ಫೇಸಬುಕ್‌ನ ವೈಚಾರಿಕ ಭಯೋತ್ಪಾದನೆ !

ಮಾರ್ಕ್ ಝುಕೆರಬರ್ಗ ಸಂಸ್ಥಾಪಕರಾಗಿರುವ ಫೇಸಬುಕ್‌ನ ಹೆಜ್ಜೆಗಳು ಅಡ್ಡದಾರಿಯನ್ನು ಹಿಡಿಯುತ್ತಿವೆಯೇ ಎಂಬ ಸಂದೇಹ ಮೂಡುವಂತಹ ಘಟನೆಗಳು ಅವರಿಂದ ಘಟಿಸುತ್ತಿವೆ.  ಫೇಸಬುಕ್ ೨ ವರ್ಷಗಳ ಹಿಂದೆ ಹಿಂದೂ ಜನಜಾಗೃತಿ ಸಮಿತಿಯ ಫೇಸಬುಕ್ ಪುಟವನ್ನು ನಿರ್ಬಂಧಿಸಿತ್ತು. ಕೆಲವು ದಿನಗಳ ಹಿಂದೆ ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವ ಹಿಂದೂ ಜನಜಾಗೃತಿ ಸಮಿತಿಯ ‘ಹಿಂದೂ ಅಧಿವೇಶನ ಈ ಪುಟವನ್ನು ನಿರ್ಬಂಧಿಸಿತ್ತು. ಈ ಪುಟದ ಫಾಲೋ ವರ್ಸ್ ಸಂಖ್ಯೆ ೧೪ ಲಕ್ಷದ ೪೫ ಸಾವಿರಗಳಷ್ಟಿದೆ. ಇತ್ತೀಚೆಗೆ ಕೆಲವು ದಿನಗಳ ಹಿಂದೆ ಸಮಿತಿಯ ಹಿಂದಿ ಭಾಷೆಯ ಪುಟವನ್ನು ಸಹ ನಿರ್ಬಂಧಿಸಲಾಗಿದೆ. ಇದಲ್ಲದೇ ಸನಾತನ ಸಂಸ್ಥೆಯ ಪುಟ ಗಳನ್ನೂ ನಿರ್ಬಂಧಿಸಲಾಗಿದೆ. ಅಲ್ಲದೇ ಸನಾತನ ಸಂಸ್ಥೆಯ ಸಾತ್ತ್ವಿಕ ಉತ್ಪಾದನೆಗಳನ್ನು ‘ಆನ್‌ಲೈನ್ ವಿತರಣೆ ಮಾಡುವ ‘ಸನಾತನ ಶಾಪ್ ಈ ಪುಟವನ್ನು ಸಹ ನಿರ್ಬಂಧಿಸಿದೆ. ಇವೆಲ್ಲ ಪುಟಗಳು ಹಿಂದೂಗಳಿಗೆ ಧರ್ಮಶಿಕ್ಷಣವನ್ನು ನೀಡುವ ಉದಾತ್ತ ಕಾರ್ಯವನ್ನು ಮಾಡುತ್ತಿರುವಾಗ ಮತ್ತು ಅವುಗಳಲ್ಲಿ ಯಾವುದೇ ಆಕ್ಷೇಪಾರ್ಹ ಲೇಖನಗಳು ಇಲ್ಲದಿರುವಾಗ ಯಾವುದೇ ಮುನ್ಸೂಚನೆಯನ್ನು ನೀಡದೇ ಈ ಪುಟಗಳನ್ನು ನಿರ್ಬಂಧಿಸಿದೆ. ಇವು ಸಾಮ್ಯತೆವಾಗಿವೆ. ಆದುದರಿಂದ ಇದು ‘ವೈಚಾರಿಕ ಭಯೋತ್ಪಾದನೆಯೇ ಆಗಿದೆ.

