|
|
ಮುಂಬಯಿ – ೨೦೨೦ ರ ಸೆಪ್ಟೆಂಬರ್‌ನಲ್ಲಿ ಫೇಸ್‌ಬುಕ್ ಸನಾತನ ಸಂಸ್ಥೆಯ ಫೇಸ್‌ಬುಕ್ ಪುಟವನ್ನು ಫೇಸ್‌ಬುಕ್ ನಿಷೇಧಿಸಿದ ನಂತರವೂ, ಸಂಘಟನೆಯೊಂದಿಗೆ ನಿಕಟವಾಗಿರುವ ಇತರ ಸಂಘಟನೆಗಳ ಫೇಸ್‌ಬುಕ್ ಪುಟಗಳು ಸುಗಮವಾಗಿ ನಡೆಯುತ್ತಿವೆ. ಈ ಮಾಧ್ಯಮಗಳ ಮೂಲಕ ಮುಸಲ್ಮಾನರ ವಿರುದ್ಧ ಧ್ವನಿ ಎತ್ತಲಾಗುತ್ತಿತ್ತು. ಈ ಪುಟಗಳಿಗೆ ೨೭ ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು (ಫಾಲೋವರ್ಸ್) ಹೊಂದಿದೆ. ೨೦೨೧ ರ ಏಪ್ರಿಲ್‌ನಲ್ಲಿ ನಾವು ಈ ಬಗ್ಗೆ ಫೇಸ್‌ಬುಕ್‌ಗೆ ಗಮನಕ್ಕೆ ತಂದುಕೊಟ್ಟ ನಂತರ ಅದು ಹಿಂದೂ ಜನಜಾಗೃತಿ ಸಮಿತಿ, ಸನಾತನ ಪ್ರಭಾತ, ಸನಾತನ ಶಾಪ್ ಮತ್ತು ಸಮಿತಿಯ ಇತರ ಪುಟ ಸಹಿತ ೩೦ ಕ್ಕೂ ಹೆಚ್ಚು ಪುಟಗಳನ್ನು ನಿಷೇಧಿಸಿದೆ ಎಂದು ಅಮೆರಿಕಾದ ನಿಯತಕಾಲಿಕೆ ‘ಟೈಮ್’ ವರದಿ ಮಾಡಿದೆ. ಈ ಬಗ್ಗೆ ಟೈಮ್‌ನ ಬಿಲಿ ಪೆರಿಗೊ ಅವರ ಹಿಂದೂದ್ವೇಷಿ ಮತ್ತು ಪೂರ್ವಗ್ರಹ ಪೀಡಿತ ಲೇಖನವನ್ನು ಜೂನ್ ೯ ರಂದು ಪ್ರಕಟಿಸಿ ಈ ಮಾಹಿತಿಯನ್ನು ನೀಡಿದೆ.(ಇದರಿಂದ ಜಾಗತಿಕ ಮಟ್ಟದ ಶಕ್ತಿಗಳು ಹಿಂದೂಗಳ ವಿರುದ್ಧ ಹೇಗೆ ಕೈಜೋಡಿಸುತ್ತಿವೆ ಮತ್ತು ಹಿಂದೂದ್ವೇಷದ ಅಜೆಂಡಾವನ್ನು ಮುಂದುವರಿಸುತ್ತವೆ, ಎಂಬುದು ಉದಾಹರಣೆ ಸಹಿತ ಸ್ಪಷ್ಟವಾಗುತ್ತದೆ. ಅದಕ್ಕಾಗಿಯೇ ಹಿಂದೂಗಳು ವಿವಿಧ ಹಂತಗಳಲ್ಲಿ ಒಗ್ಗೂಡಿ, ಇಂತಹ ಕಮ್ಯುನಿಸ್ಟರು, ತಥಾಕಥಿತ ಜಾತ್ಯತೀತವಾದಿಗಳು, ಸಮಾಜವಾದಿಗಳು, ಉದಾರವಾದಿಗಳು ಮತ್ತು ಭಾರತದಲ್ಲಿ ಅವರ ಸಹಾಯಕರ ವಿರುದ್ಧವೂ ಕಾನೂನುಮಾರ್ಗದಲ್ಲಿ ಜಾಗತಿಕವಾಗಿ ಹೋರಾಡುವುದು ಕಾಲಕ್ಕೆ ಅಗತ್ಯವಾಗಿದೆ, ಎಂಬುದನ್ನು ಅರಿಯಿರಿ ! – ಸಂಪಾದಕ)
Today’s Daily Spotlight, from @billyperrigo:
Facebook allowed a Hindu extremist group to operate openly on its platform for months, even after the company banned the group’s main pages for violating its policies https://t.co/PgwjGYDUUx
— TIME (@TIME) June 11, 2021
