ಭಗವಾನ್ ಶಿವ ಮತ್ತು ಪಾರ್ವತಿ ಅವರ ಪ್ರಣಯಕ್ರೀಡೆ ಮಾಡುತ್ತಿರುವ ಚಿತ್ರವಿರುವ ಸಂಚಾರವಾಣಿಯ ‘ಕವರ್’ ಅನ್ನು ಆನ್‍ಲೈನ್ ಮಾರಾಟಕ್ಕಾಗಿ ಇಡುವ ಮೂಲಕ ಫ್ಲಿಪ್‍ಕಾರ್ಟ್’ನಿಂದ ಹಿಂದೂಗಳ ಧಾರ್ಮಿಕ ಭಾವನೆಗಳ ಘೋರ ಅವಮಾನ

ಹಿಂದೂ ಜನಜಾಗೃತಿ ಸಮಿತಿಯ ಮನವಿಯ ನಂತರ, ‘ಫ್ಲಿಪ್‍ಕಾರ್ಟ್’ ತನ್ನ ಜಾಲತಾಣದಿಂದ ‘ಕವರ್’ ಅನ್ನು ತೆಗೆದಿದೆ !

* ಹಿಂದುದ್ವೇಷಿ ‘ಫ್ಲಿಪ್‍ಕಾರ್ಟ್’ ಇತರ ಧರ್ಮಗಳ ಶ್ರದ್ಧಾಸ್ಥಾನಗಳ ಬಗ್ಗೆ ಇಂತಹ ಚಿತ್ರಗಳಿರುವ ಸಂಚಾರವಾಣಿಗಳ ‘ಕವರ್’ ಅನ್ನು ಮಾರಾಟ ಮಾಡುವ ಧೈರ್ಯವನ್ನು ತೋರಿಸಬಹುದೇ ? ಹಿಂದೂಗಳು ತಮ್ಮ ಶ್ರದ್ಧಾಸ್ಥಾನಗಳ ವಿಡಂಬನೆಯನ್ನು ಮಾಡಲು ಯಾರೂ ಧೈರ್ಯ ಮಾಡುವುದಿಲ್ಲ ಎಂಬ ಭಯವನ್ನು ಸೃಷ್ಟಿಸಬೇಕು !

* ಹಿಂದೂ ಬಹುಸಂಖ್ಯಾತ ಭಾರತದಲ್ಲಿ, ಹಿಂದೂ ದೇವತೆಗಳನ್ನು ಪದೇ ಪದೇ ಅವಮಾನಿಸುವ ಸಂಸ್ಥೆಗಳನ್ನು ಸರಕಾರವು ಏಕೆ ನಿಷೇಧಿಸುವುದಿಲ್ಲ ?

ಮುಂಬಯಿ (ಮಹಾರಾಷ್ಟ್ರ) – ಆನ್‍ಲೈನ್ ವ್ಯಾಪಾರಿ ಸಂಸ್ಥೆಯಾಗಿರುವ ‘ಫ್ಲಿಪ್‍ಕಾರ್ಟ್’ ತನ್ನ ಜಾಲತಾಣದಲ್ಲಿ ಭಗವಾನ ಶಿವ ಮತ್ತು ಪಾರ್ವತಿ ದೇವಿಯು ಪ್ರಣಯಕ್ರೀಡೆಯನ್ನಾಡುತ್ತಿರುವ ಚಿತ್ರವಿರುವ ಸಂಚಾರವಾಣಿಯ ‘ಕವರ್’ ಆನ್‍ಲೈನ್ ಮಾರಾಟಕ್ಕಾಗಿ ಇಟ್ಟಿತ್ತು. ಹಿಂದೂ ಜನಜಾಗೃತಿ ಸಮಿತಿ ಮಾಡಿದ ಮನವಿಯ ನಂತರ, ‘ಫ್ಲಿಪ್‍ಕಾರ್ಟ್’ ತನ್ನ ಜಾಲತಾಣದಿಂದ ಈ ‘ಕವರ್’ ಅನ್ನು ತೆಗೆದುಹಾಕಿದೆ. (ಇದು ಹಿಂದೂ ಜನಜಾಗೃತಿ ಸಮಿತಿಗೆ ದೊರೆತ ಯಶಸ್ಸು ! – ಸಂಪಾದಕ)