ಈ ವೈಚಾರಿಕ ಭಯೋತ್ಪಾದನೆಗೆ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಗಳಷ್ಟೇ ಬಲಿಯಾಗಿವೆ ಎಂದೇನಿಲ್ಲ. ಅನೇಕ ಹಿಂದುತ್ವನಿಷ್ಠರು, ಹಿಂದುನಿಷ್ಠ ಸಂಘಟನೆಗಳಿಗೆ ಅದರ ಬಿಸಿ ತಟ್ಟಿದೆ. ಹಿಂದುತ್ವನಿಷ್ಠರ ತಪ್ಪೇನು ಎಂಬುದೂ ಸ್ಪಷ್ಟವಾಗಿಲ್ಲ. ಹೀಗಿರುವಾಗ ಹೀಗೆ ಮಾಡಿ ಫೇಸಬುಕ್ ಏನು ಸಾಧಿಸಲು ಪ್ರಯತ್ನಿಸುತ್ತಿದೆ ಎಂಬುದೂ ತಿಳಿಯುತ್ತಿಲ್ಲ. ಫೇಸಬುಕ್‌ನ ಸಂಸ್ಥಾಪಕ ಮಾರ್ಕ ಝುಕೆರಬರ್ಗ ಸ್ವತಃ ಜ್ಯೂ ಧರ್ಮದವರಾಗಿದ್ದಾರೆ. ಜ್ಯೂ ಧರ್ಮದವರು ತಮ್ಮ ಅಸ್ತಿತ್ವಕ್ಕಾಗಿ ಬಹಳ ಸಂಘರ್ಷ ಮಾಡಿದ್ದಾರೆ. ಜಗತ್ತಿನಲ್ಲಿ ಹಿಂದೂ ಧರ್ಮದ ಬಳಿಕ ಅತ್ಯಧಿಕ ನರಮೇಧಕ್ಕೊಳಗಾದವರೆಂದರೆ ಜ್ಯೂ ವಂಶದವರಾಗಿದ್ದಾರೆ. ಈಗಲೂ ಜ್ಯೂಗಳ ದೇಶವಾಗಿರುವ ಇಸ್ರೈಲ್ ತನ್ನ ಅಸ್ತಿತ್ವಕ್ಕಾಗಿ ಅಕ್ಕಪಕ್ಕದ ದೊಡ್ಡ ದೊಡ್ಡ ಅರಬ-ಮುಸ್ಲಿಂ ದೇಶಗಳೊಂದಿಗೆ ಹೋರಾಡುತ್ತಿದೆ. ಜ್ಯೂಗಳಲ್ಲಿ ಇಸ್ರೈಲ್‌ನ ಅಸ್ತಿತ್ವಕ್ಕಾಗಿ, ಜ್ಯೂ ಸಂಸ್ಕೃತಿಯ ರಕ್ಷಣೆಗಾಗಿ ಎಷ್ಟು ಜನಜಾಗೃತಿ ಮಾಡಬೇಕಾಗಿದೆ ಎನ್ನುವುದು ಝುಕೆರಬರ್ಗ ಇವರಿಗೆ ತಿಳಿದಿಲ್ಲವೇ? ಹೀಗಿರುವಾಗ ಫೇಸಬುಕ್‌ಗೆ ಸಹಿಷ್ಣು ಹಿಂದೂ ಸಂಸ್ಕೃತಿಯ ಪ್ರಸಾರ ಮತ್ತು ಪ್ರಚಾರ ಮಾಡುವ ವಿಷಯದಲ್ಲಿ ಏಕೆ ಇಂತಹ ವಿರೋಧ ? ಇದು ಅವರು ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುವುದು ಮತ್ತು ಒಂದು ರೀತಿಯಲ್ಲಿ ‘ಹುಂಬತನ ಆಗಿದೆ.