ಪೆರಿಗೊ ಈ ಲೇಖನದಲ್ಲಿ, ‘ಈ ಪುಟಗಳಲ್ಲಿ ನಿಯಮಿತವಾಗಿ ಮುಸಲ್ಮಾನವಿರೋಧಿ ದ್ವೇಷ ಮತ್ತು ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಲಾಗುತ್ತಿತ್ತು. ಅದರಲ್ಲಿ ಮುಸಲ್ಮಾನರನ್ನು ಹಸಿರು ರೇಖಾಚಿತ್ರಗಳಿಂದ ತೋರಿಸಲಾಗುತ್ತಿತ್ತು. ಅಲ್ಲದೆ, ಈ ಪುಟಗಳಿಂದ ‘ಲವ್ ಜಿಹಾದ್’ ಕಾಲ್ಪನಿಕ ಪರಿಕಲ್ಪನೆಯ ಅಪಪ್ರಚಾರ ಮಾಡಲಾಗುತ್ತಿದೆ.” (‘ಲವ್ ಜಿಹಾದ್’ ಅಸ್ತಿತ್ವದಲ್ಲಿರುವುದು ಹಲವು ಬಾರಿ ಸ್ಪಷ್ಟವಾಗಿದೆ. ಉಚ್ಚ ನ್ಯಾಯಾಲಯದಲ್ಲೂ ಅಸ್ತಿತ್ವದ ಬಗ್ಗೆ ಹೇಳಿದೆ. ಇಂದು ಭಾರತದ ಅನೇಕ ರಾಜ್ಯ ಸರಕಾರಗಳು ಲವ್ ಜಿಹಾದ್ ವಿರುದ್ಧ ಕಾನೂನುಗಳನ್ನು ರೂಪಿಸಿವೆ. ‘ಟೈಮ್’ನ ಮಹಾಶಯರು ಚಕಾರ ಎತ್ತುವುದಿಲ್ಲ. ಇದರಿಂದ ತಮಗೆ ಬೇಕಾದ ಸಿದ್ಧಾಂತವು ಎಷ್ಟು ವಾಸ್ತವಿಕವಾಗಿರದಿದ್ದರೂ ತಮಗೆ ಅನುಕೂಲಕರ ಉದಾಹರಣೆಗಳನ್ನು ನೀಡುವ ಮೂಲಕ ಮನವೊಲಿಸಬಹುದು ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ಇದಕ್ಕಾಗಿ ಪೆರಿಗೊಗೆ ಬಹುಮಾನ ನೀಡಬೇಕು ! – ಸಂಪಾದಕರು)
ಲೇಖನದಲ್ಲಿ ಇತರ ಅಂಶಗಳು ಮುಂದಿನಂತಿವೆ –
೧. ೩೨ ಕೋಟಿ ಭಾರತೀಯರು ಫೇಸ್‌ಬುಕ್ ಬಳಕೆದಾರರಾಗಿರುವುದರಿಂದ, ಹಿಂದುತ್ವನಿಷ್ಠ ಸಂಘಟನೆಗಳ ವಿರುದ್ಧ ಫೇಸ್‌ಬುಕ್ ಬಹುಶಃ ಕ್ರಮ ತೆಗೆದುಕೊಳ್ಳುವುದಿಲ್ಲ. ಅಲ್ಲದೆ, ಆಡಳಿತಾರೂಢ ಬಿಜೆಪಿ ವಿರುದ್ಧದ ‘ಪೋಸ್ಟ’ಗಳನ್ನು ತೆಗೆದು ಹಾಕಲಾಗುವುದಿಲ್ಲ. ಹಿಂದುತ್ವನಿಷ್ಠರ ಆಕ್ಷೇಪಾರ್ಹ ಪೋಸ್ಟ್‌ಗಳ ಬಗ್ಗೆ ಫೇಸ್‌ಬುಕ್ ಕ್ರಮ ಕೈಗೊಳ್ಳುವುದಿಲ್ಲ. (ಹಾಗಾದರೆ, ಇಲ್ಲಿಯವರೆಗೆ ಅನೇಕ ಹಿಂದುತ್ವನಿಷ್ಠ ಸಂಘಟನೆಗಳ ಫೇಸ್‌ಬುಕ್ ಪುಟಗಳನ್ನು ಫೇಸ್‌ಬುಕ್ ಏಕೆ ಮುಚ್ಚಿದೆ ? – ಸಂಪಾದಕರು)
೨. ಫೇಸ್‌ಬುಕ್ ಬಳಿ ವಿಶ್ವದಾದ್ಯಂತ ನೂರಾರು ಅಪಾಯಕಾರಿ ಸಂಘಟನೆಗಳ ಪಟ್ಟಿಗಳಿವೆ; ಆದರೆ ಅದು ಎಂದಿಗೂ ಈ ಪಟ್ಟಿಯನ್ನು ಸಾರ್ವಜನಿಕ ಮಾಡುವುದಿಲ್ಲ. ಫೇಸ್‌ಬುಕ್ ಒಂದು ಸಂಘಟನೆಯ ಫೇಸ್‌ಬುಕ್ ಪುಟವನ್ನು ನಿಷೇಧಿಸಿದರೆ, ಅದು ಆ ಸಂಘಟನೆಯನ್ನು ಹೊಗಳುವ ಅಥವಾ ಬೆಂಬಲಿಸುವ ಪೋಸ್ಟ್‌ಗಳನ್ನು ಸಹ ನಿಯಂತ್ರಿಸಲಾಗುತ್ತದೆ.
