ರಾಜಸ್ಥಾನ ಉಚ್ಚ ನ್ಯಾಯಾಲಯದ ಆನ್‌ಲೈನ್ ಆಲಿಕೆಯ ಸಮಯದಲ್ಲಿ ಧೂಮಪಾನ ಮಾಡಿದ ಹಿರಿಯ ನ್ಯಾಯವಾದಿ ರಾಜಿವ ಧವನ್

ರಾಜಸ್ಥಾನ ಉಚ್ಚ ನ್ಯಾಯಾಲಯದ ಆನ್‌ಲೈನ್ ಆಲಿಕೆಯ ಸಮಯದಲ್ಲಿ ಧೂಮಪಾನ ಮಾಡುವ ಹಿರಿಯ ನ್ಯಾಯವಾದಿ ರಾಜೀವ ಧವನ್ ಇವರಿಗೆ ನೀಡಲಾಗಿದ್ದ ‘ಹಿರಿಯ’ ಈ ಗೌರವವನ್ನು ಹಿಂಪಡೆಯಬೇಕು, ಎಂಬ ಬೇಡಿಕೆಯ ಅರ್ಜಿಯೊಂದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿಹತ್ಯೆ ಮಾಡುವುದನ್ನು ನಿರ್ಬಂಧ ಹೇರಿ ! – ಗುಜರಾತ ಉಚ್ಚ ನ್ಯಾಯಾಲಯದಿಂದ ರಾಜ್ಯ ಸರಕಾರಕ್ಕೆ ಆದೇಶ

ನವ ದೆಹಲಿ – ಬಕರಿ ಈದ್ ಮುಂಚೆ ಗುಜರಾತ ಉಚ್ಚ ನ್ಯಾಯಾಲಯವು ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಹತ್ಯೆಯ ಮೇಲೆ ನಿರ್ಬಂಧ ಹೇರುವಂತೆ ಆದೇಶ ನೀಡಿದೆ. ಇದರ ಬಗ್ಗೆ ರಾಜಕೋಟದಲ್ಲಿಯ ನಿವಾಸಿಯಾಗಿರುವ ಯಶಶಾಹನು ಅರ್ಜಿಯನ್ನು ಸಲ್ಲಿಸಿದ್ದನು. ಈ ಅರ್ಜಿಯಲ್ಲಿ ಆತ, ‘ಪ್ರತಿವರ್ಷ ಬಕ್ರೀದ್‌ಗೆ ರಸ್ತೆ, ಪಾದಚಾರಿ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಹತ್ಯೆ ಮಾಡಲಾಗುತ್ತದೆ. ಇದರಿಂದ ಗಂಭೀರ ಕಾಯಿಲೆಗಳು ಉಲ್ಬಣಿಸಬಹುದು. ಜುಲೈ ೩೧ ಹಾಗೂ ಆಗಸ್ಟ್ ೧ ಈ ೨ ದಿನಗಳಲ್ಲಿ ಮೇಕೆ, ಕೋಣ, ಕುರಿಗಳ ಮೇಲೆ … Read more

ಹಿಂದೂಗಳ ದೇವಸ್ಥಾನದ ಪಾತ್ರೆ ಹಾಗೂ ದೀಪಗಳನ್ನು ಹರಾಜು ಮಾಡುವ ಕೇರಳ ಸರಕಾರದ ಆದೇಶವನ್ನು ರದ್ದು ಪಡಿಸಿದ ಉಚ್ಚ ನ್ಯಾಯಾಲಯ

‘ದೇವಸ್ಥಾನದ ದೀಪ ಹಾಗೂ ಪಾತ್ರೆಗಳನ್ನು ಹರಾಜು ಮಾಡಬಾರದೆಂದು ಆದೇಶವನ್ನು ಕೇರಳದ ಉಚ್ಚ ನ್ಯಾಯಾಲಯಯು ಸರಕಾರಕ್ಕೆ ನೀಡಿದೆ. ‘ಹಿಂದೂ ಸೇವಾ ಕೇಂದ್ರ’ವು ದಾಖಲಿಸಿದೆ ಅರ್ಜಿಯ ಮೇಲೆ ಈ ನಿರ್ಣಯವನ್ನು ನೀಡಿದೆ. ಕೇರಳದ ಉಚ್ಚ ನ್ಯಾಯಾಲಯವು ‘ಮಲಬಾರ ದೇವಸ್ವಮ್ ಬೋರ್ಡ್’ನ ಪ್ರತಿಯೊಂದು ದೇವಸ್ಥಾನದ ನಿಧಿಯಿಂದ ೧ ಲಕ್ಷ ರೂಪಾಯಿ ‘ಮುಖ್ಯಮಂತ್ರಿ ಸಹಾಯ ನಿಧಿ’ಗೆ ನೀಡುವ ನಿರ್ಧಾರವನ್ನೂ ತಡೆಹಿಡಿಯಲಾಗಿದೆ.