ಸಿಂಗಾಪುರದಿಂದ ಫೇಸಬುಕ್‌ನ ಕಣ್ಣು ತೆರೆಸುವಿಕೆ

ಸಿಂಗಾಪುರ ಸರಕಾರವು ಮನಸ್ಸಿಗೆ ಬಂದಂತೆ ವರ್ತಿಸುವ ಫೇಸಬುಕ್‌ನ  ವಿರುದ್ಧ ಅಲ್ಲಿಯ ಮುಖ್ಯಸ್ಥರನ್ನು ಸಿಂಗಾಪುರ ಸಂಸತ್ತಿಗೆ ಕರೆಸಿತು. ಅಲ್ಲಿಯ ಭಾರತೀಯ ವಂಶಜ ಸಚಿವರಾದ ಶ್ರೀ. ಷಣ್ಮುಗಮ್ ಇವರು ಫೇಸಬುಕ್ ಮುಖ್ಯಸ್ಥರಿಗೆ, “ನಿಮಗೆ ಸಿಂಗಾಪುರ ಸರಕಾರದ ನಿಯಮಗಳನ್ನು ಪಾಲಿಸಲೇ ಬೇಕಾಗುವುದು, ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ?  ಎಂದು ಕೇಳಿದರು. ಆಗ ಫೇಸಬುಕ್ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಮಂಡಿಸದೇ, “ನಾವು ಅನೇಕ ದೇಶಗಳಲ್ಲಿ ಕಾರ್ಯವನ್ನು ಮಾಡುತ್ತೇವೆ. ಅನೇಕ ದೇಶಗಳು ನಮ್ಮನ್ನು ಸ್ವೀಕರಿಸಿವೆ. ಇಲ್ಲಿಯವರೆಗೆ ಎಲ್ಲಿಯೂ ನಮಗೆ ನಿಯಮಗಳ ಕುರಿತು ಪ್ರಶ್ನಿಸಿಲ್ಲ, ಹೀಗಿರುವಾಗ ಈಗೇಕೆ ವಿಚಾರಿಸಲಾಗುತ್ತಿದೆ ? ನಾವು ಸರಿಯಾದ ರೀತಿಯಲ್ಲಿಯೇ ಕಾರ್ಯವನ್ನು ನಿರ್ವಹಿಸುತ್ತಿದ್ದೇವೆ, ಎಂದು ಉದ್ಧಟತನದಿಂದ ಉತ್ತರಿಸಿದರು. ಆಗ ಶ್ರೀ. ಷಣ್ಮುಗಮ್ ಇವರು ತಕ್ಷಣವೇ ಸ್ಪಷ್ಟವಾಗಿ “ಇದರರ್ಥ ‘ನೀವು ಸಿಂಗಾಪುರದ ಕಾನೂನುಗಳನ್ನು ಗೌರವಿಸುವುದಿಲ್ಲ, ನೀವು ಸರಕಾರದ ನಿಯಂತ್ರಣದಲ್ಲಿ ಇರುವುದಿಲ್ಲ ಎಂದೇ ಆಗುತ್ತದೆ ಇದು ಸಾಧ್ಯವಿಲ್ಲ. ನಿಮಗೆ ಇಲ್ಲಿಯ ಕಾನೂನು ಗಳನ್ನು ಪಾಲಿಸಲೇ ಬೇಕಾಗುವುದು, ಇಲ್ಲವಾದರೆ ಸೂಕ್ತ ಕ್ರಮಗಳನ್ನು ಕೈಕೊಳ್ಳಲಾಗುವುದು, ಎಂದು ದೃಢವಾಗಿ ಬೆದರಿಸಿದರು. ಆಗ ಫೇಸಬುಕ್ ಮುಖ್ಯಸ್ಥರು ಹೆದರಿದರು ಮತ್ತು ಅವರು ಅಧ್ಯಕ್ಷರಲ್ಲಿ ಅಂಗಲಾಚಿ ಬೇಡಿಕೊಳ್ಳತೊಡಗಿದರು. ಶ್ರೀ. ಷಣ್ಮುಗಮ್ ಇವರು ಫೇಸಬುಕ್‌ನ ಸೊಕ್ಕನ್ನು ಸರಿಯಾಗಿ ಮುರಿದರು ಮತ್ತು ಅವರ ಆಂತರಿಕ ಉದ್ದೇಶವನ್ನು ಸ್ಪಷ್ಟಗೊಳಿಸಿದರು.

‘ನಾವು ಮಾಡಿದ್ದೇ ಕಾನೂನು !