೩. ಪತ್ರಕರ್ತ ಪೆರಿಗೊ ಲೇಖನದಲ್ಲಿ ‘ಫೇಸ್‌ಬುಕ್ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯನ್ನು ಅಪಾಯಕಾರಿ ಸಂಘಟನೆಗಳ ಪಟ್ಟಿಯಲ್ಲಿ ಸೇರಿಸಿದೆಯೇ?’ ಎಂದೂ ಕೇಳಿದೆ ಎಂದು ನೋಂದಾಯಿಸುತ್ತಾರೆ. (ಇದರಿಂದ ಪೆರಿಗೊರವರ ಹಿಂದುತ್ವನಿಷ್ಠ ಸಂಘಟನೆಗಳ ವಿರುದ್ಧದ ದ್ವೇಷವನ್ನು ಸ್ಪಷ್ಟವಾಗಿ ತೋರಿಸುತ್ತದೆ. – ಸಂಪಾದಕರು)
೪. ಲೇಖನದ ಕೊನೆಯಲ್ಲಿ ಹಿಂದೂದ್ವೇಷಿ ಪತ್ರಕರ್ತರನ್ನು ಉಲ್ಲೇಖಿಸಿ ಪೆರಿಗೊ ಬರೆಯುತ್ತಾರೆ, ‘ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರ ಹಿಂದುತ್ವನಿಷ್ಠ ಸಂಘಟನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಟ್ವಿಟರ್, ಟೆಲಿಗ್ರಾಮ್ ಮತ್ತು ಯೂಟ್ಯೂಬ್‌ನಲ್ಲೂ ಖಾತೆಗಳನ್ನು ಹೊಂದಿವೆ. ಈ ಖಾತೆಗಳನ್ನು ನಿಷೇಧಿಸುವುದನ್ನು ಈ ಸಾಮಾಜಿಕ ಮಾಧ್ಯಮಗಳು ವಿಚಾರ ಮಾಡಬೇಕು.”
ಸನಾತನ ಸಂಸ್ಥೆಯು ಮಂಡಿಸಿದ ನಿಲುವಿನ ಕಡೆ ‘ಟೈಮ್’ನಿಂದ ನಿರ್ಲಕ್ಷ !
