೆಯೂ ನಡೆದಿದೆ.

ದೆಹಲಿಯಲ್ಲಿ ಮಹಿಳೆಯರು ಮತ್ತು ವೃದ್ಧರು ಅತ್ಯಂತ ಅಸುರಕ್ಷಿತರು!

ರಾಜಧಾನಿ ದೆಹಲಿಯ ಈ ಸ್ಥಿತಿ ನಾಚಿಕೆಗೇಡು! ಭಾರತದಲ್ಲಿ ಮಹಿಳೆಯರನ್ನು ದೇವಿಯೆಂದು ಪರಿಗಣಿಸಲಾಗುತ್ತದೆ ಮತ್ತು ವೃದ್ಧರನ್ನು ಗೌರವಿಸಲಾಗುತ್ತದೆ. ಅವರ ಈ ಸ್ಥಿತಿಯು ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿರುವುದನ್ನು ತೋರಿಸುತ್ತದೆ!

‘ಡಿಜಿಟಲ್ ಅರೆಸ್ಟ್’ಗೆ ತಡೆ ನೀಡಲು ಸಂಬಂಧಿತ ಮೊಬೈಲ್ ಫೋನ್ ಸೆಟ್ ಗಳನ್ನು ಬಂದ್ ಮಾಡಿ!

ಸೈಬರ್ ಅಪರಾಧಿಗಳು ಪದೇ ಪದೇ ಹೊಸ ‘ಸಿಮ್ ಕಾರ್ಡ್’ ಬಳಸಿ ಅಥವಾ ನಕಲಿ ಖಾತೆ ಸೃಷ್ಟಿಸಿ ಜನರನ್ನು ವಂಚಿಸುತ್ತಾರೆ. ‘ವಾಟ್ಸಪ್’ನಿಂದ ಯಾವುದಾದರೊಂದು ಸಂಖ್ಯೆಯನ್ನು ಬಂದ್ ಮಾಡಿದರೂ, ಅದೇ ಮೊಬೈಲ್ ನಲ್ಲಿ ಹೊಸ ‘ಸಿಮ್ ಕಾರ್ಡ್’ ಮೂಲಕ ಇನ್ನೊಂದು ಖಾತೆಯನ್ನು ತೆರೆಯಲಾಗುತ್ತದೆ.

ಸೈಬರ್ ಅಪರಾಧಿಗಳ ಪ್ರಮುಖ ಗುರಿ ಭಾರತ ! – ‘ಮೆಟಾ’ ವರದಿ

ವರದಿಯ ಪ್ರಕಾರ, ಸೈಬರ್ ಹಗರಣಗಳಿಗಾಗಿ ಸಾಮಾಜಿಕ ಮಾಧ್ಯಮಗಳನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರೊಂದಿಗೆ ಸಂಘಟಿತ ಅಪರಾಧ ಗುಂಪುಗಳು ಒಂದು ವ್ಯವಹಾರದ ಮಾದರಿಯಲ್ಲಿ ಈ ಹಗರಣಗಳನ್ನು ನಡೆಸುತ್ತಿವೆ.

“ಟಿ-20 ವಿಶ್ವಕಪ್: 10 ಸಾವಿರ ಕೋಟಿ ಬೆಟ್ಟಿಂಗ್ ತನಿಖೆ ನಡೆಸಿ!”

ಭಾರತ ಮತ್ತು ಕ್ರಿಕೆಟ್‌ಗೆ ಜಗತ್ತಿನಾದ್ಯಂತ ಕೆಟ್ಟ ಹೆಸರು ಬರದಂತೆ ತಡೆಯಲು, ಪಂದ್ಯ ಮುಗಿಯುವ ಮೊದಲೇ ಈ ಜಾಲದ ಮೇಲೆ ದೇಶೀಯ ‘ಸರ್ಜಿಕಲ್ ಸ್ಟ್ರೈಕ್’ ಆಗುವುದು ಅಗತ್ಯವಾಗಿದೆ. ಆಡಳಿತಾತ್ಮಕ ಪಾರದರ್ಶಕತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಾಗಿ ಸುರಾಜ್ಯ ಅಭಿಯಾನವು ಈ ಪ್ರಕರಣವನ್ನು ಮುಂದೆಯೂ ಫಾಲೋ-ಅಪ್ ಮಾಡಲಿದೆ.