೨೦೧೬ ರಲ್ಲಿ ಅಮೇರಿಕಾದಲ್ಲಾದ ಚುನಾವಣೆಯ ಸಮಯದಲ್ಲಿ ಫೇಸಬುಕ್‌ನ ಒಂದು ಬಹುದೊಡ್ಡ ಹಗರಣವು ಬಹಿರಂಗವಾಗಿತ್ತು. ಅದು ‘ಫೇಸಬುಕ್-ಕೇಂಬ್ರಿಜ್ ಎನಾಲಿಟಿಕಾ ಹಗರಣವೆಂದು ಪ್ರಸಿದ್ಧವಾಗಿದೆ. ‘ಕೇಂಬ್ರಿಜ್ ಎನಾಲಿಟಿಕಾ ಈ ಇಂಗ್ಲೆಂಡಿನಲ್ಲಿರುವ ಕಂಪನಿಗೆ ಫೇಸಬುಕ್ ಅವರ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಒದಗಿಸಿತ್ತು. ಈ ಮಾಹಿತಿಯನ್ನು ಅಮೇರಿಕೆಯ ರಾಜಕೀಯ ಕಾರಣಗಳಿಗಾಗಿ ಉಪಯೋಗಿಸಲು ಯೋಜಿಸಲಾಗಿತ್ತು. ಈ ಮಾಹಿತಿಯಲ್ಲಿ ಗ್ರಾಹಕರ ಇಷ್ಟವೇನು? ಒಲವು ಯಾರ ಕಡೆಗಿದೆ ? ಇತ್ಯಾದಿ ಮಾಹಿತಿಗಳಿದ್ದವು. ಯಾರಿಗೆ ಯಾರು ಮತವನ್ನು ಹಾಕುವವರಿದ್ದಾರೆ ? ಇತ್ಯಾದಿ ಮಾಹಿತಿಗಳು ಇದರಿಂದ ಬಹಿರಂಗವಾಗಿದ್ದವು. ಇದರಿಂದ ಗೌಪ್ಯತೆಯ ನಿಯಮಗಳ ಉಲ್ಲಂಘನೆಯಾಗಿತ್ತು. ಗ್ರಾಹಕರ ಮಾಹಿತಿಯನ್ನು ಕಂಪನಿಗೆ ಕೊಡುವಾಗ ಫೇಸಬುಕ್ ತನ್ನ ಗ್ರಾಹಕರಿಗೆ ಯಾವುದೇ ಕಲ್ಪನೆಯನ್ನು ನೀಡಿರಲಿಲ್ಲ. ಈ ‘ಡೇಟಾ ಕಳ್ಳತನದ ಬಗ್ಗೆ ಸಂಸ್ಥಾಪಕ ಝುಕೇರಬರ್ಗ ಇವರು ಪುನಃ ಪುನಃ ಕ್ಷಮೆ ಯಾಚನೆ ಮಾಡ ಬೇಕಾಯಿತು. ಹಾಗೆಯೇ ಅಮೇರಿಕೆಯು ಫೇಸಬುಕ್‌ಗೆ ೫೦೦ ಕೋಟಿ ಡಾಲರ ದಂಡ ವಿಧಿಸಿತು. ಇಂಗ್ಲೆಂಡ್ ಕೂಡ ಫೇಸಬುಕ್‌ಗೆ ೫೦ ಸಾವಿರ ಪೌಂಡ ದಂಡವನ್ನು ವಿಧಿಸಿತು. ಕೇಂಬ್ರಿಜ್ ಎನಾಲಿಟಿಕಾ ಕಂಪನಿಯ ಒಬ್ಬ ನೌಕರನು ಈ ಮಾಹಿತಿಯನ್ನು ನೀಡಿದ್ದರಿಂದ ಈ ಹಗರಣವು ಬಹಿರಂಗವಾಯಿತು; ಇಲ್ಲವಾದಲ್ಲಿ ಫೇಸಬುಕ್‌ನ ಅಪರಾಧಗಳು ಹೀಗೆಯೇ ಮುಂದುವರಿಯುತ್ತಿದ್ದವು. ಇದು ದೇಶದ ಆಂತರಿಕ ರಾಜಕೀಯದಲ್ಲಿ ಕೈಯಾಡಿಸಲು ಕದ್ದುಮುಚ್ಚಿ ಮಾಡಿದ ಪ್ರಯತ್ನವೇ ಆಗಿತ್ತು. ತಮಗೆ ಬೇಕಾಗಿರುವ ಒಬ್ಬ ವ್ಯಕ್ತಿಯನ್ನು ಒಂದು ದೇಶದಲ್ಲಿ ಉನ್ನತ ಹುದ್ದೆಯಲ್ಲಿ ಚುನಾಯಿಸಲು ಕೆಲವು ಸಂಸ್ಥೆಗಳು ಕಾರ್ಯನಿರತವಾಗಿರುತ್ತವೆ. ಫೇಸಬುಕ್ ಅದರದ್ದೇ ಒಂದು ಭಾಗವಾಗಿತ್ತು ಮತ್ತು ಈಗಲೂ ಕೂಡ ಇದ್ದಿರಬಹುದು.