‘ಟೈಮ್’ ಲೇಖನದಲ್ಲಿ, ಪ್ರಗತಿಪರರು, ಹಿಂದೂದ್ವೇಷಿಗಳು ಮುಂತಾದವರು ಸನಾತನ ಸಂಸ್ಥೆಯ ವಿರುದ್ಧ ಮಾಡಿದ ಆಧಾರರಹಿತ ಆರೋಪಗಳನ್ನು ಉಲ್ಲೇಖಿಸಲಾಗಿದೆ. ಕೆಲವು ವಾರಗಳ ಹಿಂದೆ ‘ಟೈಮ್’ ನಿಂದ ಸನಾತನ ಸಂಸ್ಥೆಗೆ ಒಂದು ಪ್ರಶ್ನೆಯನ್ನು ಕಳುಹಿಸಲಾಗಿತ್ತು. ಇದಕ್ಕೆ ಉತ್ತರವಾಗಿ, ಸನಾತನ ಸಂಸ್ಥೆಯು ತನ್ನ ನಿಲುವನ್ನು ವಿವರವಾಗಿ ಮಂಡಿಸಿತ್ತು; ಆದರೆ ‘ಟೈಮ್’ ಅದನ್ನು ನಿರ್ಲಕ್ಷಿಸಿ ನಿಲುವನ್ನು ಕಾಸಿಗೂ ಕಿಮ್ಮತ್ತಿಲ್ಲವಂತೆ ಮುದ್ರಿಸಿತ್ತು, ಎಂದು ವಿಷಾದದ ಸಂಗತಿ. ಈ ಲೇಖನದಲ್ಲಿ ಸನಾತನದ ನಿಲುವನ್ನು ಅತ್ಯಂತ ಚುಟುಕಾಗಿ ಮಂಡಿಸಲಾಗಿದೆ ಎಂದು ಸನಾತನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಹಿಂದೂ ಮತ್ತು ಭಾರತ ದ್ವೇಷಿ ‘ಫೇಸ್‌ಬುಕ್’ ಅನ್ನು ಭಾರತದಲ್ಲಿ ನಿಷೇಧಿಸಿ ! – ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ
‘ಟೈಮ್’ ಹೇಳಿದಂತೆ ಫೇಸ್‌ಬುಕ್ ಹಿಂದುತ್ವನಿಷ್ಠ ಸಂಘಟನೆಗಳ ಪುಟವನ್ನು ನಿಷೇಧಿಸುತ್ತದೆ, ಈ ಉದಾಹರಣೆಯಿಂದ ಪಾಶ್ಚಿಮಾತ್ಯ ಮಾಧ್ಯಮಗಳು ಹಾಗೂ ‘ಸೋಶಿಯಲ್ ಮೀಡಿಯಾ ಜಾಂಯಿಟ್ಸ್’ (ದೊಡ್ಡ ದೊಡ್ಡ ಸಾಮಾಜಿಕ ಪ್ರಸಾರ ಮಾಧ್ಯಮಗಳು) ಇವರ ಹಿಂದೂದ್ವೇಷಿ ಮೈತ್ರಿಯ ಘೋರ ಚಿತ್ರಣವು ಸ್ಪಷ್ಟವಾಗುತ್ತದೆ. ಈ ಮೈತ್ರಿಯ ಹಿಂದಿನ ಶಕ್ತಿಗಳು ಯಾವುವು ಎಂಬುದನ್ನು ನಾವು ಪತ್ತೆ ಹಚ್ಚಬೇಕು. ಭಾರತದಲ್ಲಿ ಧರ್ಮಪ್ರಸಾರದ ಸ್ವಾತಂತ್ರ್ಯವಿರುವಾಗ ಫೇಸ್‌ಬುಕ್‌ನಿಂದ ಇಂತಹ ಕ್ರಮ ತೆಗೆದುಕೊಳ್ಳುವುದು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಭಾರತೀಯರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಆದ್ದರಿಂದ ಫೇಸ್‌ಬುಕ್‌ನಂತಹ ಭಾರತವಿರೋಧಿ ಮತ್ತು ಹಿಂದೂದ್ವೇಷಿ ಸಾಮಾಜಿಕ ಮಾಧ್ಯಮಗಳನ್ನು ಭಾರತದಲ್ಲಿ ನಿಷೇಧಿಸಬೇಕು.’
ಫೇಸ್‌ಬುಕ್‌ನ ಅನ್ಯಾಯದ ವರ್ತನೆಯ ಕುರಿತು ಹಿಂದೂ ಬಾಂಧವರಿಂದ ದೇಶದಾದ್ಯಂತ ಆಂದೋಲನದ ಮೂಲಕ ತೀವ್ರ ಖಂಡನೆ !
