ಫೇಸ್‌ಬುಕ್‌ನ ಅನ್ಯಾಯದ ವರ್ತನೆಯ ಕುರಿತು ಹಿಂದೂ ಬಾಂಧವರಿಂದ ದೇಶದಾದ್ಯಂತ ಆಂದೋಲನದ ಮೂಲಕ ತೀವ್ರ ಖಂಡನೆ !
ಕಳೆದ ಕೆಲವು ಕಾಲದಲ್ಲಿ ಫೇಸ್‌ಬುಕ್ ದೇಶದಾದ್ಯಂತದ ಹಿಂದುತ್ವನಿಷ್ಠ ಗಣ್ಯರ ಮತ್ತು ಸಂಘಟನೆಗಳ ಪುಟಗಳನ್ನು ಯಾವುದೇ ಕಾರಣವನ್ನು ನೀಡದೇ ನಿಲ್ಲಿಸಿದೆ. ಈ ಸ್ವೇಚ್ಛಾವರ್ತನೆ ಕಾರ್ಯಾಚರಣೆಯು ಆತಂಕಕಾರಿಯಾಗಿದ್ದು ಹಿಂದೂ ಬಾಂಧವರಲ್ಲಿ ಜನಾಕ್ರೋಶ ಉದ್ಭವಿಸಿದೆ. ಶನಿವಾರದಂದು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಇದರ ಆಕ್ರೋಶ ಕಂಡುಬಂದಿತು.