ಫೇಸಬುಕ್ ಖರೀದಿಸಿರುವ ‘ವ್ಯಾಟ್ಸಆಪ್ ಕಂಪನಿಯು ಕೆಲವು ತಿಂಗಳುಗಳ ಹಿಂದೆ ತನ್ನ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿತು ಮತ್ತು ಅದರಿಂದ ವ್ಯಾಟ್ಸಆಪ್ ಉಪಯೋಗಿಸುವವರ ಗೌಪ್ಯತೆ ಬಹಿರಂಗಗೊಳ್ಳುವ ಸಾಧ್ಯತೆಯು ಉದ್ಭವಿಸಿತು. ‘ವ್ಯಾಟ್ಸ್‌ಆಪ್ ಅದನ್ನು ಉಪಯೋಗಿಸುವವರ ಮಾಹಿತಿಯನ್ನು ಉಪಯೋಗಿಸಬಹುದು, ಅಲ್ಲದೇ ‘ಯಾರಿಗೆ ಇದು ಒಪ್ಪಿಗೆಯಿಲ್ಲವೋ, ಅವರ ವ್ಯಾಟ್ಸ್‌ಆಪ್ ಶೀಘ್ರದಲ್ಲಿ ಸ್ಥಗಿತಗೊಳ್ಳುವುದು, ಎಂದೂ ಎಚ್ಚರಿಕೆಯನ್ನು ನೀಡಿತು. ಈ ವಿಷಯದಲ್ಲಿ ಕೇಂದ್ರವು ಕಠಿಣ ಕ್ರಮಗಳನ್ನು ತೆಗೆದುಕೊಂಡು ದೂರು ದಾಖಲಿಸಿತು. ಭಾರತೀಯ ವ್ಯಾಪಾರಿಗಳು ಕೇಂದ್ರಕ್ಕೆ ಫೇಸಬುಕ್ ಮತ್ತು ವ್ಯಾಟ್ಸ್‌ಆಪ್ ನ್ನು ನಿಷೇಧಿಸುವಂತೆ ಕೋರಿದರು. ಆಗ ಫೇಸಬುಕ್ ಮೆತ್ತಗಾಯಿತು ! ಫೇಸಬುಕ್ ವ್ಯಾಟ್ಸ್‌ಆಪ್ ಇವು ಸಾಮಾಜಿಕ ಮಾಧ್ಯಮಗಳಾಗಿದ್ದರೂ, ಅವು ಈಗ ಜನರ ಭಾವನೆಗಳಿಗೆ ಕೈಹಾಕತೊಡಗಿವೆ. ಆದುದರಿಂದ ಅವು ಸಂಬಂಧಪಟ್ಟ ದೇಶಗಳ ಕಾನೂನುಗಳನ್ನು ಪಾಲಿಸುವುದು ಆವಶ್ಯಕವಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಭಾರತೀಯ ನಾಗರೀಕರ ಗೌಪ್ಯತೆಗಿಂತ ಫೇಸಬುಕ್ ದೊಡ್ಡದಲ್ಲ. ಆವಶ್ಯಕತೆಯೆನಿಸಿದರೆ ಕೇಂದ್ರ ಸರಕಾರವು ಕಠಿಣ ಶಿಕ್ಷೆಯನ್ನು ವಿಧಿಸಿ ಅವರನ್ನು ಸರಿದಾರಿಗೆ ತರಬೇಕೆನ್ನುವುದು, ಭಾರತೀಯರ ಅಪೇಕ್ಷೆಯಾಗಿದೆ.