ಹಿಂದುತ್ವನಿಷ್ಠ ಸಂಘಟನೆ ಮತ್ತು ಗಣ್ಯರ ಫೇಸ್‌ಬುಕ್ ಪೇಜ್‌ಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸಲು ಆಗ್ರಹ
ಕಳೆದ ಕೆಲವು ಕಾಲದಲ್ಲಿ ಫೇಸ್‌ಬುಕ್ ದೇಶದಾದ್ಯಂತದ ಹಿಂದುತ್ವನಿಷ್ಠ ಗಣ್ಯರ ಮತ್ತು ಸಂಘಟನೆಗಳ ಪುಟಗಳನ್ನು ಯಾವುದೇ ಕಾರಣವನ್ನು ನೀಡದೇ ನಿಲ್ಲಿಸಿದೆ. ಈ ಸ್ವೇಚ್ಛಾವರ್ತನೆ ಕಾರ್ಯಾಚರಣೆಯು ಆತಂಕಕಾರಿಯಾಗಿದ್ದು ಹಿಂದೂ ಬಾಂಧವರಲ್ಲಿ ಜನಾಕ್ರೋಶ ಉದ್ಭವಿಸಿದೆ. ಶನಿವಾರದಂದು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಇದರ ಆಕ್ರೋಶ ಕಂಡುಬಂದಿತು. ಹಿಂದುತ್ವನಿಷ್ಠ ಗಣ್ಯರು ಮತ್ತು ಸಂಘಟನೆಗಳ ಪುಟಗಳ ಮೇಲೆ ಹೇರಲಾದ ನಿಷೇಧವನ್ನು ತಕ್ಷಣ ತೆಗೆಯಬೇಕೆಂಬ, ಆಗ್ರಹದ ಬೇಡಿಕೆಯನ್ನು ಎಲ್ಲ ಸ್ತರಗಳಲ್ಲಿ ಮಾಡಲಾಯಿತು.
ಫೇಸ್‌ಬುಕ್ ಭಾರತದಲ್ಲಿನ ಹಿಂದುತ್ವವಾದಿ ಕಾರ್ಯಕರ್ತರು, ಸಂಘಟನೆಗಳು, ಮೀಡಿಯಾ, ಮುಖಂಡರು ಇವರ ಮೇಲೆ ಪಕ್ಷಪಾತಯುಕ್ತ ಕಾರ್ಯಾಚರಣೆ ಮಾಡುತ್ತಿದ್ದು, ಅವರ ಪೋಸ್ಟ್ ಡಿಲೀಟ್ ಮಾಡುವುದು, ಅವರ ಫಾಲೋವರ್ಸ್ ಸಂಖ್ಯೆಯನ್ನು ಕಡಿಮೆ ಮಾಡುವುದು, ಅವರಿಗೆ ಮೇಲಿಂದ ಮೇಲೆ ನೋಟಿಸ್ ಕಳುಹಿಸಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕಡಿವಾಣ ಹಾಕುವುದು, ಈ ರೀತಿಯ ಸ್ವೇಚ್ಛಾವರ್ತನೆಯ ಕಾರ್ಯಾಚರಣೆಯನ್ನು ಮಾಡುತ್ತಿದೆ.
ಫೇಸ್‌ಬುಕ್ ಯಾವುದೇ ಕಾರಣವನ್ನು ನೀಡದೇ ಹಿಂದೂ ಜನಜಾಗೃತಿ ಸಮಿತಿಯ ಪುಟ facebook.com/HinduAdhiveshan, ಸಹಿತ ಜಿಲ್ಲೆ ಮತ್ತು ರಾಜ್ಯಮಟ್ಟದ ಒಟ್ಟು ೩೫ ಪುಟಗಳನ್ನು ನಿಲ್ಲಿಸಿದೆ. ಅದರೊಂದಿಗೆ ಸನಾತನ ಪ್ರಭಾತ ನಿಯತಕಾಲಿಕೆಯ ಪುಟ facebook.com/sanatanprabhat, ಸನಾತನ ಶಾಪ್‌ನ್ ಪೇಜ್ facebook.com/sanatanshop, ಈ ಪುಟಗಳ ಮೇಲಿಯೂ ನಿರ್ಬಂಧವನ್ನು ತಂದಿದೆ. ಅದೇ ರೀತಿ ಸುದರ್ಶನ ಟಿವಿ. ಭಾಜಪದ ತೆಲಂಗಾಣದ ಶಾಸಕರಾದ ಶ್ರೀ. ಟಿ. ರಾಜಾಸಿಂಗ ಇವರೊಂದಿಗೆ ಅನೇಕ ಹಿಂದುತ್ವನಿಷ್ಠರ ಫೇಸ್‌ಬುಕ್ ಪೇಜ್‌ಗಳ ಮೇಲೆ ನಿರ್ಬಂಧವನ್ನು ಹೇರಿದೆ. ಯಾವುದೇ ಕಾರಣವನ್ನು ಅಥವಾ ಸೂಚನೆಯನ್ನು ನೀಡದೇ ಈ ಕಾರ್ಯಾಚರಣೆಯನ್ನು ಮಾಡಲಾಗಿದೆ.