‘ಫ್ಲಿಪ್‍ಕಾರ್ಟ್’ನಿಂದ ‘ಸ್ಯಾಮ್‍ಸಂಗ್’ ಈ ಸಂಸ್ಥೆಯ ಸಂಚಾರವಾಣಿಯ ‘ಕವರ್’ ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯವಿತ್ತು. ಈ ‘ಕವರ್’ನ ಮೇಲಿನ ಚಿತ್ರದಲ್ಲಿ, ತಲೆಯ ಮೇಲೆ ಚಂದ್ರ, ಕುತ್ತಿಗೆಯಲ್ಲಿ ನಾಗ, ಕೈಯಲ್ಲಿ ತ್ರಿಶೂಲ ಮತ್ತು ದೇಹದ ಮೇಲೆ ರುದ್ರಾಕ್ಷದ ಮಾಲೆಯಿರುವ ಜಟಾಧಾರಿ ಶಿವನು ತಾಯಿ ಪಾರ್ವತಿಯೊಂದಿಗೆ ಪ್ರಣಯಕ್ರೀಡೆಯನ್ನು ಮಾಡುತ್ತಿರುವಂತೆ ತೋರಿಸಲಾಗಿತ್ತು. ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯು ‘ಟ್ವಿಟರ್’ನಲ್ಲಿ ಮಾಹಿತಿ ನೀಡಿ, ಈ ಚಿತ್ರವು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ ಮತ್ತು ಈ ‘ಕವರ್’ ಅನ್ನು ತಕ್ಷಣ ತೆಗೆದುಹಾಕುವಂತೆ ಮನವಿ ಮಾಡಿತು. ಹಿಂದೂ ಜನಜಾಗೃತಿ ಸಮಿತಿಯ ಈ ಮನವಿಯನ್ನು ಅನೇಕ ಧರ್ಮಾಭಿಮಾನಿ ಹಿಂದೂಗಳು ಬೆಂಬಲಿಸಿದರು ಮತ್ತು ‘ಫ್ಲಿಪ್‍ಕಾರ್ಟ್’ನ ಹಿಂದೂ ವಿರೋಧಿ ಕೃತ್ಯವನ್ನು ವಿರೋಧಿಸಿದರು ಮತ್ತು ಅವರೂ ಕೂಡ ‘ಕವರ್’ ಜಾಲತಾಣದಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದರು. ಅಂತಿಮವಾಗಿ ‘ಫ್ಲಿಪ್‍ಕಾರ್ಟ್’ ಜಾಲತಾಣದಿಂದ ‘ಕವರ್’ ಅನ್ನು ತೆಗೆದುಹಾಕಿದೆ. (ದೇವತೆಗಳ ವಿಡಂಬನೆಯ ವಿರುದ್ಧ ಧ್ವನಿ ಎತ್ತುವ ಜಾಗೃತ ಧರ್ಮಾಭಿಮಾನಿ ಹಿಂದೂಗಳಿಗೆ ಅಭಿನಂದನೆಗಳು ! ಇತರ ಹಿಂದೂಗಳು ಸಹ ಇದರಿಂದ ಕಲಿಯಬೇಕು ! – ಸಂಪಾದಕ)

ಮೇಲಿನ ಚಿತ್ರವನ್ನು ಪ್ರಕಟಿಸಿರುವುದು ಯಾರ ಧಾರ್ಮಿಕ ಭಾವನೆಗಳನ್ನು ನೋಯಿಸುವ ಉದ್ದೇಶದಿಂದಲ್ಲ. ಮಾಹಿತಿಗಾಗಿ ಈ ಚಿತ್ರವನ್ನು ಪ್ರಕಟಿಸಲಾಗಿದೆ. – ಸಂಪಾದಕರು