ಆನ್‌ಲೈನ್ ವೆಬ್‌ಸಿರೀಸ್ ಮೇಲೆ ನಿಯಂತ್ರಣವಿಡಲು ಸೆನ್ಸರ್ ಬೋರ್ಡನಂತಹ ವ್ಯವಸ್ಥೆ ರೂಪಿಸಬೇಕು ! – ಹಿಂದೂ ಜನಜಾಗೃತಿ ಸಮಿತಿ

ಅನುಷ್ಕಾ ಶರ್ಮಾ ಪ್ರೊಡಕ್ಶನ್ ಮೂಲಕ ‘ಪಾತಾಲ್ ಲೋಕ್’ ವೆಬ್‌ಸಿರೀಸ್ ಸಂಪೂರ್ಣವಾಗಿ ಹಿಂದೂವಿರೋಧಿ ನಿಲುವಿನಿಂದ ತಯಾರಿಸಿದ್ದು ಅದರಲ್ಲಿ ಅತ್ಯಂತ ಆಕ್ಷೇಪಾರ್ಹ ದೃಶ್ಯಗಳನ್ನು ತೋರಿಸಲಾಗಿದೆ. ಇದರಲ್ಲಿ ಒಂದು ಹೆಣ್ಣು ನಾಯಿಗೆ ‘ಸಾವಿತ್ರಿ’ ಎಂದು ಹೆಸರಿಡಲಾಗಿದೆ; ದೇವಸ್ಥಾನದಲ್ಲಿ ಅರ್ಚಕರು ಮಾಂಸ ಬೇಯಿಸಿ ತಿನ್ನುವಂತೆ ತೋರಿಸಲಾಗಿದೆ;