ದೇಶದ ಆಡಳಿತವ್ಯವಸ್ಥೆಯ ವಿರೋಧ ಇರುವುದರಿಂದ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶವನ್ನು ಯುವಜನತೆಗೆ ಕಲಿಸಲಾಗುತ್ತಿಲ್ಲ ! – ಶ್ರೀ. ಸುರೇಶ ಚವ್ಹಾಣಕೆ, ಸುದರ್ಶನ ನ್ಯೂಸ್
ಇಂದು ಛತ್ರಪತಿ ಶಿವಾಜಿ ಮಹಾರಾಜರ ಸಂಪೂರ್ಣ ಇತಿಹಾಸವನ್ನು ಮಹಾರಾಷ್ಟ್ರವನ್ನು ಹೊರತುಪಡಿಸಿ ದೇಶದ ಯಾವುದೇ ರಾಜ್ಯದಲ್ಲಿ ಕಲಿಸಲಾಗುವುದಿಲ್ಲ. ರಾಷ್ಟ್ರಮಟ್ಟದಲ್ಲಿ, ಕೇಂದ್ರ ಸರಕಾರದ ‘ರಾಷ್ಟ್ರೀಯ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಸಂಸ್ಥೆ’ ಅಂದರೆ ಎನ್.ಸಿ.ಇ.ಆರ್.ಟಿ.ಯು ಇತಿಹಾಸವನ್ನು ಅರ್ಧ ಪುಟಕ್ಕಿಂತ ಹೆಚ್ಚು ಕಲಿಸಲು ಸಿದ್ಧವಿಲ್ಲ. ಮಾ. ಪ್ರಧಾನಿ ಶ್ರೀ. ನರೇಂದ್ರ ಮೋದಿಯವರಿಂದಾಗಿ ಗುಜರಾತ್‌ನಲ್ಲಿ, ಮಾ. ಶ್ರೀ. ಯಡಿಯೂರಪ್ಪರವರಿಂದ ಕರ್ನಾಟಕದಲ್ಲಿ ಇತಿಹಾಸವನ್ನು ಸ್ವಲ್ಪ ಹೆಚ್ಚಿಸಿದ್ದಾರೆ; ಆದರೆ, ದೇಶದಲ್ಲಿ ಛತ್ರಪತಿ ಶಿವಾಜಿಯವರ ವಿಚಾರಗಳನ್ನು ಕೊನೆಗೊಳಿಸಲು ಪಿತೂರಿ ನಡೆಯುತ್ತಿದೆ. ದೇಶದ ಆಡಳಿತವ್ಯವಸ್ಥೆ ಛತ್ರಪತಿ ಶಿವಾಜಿಯು ಆದರ್ಶ ಹಿಂದೂ ರಾಜರಾಗಿದ್ದರು’ ಎಂದು ದೇಶದ ಯುವಜನತೆಗೆ ಕಲಿಸುತ್ತಿಲ್ಲ. ಛತ್ರಪತಿ ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ಯದ ಪ್ರತಿಜ್ಞೆ ತೆಗೆದುಕೊಳ್ಳುವ ಮೊದಲು ದೇಶದ ಸ್ಥಿತಿ ಹೇಗಿತ್ತೋ ಇಂದು ಕೂಡ ಅಂತಹ ಸ್ಥಿತಿ ನಿರ್ಮಾಣವಾಗಿದೆ. ಕೇವಲ ಶಿವರಾಜ್ಯಾಭಿಷೇಕ ದಿನದಂದು ಹಿಂದೂ ಸಾಮ್ರಾಜ್ಯ ದಿನವನ್ನು ಆಚರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಕಾಶಿ-ಮಥುರಾವನ್ನು ಸ್ವತಂತ್ರಗೊಳಿಸಲು ಶಿವರಾಯರ ಸಂಕಲ್ಪವಿತ್ತು. ಛತ್ರಪತಿ ಶಿವಾಜಿ ಮಹಾರಾಜರ ವಿಚಾರಗಳನ್ನು ಕಾರ್ಯರೂಪಕ್ಕೆ ತರಬೇಕಾದರೆ, ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದರ ಹೊರತಾಗಿ ಬೇರೆ ಮಾರ್ಗವಿಲ್ಲ ಎಂದು ‘ಸುದರ್ಶನ ನ್ಯೂಸ್’ನ ಮುಖ್ಯ ಸಂಪಾದಕರಾದ ಶ್ರೀ. ಸುರೇಶ್ ಚವ್ಹಾಣಕೆ ಸ್ಪಷ್ಟವಾಗಿ ಹೇಳಿದರು. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಶಿವರಾಜ್ಯಾಭಿಷೇಕ ದಿನ : ಹಿಂದೂ ರಾಷ್ಟ್ರ ಸಂಕಲ್ಪ-ದಿನ’, ಈ ‘ವಿಶೇಷ ಆನ್‌ಲೈನ್ ಚರ್ಚಾಗೋಷ್ಟಿ’ಯಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಸಮಿತಿಯ ಜಾಲತಾಣ Hindujagruti.org, ಯೂಟ್ಯೂಬ್ ಮತ್ತು ಟ್ವಿಟರ್‌ನಲ್ಲಿ ೩೨೦೨ ಜನರು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಇವರು, ಛತ್ರಪತಿ ಶಿವರಾಯರು ಐದು ಇಸ್ಲಾಮಿಕ್ ಆಕ್ರಮಣಕಾರರನ್ನು ಸೋಲಿಸಲು ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಅವರು ರಾಜ್ಯಾಭಿಷೇಕದ ಮೂಲಕ ಭಾಷೆಯನ್ನು ಪುನರುಜ್ಜೀವಿಸಿದರು. ತಮ್ಮ ರಾಜ್ಯದ ವ್ಯವಹಾರಗಳನ್ನು ಸಂಸ್ಕೃತದಲ್ಲಿ ನಡೆಸಿದರು. ಅವರು ರಾಜ್ಯ ಸ್ಥಾಪನೆಗೆ ಧರ್ಮ ಸ್ಥಾಪನೆಯ ರೂಪವನ್ನು ನೀಡಿದರು. ತದ್ವಿರುದ್ಧ ೧೯೪೭ರಲ್ಲಿ, ನಮಗೆ ಸ್ವಾತಂತ್ರ್ಯ ಸಿಕ್ಕಿತು; ಆದರೆ ರಾಜ್ಯವನ್ನು ಸ್ಥಾಪಿಸಲಾಗಿಲ್ಲ ಎಂದು ಹೇಳಬೇಕಾಗುತ್ತದೆ; ಏಕೆಂದರೆ ಕ್ರಾಂತಿಕಾರಿಗಳನ್ನು ಹತ್ತಿಕ್ಕಲು ಬ್ರಿಟಿಷರು ತಂದ ೧೮೬೦ ರ ‘ಇಂಡಿಯನ್ ಪೀನಲ್ ಕೋಡ್’ ಇನ್ನೂ ಜಾರಿಯಲ್ಲಿದೆ. ಭಾರತದ ಮೇಲೆ ಶಾಶ್ವತವಾಗಿ ರಾಜ್ಯವನ್ನಾಳಲು ತಂದಿದ್ದ ‘ಇಂಡಿಯನ ಗವರ್ನರ‍್ಸ ಆಕ್ಟ ೧೯೩೫ ‘ಅನ್ನು ಸಂವಿಧಾನದ ಮುನ್ನುಡಿಯಲ್ಲಿ ಸೇರಿಸಲಾಗಿದೆ. ‘ಗುರುಕುಲ ಪರಂಪರೆ’ಯನ್ನು ಕೊನೆಗೊಳಿಸಲು ಕಾಯ್ದೆಯ ಮುಖಾಂತರ ಜಾರಿಗೆ ತರಲಾದ ಮೆಕಾಲೆಯ ಶಿಕ್ಷಣ ಪದ್ದತಿ ಇನ್ನೂ ಜಾರಿಯಲ್ಲಿದೆ. ಅರಬ ಮತ್ತು ಆಂಗ್ಲ ಆಕ್ರಮಣಕಾರರು ನಮ್ಮ ರಸ್ತೆಗಳಿಗೆ ನೀಡಿರುವ ಹೆಸರುಗಳನ್ನು ನಾವು ಬದಲಾಯಿಸಿಲ್ಲ ಎಂದು ಶ್ರೀ. ಚೇತನ ಹೇಳಿದರು. ವಿಶ್ವ ಹಿಂದೂ ಪರಿಷತ್ತಿನ ಪಶ್ಚಿಮ ಮಹಾರಾಷ್ಟ್ರದ ಕಾರ್ಯನಿರ್ವಾಹಕ ಸದಸ್ಯರಾದ ಶ್ರೀ. ವಿವೇಕ ಸಿನ್ನರಕರ ಇವರು,೪೫೦ ವರ್ಷಗಳ ಹಿಂದೆ ಛತ್ರಪತಿ ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ಯದ ಸ್ಥಾಪನೆ ಮಾಡಲು ಯಾರ ಬಳಿಯೂ ಕೇಳಲು ಹೋಗಲಿಲ್ಲ. ಔರಂಗಜೇಬ, ಆದಿಲ್‌ಶಾ, ಕುತಬಶಾಹ ಮುಂತಾದ ಮೊಘಲರ ಅನುಮತಿ ಪಡೆಯಲಿಲ್ಲ. ಬೆರಳೆಣಿಕೆಯಷ್ಟು ಜನರನ್ನು ಒಟ್ಟುಗೂಡಿಸಿ ಪ್ರತಿಜ್ಞೆ ಮಾಡಿದರು. ನಂತರ ಅವರು ತಮ್ಮದೇ ಆದ ಸೈನ್ಯವನ್ನು, ಶಸ್ತ್ರಾಗಾರ, ನೌಕಾಪಡೆಯೊಂದಿಗೆ ಹಿಂದೂಗಳ ಧ್ವಂಸ ಮಾಡಲಾದ ದೇವಾಲಯಗಳನ್ನು ಮತ್ತು ಹಿಂದವೀ ಸ್ವರಾಜ್ಯವನ್ನು ನಿರ್ಮಿಸಿದರು. ಆ ಆದರ್ಶವನ್ನು ಹಿಂದೂಗಳು ಅಳವಡಿಸಿಕೊಳ್ಳಬೇಕು. ಇಂದಿಗೂ, ನಾವು ಈ ಒಂದು ಗುರಿಯೊಂದಿಗೆ ಒಗ್ಗೂಡಿದರೆ, ನಾವು ಈ ದೇಶವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬಹುದು. ಇದನ್ನು ಮಾಡುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ.