#Facebook_Targets_HJS ಹ್ಯಾಶ್‌ಟ್ಯಾಗ್ ರಾಷ್ಟ್ರೀಯ ಮಟ್ಟದಲ್ಲಿ ಮೂರನೇ ಸ್ಥಾನ !

ಫೇಸ್‌ಬುಕ್‌ನಿಂದ ಹಿಂದುತ್ವನಿಷ್ಠ ಮತ್ತು ಅವರ ಸಂಘಟನೆಗಳ ಪುಟದ ಮೇಲೆ ಹೇರಿದ್ದ ನಿರ್ಬಂಧವನ್ನು ರಾಷ್ಟ್ರ ಮತ್ತು ಧರ್ಮಪ್ರೇಮಿಗಳಿಂದ ಟ್ವಿಟರ್ ಮೂಲಕ ವಿರೋಧ !

ಮುಂಬಯಿ – ಕಳೆದ ಕೆಲವು ತಿಂಗಳುಗಳಲ್ಲಿ ಫೇಸ್‌ಬುಕ್ ಹಿಂದುತ್ವದ ಪ್ರಚಾರ ಮಾಡುವುದನ್ನು ನಿಷೇಧಿಸಲು ಪ್ರಯತ್ನಿಸುತ್ತಿದೆ. ಈವರೆಗೆ ಫೇಸ್‌ಬುಕ್ ಇದು ಸನಾತನ ಸಂಸ್ಥೆ, ಸುದರ್ಶನ್ ಟಿವಿ, ಸುರೇಶ ಚವ್ಹಾಣಕೆ, ಬಿಜೆಪಿ ಶಾಸಕ ಟಿ. ರಾಜಾಸಿಂಹ ಹೀಗೆ ಅನೇಕ ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ನಾಯಕರ ಪುಟಗಳನ್ನು ನಿರ್ಬಂಧಿಸಿದೆ. ಈಗ ಸನಾತನ ಪ್ರಭಾತ, ಸನಾತನ ಶಾಪ್ ಮತ್ತು ಹಿಂದೂ ಜನಜಾಗೃತಿ ಸಮಿತಿ ನಡೆಸುತ್ತಿರುವ ರಾಷ್ಟ್ರ ಮತ್ತು ಧರ್ಮದ ಪುಟಗಳನ್ನು ಸಹ ಬಂದ್ ಮಾಡಲಾಗಿದೆ. ಮತ್ತೊಂದೆಡೆ, ಜಿಹಾದ್ ಮತ್ತು ಸಮಾಜದಲ್ಲಿ ದ್ವೇಷವನ್ನು ಹರಡುವ ಡಾ. ಝಾಕಿರ ನಾಯಿಕ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ರಝಾ ಅಕಾಡೆಮಿ ಇತ್ಯಾದಿಗಳ ಪುಟಗಳು ಮುಂದುವರೆಸಿದೆ. ಇದರಿಂದ ಫೇಸ್‌ಬುಕ್‌ನ ಹಿಂದೂದ್ವೇಷ ತೋರಿಸುತ್ತದೆ. ಆದ್ದರಿಂದಲೇ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿಗಳಿಂದ ಟ್ವಿಟರ್‌ನಲ್ಲಿ #Facebook_Targets_HJS ಎಂಬ ಹ್ಯಾಶ್‌ಟ್ಯಾಗ್ ಅನ್ನು ಟ್ರೆಂಡ್ ಮಾಡುವ ಮೂಲಕ ಇದನ್ನು ವಿರೋಧಿಸಿದರು. ಈ ಟ್ರೆಂಡ್ ಅಲ್ಪಾವಧಿಯಲ್ಲೇ ರಾಷ್ಟ್ರೀಯ ಟ್ರೆಂಡ್‌ನಲ್ಲಿ ಮೂರನೇ ಸ್ಥಾನದಲ್ಲಿತ್ತು. ಈ ಮೂಲಕ ಧರ್ಮಾಭಿಮಾನಿಗಳು ಸಂಘಟನೆಗಳ ಮತ್ತು ನಾಯಕರ ಪುಟಗಳ ಮೇಲಿನ ನಿಷೇಧವನ್ನು ಫೇಸ್‌ಬುಕ್ ತೆಗೆದುಹಾಕಬೇಕೆಂದು ಒತ್ತಾಯಿಸಿದರು. ಕೊನೆಯ ಸುದ್ದಿ ಹೊರಬರುವ ಹೊತ್ತಿಗೆ, ಈ ಟ್ರೆಂಡ್‌ನಲ್ಲಿ ೪೫೦೦೦ ಕ್ಕೂ ಹೆಚ್ಚು ಟ್ವೀಟ್‌ಗಳು ಬಂದಿದ್ದವು. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಈ ಅನ್ಯಾಯದ ವಿರುದ್ಧ ಆನ್‌ಲೈನ್ ಅಭಿಯಾನವನ್ನೂ ನಡೆಸುತ್ತಿದೆ.