ರಾಜಸ್ಥಾನ ಉಚ್ಚ ನ್ಯಾಯಾಲಯದ ಪರಿಸರದಲ್ಲಿರುವ ಮನು ಋಷಿಗಳ ಪ್ರತಿಮೆಗೆ ಭದ್ರತೆಯನ್ನು ನೀಡಿ ! – ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಲ್ಲಿ ಬೇಡಿಕೆ

ಇಲ್ಲಿಯ ಹಿಂದುಳಿದವರ್ಗದವರಿಂದ ರಾಜಸ್ಥಾನ ಉಚ ನ್ಯಾಯಾಲಯದ ಪರಿಸರದಲ್ಲಿರುವ ಮನು ಋಷಿಗಳ ಪ್ರತಿಮೆಯನ್ನು ಧ್ವಂಸ ಮಾಡುವಂತೆ ಆಗ್ರಹಿಸಿದ್ದಾರೆ. ಇದಕ್ಕೆ ‘ಯುಥ್ ಫಾರ್ ಇಕ್ವಲಿಟಿ’ಯು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಇಂದ್ರಜಿತ ಮಹಂತಿಯವರಲ್ಲಿ ಈ ಪ್ರತಿಮೆಗೆ ಭದ್ರತೆಯನ್ನು ನೀಡುವಂತೆ ಆಗ್ರಹಿಸಿದ್ದಾರೆ.

ಚಾರಧಾಮ್ ಮತ್ತು ೫೧ ದೇವಸ್ಥಾನಗಳ ಸರಕಾರಿಕರಣ ಯೋಗ್ಯವೇ ಆಗಿದೆ ! – ಉತ್ತರಾಖಂಡದಲ್ಲಿ ಬಿಜೆಪಿ ಸರಕಾರದಿಂದ ಉಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾಪತ್ರ

ಚಾರಧಾಮ್ ಮತ್ತು ೫೧ ದೇವಸ್ಥಾನಗಳ ಸರಕಾರಿಕರಣ ಯೋಗ್ಯವೇ ಆಗಿದೆ ಎಂದು ಉತ್ತರಾಖಂಡದ ಭಾಜಪ ಸರಕಾರವು ಉತ್ತರಾಖಂಡ ಉಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾಪತ್ರ ಸಲ್ಲಿಸಿದೆ. ಭಾಜಪದ ಹಿರಿಯ ನಾಯಕ ಹಾಗೂ ರಾಜ್ಯಸಭೆಯ ಸಂಸದರಾದ ಡಾ. ಸುಬ್ರಮಣಿಯನ್ ಸ್ವಾಮಿಯವರು ಈ ಸರಕಾರಿಕರಣದ ವಿರುದ್ಧ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯ ಬಗ್ಗೆ ನ್ಯಾಯಾಲಯವು ಸರಕಾರದ ಬಳಿ ತಮ್ಮ ಅಭಿಪ್ರಾಯವ ಕೋರಿತ್ತು.

ಸಂಚಾರ ನಿಷೇಧದ ಸಮಯದಲ್ಲಿ ಧ್ವನಿವರ್ಧಕದಿಂದ ಅಜಾನ್ ಕೂಗುವುದರ ನಿಷೇಧ ಸೂಕ್ತ ! – ಅಲಹಾಬಾದ್ ಉಚ್ಚ ನ್ಯಾಯಾಲಯ

ಧ್ವನಿವರ್ಧಕ ಮೇಲಿನ ನಿಷೇಧವನ್ನು ಗಾಜಿಪುರದ ಬಹುಜನ ಸಮಾಜ ಪಕ್ಷದ ಸಂಸದ ಅಫ್ಜಲ್ ಅನ್ಸಾರಿ ವಿರೋಧಿಸಿದ್ದರು. “ರಂಜಾನ್ ಸಮಯದಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕಗಳಿಂದ ಅಜಾನ್ ಕೊಡದಿರುವುದು ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅವರು ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದು ಇದರಲ್ಲಿ ಹಸ್ತಕ್ಷೇಪವನ್ನು ಮಾಡಬೇಕೆಂದು ಆಗ್ರಹಿಸಿದ್ದರು.