ವಾಸ್ತವದಲ್ಲಿ ಯಾವುದೇ ಮಾಹಿತಿ ಅಥವಾ ಸಾಹಿತ್ಯ ಇವುಗಳ ಕುರಿತು ಆಕ್ಷೇಪವಿದ್ದರೆ, ಆ ಕುರಿತು ಫೇಸ್‌ಬುಕ್ ತಿಳಿಸುವುದಿರುತ್ತದೆ; ಆದರೆ ಹಾಗೇನೂ ತಿಳಿಸಿಲ್ಲ. ಇನ್ನೊಂದೆಡೆ ಕೋಮುದ್ವೇಷ ಹುಟ್ಟಿಸುವ ಪ್ರಚೋದನಾಕಾರಿ ಭಾಷಣಗಳನ್ನು ಮಾಡುವ ಮತ್ತು ಭಯೋತ್ಪಾದನೆ ಕಾರ್ಯಾಚರಣೆಗಳಿಂದ ಭಾರತ ಸರಕಾರವು ನಿಷೇಧಿಸಿದ ‘ಇಸ್ಲಾಮಿಕ್ ರಿಸರ್ಚ ಫೌಂಡೇಶನ್’ನ ಡಾ. ಝಾಕೀರ್ ನಾಯಿಕ ಇವರ ಖಾತೆ, ದೇಶವಿಘಾತಕ ಚಟುವಟಿಕೆಗಳಲ್ಲಿ ತೊಡಗಿದ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಖಾತೆಗಳನ್ನು ಇನ್ನೂ ಮುಂದುವರಿಸಿದೆ.
ಈ ಅನ್ಯಾಯದ ಕೃತಿಯ ವಿರುದ್ಧ ದೇಶದಾದ್ಯಂತದ ಹಿಂದೂ ಬಾಂಧವರು ಶನಿವಾರದಂದು ವಿವಿಧ ಮಾಧ್ಯಮಗಳಿಂದ ಫೆಸ್‌ಬುಕ್‌ನ ಕ್ರಮವನ್ನು ಖಂಡಿಸಿದರು. ಈ ಕುರಿತು ಟ್ವಟರ್‌ನಲ್ಲಿ #Facebook_Suppress_Hindu_Voices ಈ ಟ್ರೆಂಡ್‌ನ್ನು ನಡೆಸಲಾಯಿತು. ಅನೇಕ ಹಿಂದೂ ಬಾಂಧವರೊಂದಿಗೆ ಗಣ್ಯರು ಫೆಸ್‌ಬುಕ್‌ನ ಅನ್ಯಾಯದ ಕಾರ್ಯಾಚರಣೆಯ ವಿರುದ್ಧದ ಈ ಆನ್‌ಲೈನ್ ಅಭಿಯಾನದಲ್ಲಿ ತಮ್ಮ ಸಹಭಾಗವನ್ನು ನೋಂದಾಯಿಸಿದರು. ಸಂಬಂಧಿತ ಸರಕಾರಿ ವ್ಯವಸ್ಥೆ ಮತ್ತು ಮಂತ್ರಿಗಳಿಗೂ ಹಿಂದೂ ಸಂಘಟನೆಗಳ ಮೇಲಾಗುವ ದಬ್ಬಾಳಿಕೆಯನ್ನು ತಡೆಗಟ್ಟಲು ತ್ವರಿತ ಕಾರ್ಯಾಚರಣೆಯನ್ನು ಮಾಡಬೇಕೆಂಬ ಆಶಯದ ನಿವೇದನೆಯ ಈ-ಮೇಲ್ ಕಳುಹಿಸಲಾಯಿತು. ದೇಶದಾದ್ಯಂತದ ವಿವಿಧ ರಾಜ್ಯಗಳು, ಜಿಲ್ಲೆಗಳಲ್ಲಿ ಈ ಅಭಿಯಾನವು ನಡೆಯುತ್ತಿದ್ದು ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ಗಣ್ಯರ ಫೇಸ್‌ಬುಕ್ ಪೇಜ್‌ಗಳ ಮೇಲಿನ ನಿರ್ಬಂಧವನ್ನು ಹಿಂಪಡೆಯುವ ವರೆಗೆ ಇದು ಹೀಗೆಯೇ ಮುಂದುವರೆಸಲಾಗುವುದೆಂದು ಹಿಂದೂ ಜನಜಾಗೃತಿ ಸಮಿತಿಯು ಹೇಳಿದೆ.