ಕೇರಳದ ‘ಲಲಿತ ಕಲಾ ಅಕಾಡೆಮಿ’ಯಿಂದ ದೇಶ, ಹಿಂದೂ ಧರ್ಮ ಮತ್ತು ಗೋವಿನ ಅಪಮಾನ ಮಾಡುವ ವ್ಯಂಗ್ಯಚಿತ್ರಕ್ಕೆ ಪ್ರಶಸ್ತಿ ನೀಡಿರುವ ಪ್ರಕರಣ
ತಿರುವನಂತಪುರಂ (ಕೇರಳ) – ಕೇರಳದ ‘ಲಲಿತ ಕಲಾ ಅಕಾಡೆಮಿ’ಯು ದೇಶ, ಹಿಂದೂ ಧರ್ಮ ಮತ್ತು ಗೋವಿನ ಅಪಮಾನ ಮಾಡುವ ಒಂದು ವ್ಯಂಗ್ಯ ಚಿತ್ರಕ್ಕೆ 25 ಸಾವಿರ ರೂಪಾಯಿಯ ಪ್ರಶಸ್ತಿ ನೀಡಿ ಸನ್ಮಾನ ಮಾಡಿದೆ. ಇದರ ವಿರುದ್ಧ ಕೇರಳದ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ ನಂತರ ನ್ಯಾಯಾಲಯವು `ಲಲಿತ ಕಲಾ ಅಕಾಡೆಮಿ’ ಗೆ ಈ ವಿಷಯದಲ್ಲಿ ತಮ್ಮ ವಾದ ಮಂಡಿಸಲು ನೋಟಿಸ್ ಜಾರಿಗೊಳಿಸಿದೆ. `ಲಲಿತ ಕಲಾ ಅಕಾಡೆಮಿ’ ಈ ಸಂಸ್ಥೆಯು ಕೇರಳ ರಾಜ್ಯದಲ್ಲಿನ ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಯಾಗಿದೆ.
Kerala High Court Issues Notice On Plea Challenging Kerala Lalitakala Akademi Recognition To Cartoon @hannah_mv_ https://t.co/mcyBgQIP82
— Live Law (@LiveLawIndia) November 23, 2021
ಅರ್ಜಿದಾರರು ಅರ್ಜಿಯಲ್ಲಿ `ಈ ವ್ಯಂಗ್ಯಚಿತ್ರವು ಭಾರತದ ಅಪಮಾನ ಮಾಡುತ್ತದೆ. ಈ ವ್ಯಂಗ್ಯಚಿತ್ರವನ್ನು ಭಾರತದಲ್ಲಿ ಕೊರೋನಾ ಮಹಾಮಾರಿಯಿಂದಾಗಿ ಅನೇಕರ ಮೃತ್ಯುವಾದಾಗ ಹಾಗೂ ನಾಗರಿಕರು ಮಾನಸಿಕ ಮತ್ತು ಆರ್ಥಿಕ ಸಂಘರ್ಷದ ಸ್ಥಿತಿಯಲ್ಲಿರುವಾಗ ಪ್ರಕಾಶಿಸಲಾಗಿತ್ತು. ಈ ವ್ಯಂಗ್ಯಚಿತ್ರವು ಉದ್ದೇಶಪೂರ್ವಕವಾಗಿ ಮಾಡಿರುವ ಅತಿಶಯೋಕ್ತಿಯಾಗಿದೆ. ಸಾರ್ವಜನಿಕ ವಿಕೃತಿಯನ್ನು ನಿರ್ಮಿಸಲು ಈ ಚಿತ್ರವನ್ನು ಬಿಡಿಸಲಾಗಿದೆ. ಈ ಸಂಸ್ಥೆಯು ವ್ಯಂಗ್ಯಚಿತ್ರಕ್ಕೆ ನೀಡಿರುವ ಪ್ರಶಸ್ತಿಯನ್ನು ಹಿಂಪಡೆಯಬೇಕು’ ಎಂದು ಹೇಳಲಾಗಿದೆ.
ವ್ಯಂಗ್ಯಚಿತ್ರದಲ್ಲಿ ಏನಿದೆ ?
ಈ ವ್ಯಂಗ್ಯಚಿತ್ರದಲ್ಲಿ ಕೊರೋನಾದ ಬಗ್ಗೆ ಜಾಗತಿಕ ಸಮ್ಮೇಳನ ನಡೆಯುತ್ತಿದ್ದು ಅದರಲ್ಲಿ ಅಮೇರಿಕಾ, ಇಂಗ್ಲೆಂಡ್, ಚೀನಾ ಮತ್ತು ಭಾರತದ ಪ್ರತಿನಿಧಿಗಳು ಕುಳಿತಿದ್ದಾರೆ. ಅದರಲ್ಲಿ ಭಾರತದ ಪ್ರತಿನಿಧಿ ಎಂದು ಗೋವನ್ನು ತೋರಿಸಲಾಗಿದೆ. ಗೋವಿಗೆ ಭಗವಾವಸ್ತ್ರವನ್ನು ಹಾಕಲಾಗಿದೆ. ಇದನ್ನು ನೋಡಿ ಇತರ ದೇಶಗಳ ಪ್ರತಿನಿಧಿಗಳು ಭಾರತದ ಕಡೆಗೆ ಆಶ್ಚರ್ಯದಿಂದ ನೋಡುತ್ತಿದ್ದಾರೆ. ಈ ಚಿತ್ರಕ್ಕೆ `ಕೋವಿಡ್-19 ಇನ್ ಇಂಡಿಯಾ’ ಎಂಬ ಹೆಸರನ್ನು ನೀಡಲಾಗಿದೆ. ಈ ವ್ಯಂಗ್ಯಚಿತ್ರವನ್ನು ಕೇರಳದ ಪೊನ್ನುರುನ್ನಿಯಲ್ಲಿರುವ ಅನೂಪ ರಾಧಾಕೃಷ್ಣನ ಎಂಬ ವ್ಯಕ್ತಿಯು ಬಿಡಿಸಿದ್ದಾನೆ. |